ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆ.ಜೆ ಜಾರ್ಜ್, ಐದು ದಶಕಗಳಿಗೂ ಹೆಚ್ಚು ರಾಜಕೀಯ ಅನುಭವ ಹೊಂದಿದ್ದಾರೆ.

ಪೂರ್ಣ ಹೆಸರು: ಕೆಲಚಂದ್ರ ಜೋಸೆಫ್ ಜಾರ್ಜ್.

ಜನ್ಮಸ್ಥಳ: ಕೇರಳದ ಕೋಟ್ಟಾಯಂನ ಚಿಂಗವನಂ

ಪತ್ನಿ: ಸುಜಾ ಜಾರ್ಜ್

ಕೆ.ಜೆ. ಜಾರ್ಜ್ ಅವರು 1968ರಲ್ಲಿ ಕಾಂಗ್ರೆಸ್ ಪಕ್ಷದ ಯುವ ