ಬೆಂಗಳೂರು: ಐದು ನಗರ ಪಾಲಿಕೆಗಳ ಬಜೆಟ್ಗೆ ಅನುಮೋದನೆ ನೀಡುವ ಜೊತೆಗೆ, ರಾಜ್ಯದಾದ್ಯಂತ ನಡೆಯುವ ಕೆಂಪೇಗೌಡ ಜಯಂತಿ ಆಚರಣೆ, ಭವನ ನಿರ್ಮಾಣ, ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಪ್ರಾಧಿಕಾರಕ್ಕೆ ಹಣ ನೀಡುವಂತೆ ಸರ್ಕಾರ ಸೂಚಿಸಿದೆ.

ರಾಜ್ಯ ಎಲ್ಲ ತಾಲ್ಲೂಕುಗಳಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ, ಬೆಂಗಳೂರು ವಕೀಲರ ಸಂಘದ ಭವನ ನಿರ್ವಹಣೆ, ತುಮಕೂರು, ಮಾಗಡಿಯಲ್ಲಿ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ನಗರ ಪಾಲಿಕೆಗಳು ಹಣ ನೀಡಬೇಕೆಂದು ಮೊತ್ತವನ್ನು ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ರಾಜ್ಯ ಸರ್ಕಾರ ಪ್ರತಿ ವರ್ಷ ನೀಡುವ ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯ ₹3 ಸಾವಿರ ಕೋಟಿ ಅನುದಾನದಲ್ಲಿ, ₹2,199 ಕೋಟಿಯನ್ನು ಐದು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿದ್ದು, ಉಳಿದ ಹಣದಲ್ಲಿ, ₹600 ಕೋಟಿಯನ್ನು ಬಿ–ಸ್ಮೈಲ್ ಸಂಸ್ಥೆಗೆ ಹಾಗೂ ಬಿಎಸ್ಡಬ್ಲ್ಯುಎಂಎಲ್ಗೆ ₹200.01 ಕೋಟಿಯನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ಹಣಕಾಸು ಆಯೋಗದ ₹250 ಕೋಟಿ ವಿಶೇಷ ಅನುದಾನವನ್ನು ನಾಲ್ಕು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ.

ಐದು ನಗರ ಪಾಲಿಕೆಗಳ ಪರವಾಗಿ ಬಿ–ಸ್ಮೈಲ್ ವತಿಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ವಿಳಂಬ ಮಾಡದೆ, ವಾಸ್ತವಿಕ ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೂ (ಬಿಎಸ್ಡಬ್ಲ್ಯುಎಂಎಲ್) ಅನುದಾನವನ್ನು ಪ್ರತಿ ತಿಂಗಳು ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ.

ವಾರ್ಡ್ಗೆ ₹2.5 ಲಕ್ಷ: ಐದು ನಗರ ಪಾಲಿಕೆಗಳು ಪ್ರತಿ ವಾರ್ಡ್ಗಳ ನಿರ್ವಹಣೆಗೆ ತಲಾ ₹5 ಲಕ್ಷವನ್ನು ಬಜೆಟ್ನಲ್ಲಿ ಮೀಸಲಿರಿಸಿದ್ದವು. ಅದನ್ನು ಪರಿಷ್ಕರಿಸಿರುವ ನಗರಾಭಿವೃದ್ಧಿ ಇಲಾಖೆ, ಪ್ರತಿ ವಾರ್ಡ್ಗೆ ₹2.5 ಲಕ್ಷಕ್ಕೆ ಮಿತಿಗೊಳಿಸಿದೆ.

ಬಿಬಿಎಂಪಿ ಅವಧಿಯಲ್ಲಿ ಉಸ್ತುವಾರಿ ಸಚಿವರ ವಿವೇಚನಾ ನಿಧಿಯಡಿ ₹360 ಕೋಟಿ ನಿಗದಿಪಡಿಸಲಾಗಿತ್ತು. ಈ ಅನುದಾನದಲ್ಲಿ ₹298.40 ಕೋಟಿಯನ್ನು ಬಿಎಸ್ಡಬ್ಲ್ಯುಎಂಎಲ್ಗೆ ಹಂಚಿಕೆ ಮಾಡಿ, ಕ್ರಿಯಾಯೋಜನೆಗೆ ಅನುಮತಿ ನೀಡಲಾಗಿತ್ತು. ಈ ಕಾಮಗಾರಿಗಳಿಗೆ ಈ ಸಾಲಿನಲ್ಲಿ ಪ್ರತಿ ನಗರ ಪಾಲಿಕೆ ₹59.68 ಕೋಟಿಯನ್ನು ಪ್ರತ್ಯೇಕವಾಗಿ ಬಿಎಸ್ಡಬ್ಲ್ಯುಎಂಎಲ್ಗೆ ಬಿಡುಗಡೆ ಮಾಡಬೇಕು.

ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳ ಪಾವತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಗರ ಪಾಲಿಕೆಗಳು ಬಜೆಟ್ನಲ್ಲಿ ತಲಾ ₹85 ಕೋಟಿ ಮೀಸಲಿರಿಸಿದ್ದವು. ಈ ಮೊತ್ತವನ್ನು ₹75 ಕೋಟಿಗೆ ಮಿತಿಗೊಳಿಸಿ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.