ಬೆಂಗಳೂರು: ಮಧುಮೇಹ, ಅಧಿಕ ರಕ್ತದೊತ್ತಡ, ಬದಲಾದ ಜೀವನಶೈಲಿ ಸೇರಿ ವಿವಿಧ ಕಾರಣಗಳಿಂದ ಮೂತ್ರಪಿಂಡ (ಕಿಡ್ನಿ) ಸಮಸ್ಯೆಗೆ ಒಳಪಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೂತ್ರಪಿಂಡದ ವೈಫಲ್ಯಕ್ಕೆ ಒಳಗಾದವರಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಅಂಗಾಂಗ ಕಸಿಗೆ ಎದುರು ನೋಡುತ್ತಿದ್ದಾರೆ.

ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜೀವಸಾರ್ಥಕತೆ ಸಂಸ್ಥೆಯು ಅಂಗಾಂಗಗಳ ಕೊರತೆ ನೀಗಿಸಲು ಶ್ರಮಿಸುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಪಡೆಯಲಾದ ಅಂಗಾಂಗಗಳನ್ನು ಸಂಸ್ಥೆಯಡಿ ಹೆಸರು ನೋಂದಾಯಿಸಿದವರಿಗೆ ಒದಗಿಸಲಾಗುತ್ತಿದೆ. ಆದರೆ, ದಾನಿಗಳ ಕೊರತೆ ಹಾಗೂ ಹೊಂದಾಣಿಕೆಯಾಗುವ ಅಂಗಾಂಗಗಳು ಸಿಗದ ಕಾರಣ ಹಲವರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಮೂತ್ರಪಿಂಡ ವೈಫಲ್ಯದಂತಹ ಪ್ರಕರಣಗಳಲ್ಲಿ ಕುಟುಂಬಸ್ಥರು ಅಥವಾ ಸಂಬಂಧಿಗಳು ಅಂಗಾಂಗ ದಾನಕ್ಕೆ ಮುಂದೆ ಬಂದು, ಅವರ ಅಂಗಾಂಗ ಹೊಂದಾಣಿಕೆಯಾದಲ್ಲಿ ಕಸಿ ಮಾಡಲಾಗುತ್ತದೆ. ಇಲ್ಲವಾದಲ್ಲಿ, ಜೀವಸಾರ್ಥಕತೆಯಡಿ ಮೃತ ದಾನಿಯಿಂದ ಪಡೆದ ಅಂಗಾಂಗಕ್ಕೆ ಎದುರು ನೋಡಬೇಕಾಗುತ್ತದೆ. ಅದು ಹೊಂದಾಣಿಕೆಯಾದಲ್ಲಿ ಮಾತ್ರ ಕಸಿ ಸಾಧ್ಯವಾಗಲಿದೆ. ಕುಟುಂಬಸ್ಥರು ಹಾಗೂ ಸಂಬಂಧಿಗಳು ಮೂತ್ರಪಿಂಡ ದಾನಕ್ಕೆ ನಿರಾಸಕ್ತಿ ತೋರುತ್ತಿರುವ ಕಾರಣ, ಜೀವಸಾರ್ಥಕತೆಯಡಿ ಮೂತ್ರಪಿಂಡಕ್ಕೆ ಎದುರು ನೋಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.

ಕಸಿಗೆ ತೊಡಕು: ದಾನಿಗಳ ಕೊರತೆ ಹಾಗೂ ಹೊಂದಾಣಿಕೆಯಾಗುವ ಅಂಗಾಂಗಗಳು ಸಿಗದಿರುವುದರಿಂದ ಕಸಿ ಪ್ರಕ್ರಿಯೆಗೆ ತೊಡಕಾಗಿದೆ. ರಾಜ್ಯದಲ್ಲಿ ಕಳೆದ ವರ್ಷ ಮಿದುಳು ನಿಷ್ಕ್ರಿಯಗೊಂಡ 198 ಮಂದಿಯ 564 ಅಂಗಾಂಗಗಳನ್ನು ದಾನವಾಗಿ ಪಡೆಯಲಾಗಿತ್ತು. ಈ ಅಂಗಾಂಗಗಳಲ್ಲಿ 306 ಮೂತ್ರಪಿಂಡಗಳು ಸೇರಿವೆ. ಅಂಗಾಂಗ ದಾನ ವರ್ಷವಾರು ಹೆಚ್ಚಳವಾದರೂ, ಅಂಗಾಂಗ ವೈಫಲ್ಯಕ್ಕೆ ಒಳಪಡುವವರ ಸಂಖ್ಯೆಯೂ ಏರಿಕೆಯಾಗುತ್ತಿರುವ ಕಾರಣ ನಿರ್ವಹಣೆ ಕಷ್ಟಸಾಧ್ಯವಾಗಿದೆ. ರಾಜ್ಯವಾರು ಅಂಗಾಂಗ ದಾನದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

