ಹೆಸರು: ಕೆ.ಎಚ್.ಮುನಿಯಪ್ಪ

ಕ್ಷೇತ್ರ: ದೇವನಹಳ್ಳಿ (ಎಸ್.ಸಿ ಮೀಸಲು) (ಬೆಂಗಳೂರು ಗ್ರಾಮಾಂತರ)

ವಿದ್ಯಾರ್ಹತೆ: ಕಾನೂನು ಪದವೀಧರ

ವಯಸ್ಸು: 78 ವರ್ಷ

ಜಾತಿ ಮತ್ತು ಒಳಜಾತಿ: ಪರಿಶಿಷ್ಟ ಜಾತಿ (ಎಡಗೈ)

ಎಷ್ಟನೇ ಬಾರಿಗೆ ಶಾಸಕ: ಎರಡು ಬಾರಿ

ಹಿಂದೆ ನಿರ್ವಹಿಸಿದ ಖಾತೆ: ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು. ಕೇಂದ್ರದಲ್ಲಿ ಹಲವಾರು ಖಾತೆ ನಿರ್ವಹಿಸಿದ ಅನುಭವ ಇದೆ.

ಮುನಿಯಪ್ಪ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯವರು. ತಾಲ್ಲೂಕು ಪಂಚಾಯಿತಿ ಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಆರಂಭದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿದ್ದರು.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಸಂಸದರಾಗಿದ್ದಾರೆ. 1991ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2019ರ ಚುನಾವಣೆಯಲ್ಲಿ ಎಸ್. ಮುನಿಸ್ವಾಮಿ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋತಿದ್ದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರು 4,631 ಮತಗಳಿಂದ ಜೆಡಿಎಸ್ನ ಎಲ್.ಎನ್. ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಹತ್ತು ವರ್ಷ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಅಪಾರ ಆಡಳಿತ ಅನುಭವ ಹೊಂದಿರುವ ಹಿರಿಯ ರಾಜಕಾರಣಿ ಕೆ.ಎಚ್.ಮುನಿಯಪ್ಪ ಸಿದ್ದರಾಮಯ್ಯ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು. ಇದೀಗ ಎರಡನೇ ಬಾರಿ ಶಾಸಕರಾಗಿ ಮಂತ್ರಿ ಮಂಡಲ ಸೇರಿಕೊಂಡಿದ್ದಾರೆ.

ಅವರ ಪುತ್ರಿ ರೂಪಕಲಾ ಎಂ.ಶಶಿಧರ್ ಕೋಲಾರ ಜಿಲ್ಲೆಯ ಕೆಜಿಎಫ್ ಮೀಸಲು ಕ್ಷೇತ್ರದಲ್ಲಿ ಶಾಸಕಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.