‘ಮೂತ್ರಪಿಂಡಗಳು ರಕ್ತವನ್ನು ಶುದ್ಧೀಕರಿಸುವ, ತ್ಯಾಜ್ಯಗಳನ್ನು ಮೂತ್ರದ ಮೂಲಕ ಹೊರಹಾಕುವ ಮತ್ತು ದ್ರವಗಳ ಸಮತೋಲನವನ್ನು ಕಾಪಾಡುವ ಪ್ರಮುಖ ಕೆಲಸ ಮಾಡುತ್ತವೆ. ಮಧುಮೇಹ ಮತ್ತು ರಕ್ತದೊತ್ತಡವೇ ಮೂತ್ರಪಿಂಡ ಸಂಬಂಧಿ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಾಗಿವೆ. ದೇಹದ ಅತಿಯಾದ ತೂಕ, ವೃದ್ಧಾಪ್ಯ ಸೇರಿ ವಿವಿಧ ಕಾರಣಗಳಿಂದಲೂ ಸಮಸ್ಯೆ ಕಾಣಿಸಿಕೊಳ್ಳಲಿವೆ. ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು’ ಎಂದು ಮೂತ್ರಪಿಂಡ ತಜ್ಞರು ಸಲಹೆ ನೀಡುತ್ತಾರೆ.

ರಾಜ್ಯದಲ್ಲಿ ಅಂಗಾಂಗ ದಾನ ಹಾಗೂ ಕಸಿ ಹೆಚ್ಚುತ್ತಿದೆ. ಅಷ್ಟಾಗಿಯೂ ಅಂಗಾಂಗಗಳ ಕೊರತೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ಮೂತ್ರಪಿಂಡದ ಆರೋಗ್ಯ ಕಡೆಗಣಿಸಬಾರದು. ಈ ಅಂಗಾಂಗದ ಕಾಯಿಲೆ ಎದುರಿಸುತ್ತಿರುವ ಬಹುತೇಕರಿಗೆ ಲಕ್ಷಣಗಳು ಗೋಚರಿಸುವುದಿಲ್ಲ. ಆದ್ದರಿಂದ ನಿಯಮಿತ ತಪಾಸಣೆ ಅಗತ್ಯ
ಡಾ.ಎಚ್. ಸುದರ್ಶನ್ ಬಲ್ಲಾಳ್ ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ

ಕಸಿ ಚಿಕಿತ್ಸೆಗೆ ನೆರವು

ಸರ್ಕಾರವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಸದಸ್ಯರಿಗೆ ಉಚಿತವಾಗಿ ಕಸಿ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಮೂತ್ರಪಿಂಡ ಕಸಿಗೆ ₹3 ಲಕ್ಷ (ಕಸಿ ವೆಚ್ಚ ಹಾಗೂ ಇಮ್ಯೊನೊಸಪ್ರೆಶನ್) ಯಕೃತ್ ಕಸಿಗೆ ₹11 ಲಕ್ಷ ಹೃದಯ ಕಸಿಗೆ ₹10 ಲಕ್ಷ ಶ್ವಾಸಕೋಶ ಕಸಿಗೆ ₹15 ಲಕ್ಷ ಹಾಗೂ ಹೃದಯ ಮತ್ತು ಶ್ವಾಸಕೋಶ ಕಸಿಗೆ ₹22 ಲಕ್ಷ ಚಿಕಿತ್ಸಾ ಪ್ಯಾಕೇಜ್ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ 86 ಆಸ್ಪತ್ರೆಗಳು ಅಂಗಾಂಗ ಕಸಿಗೆ ನೋಂದಣಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.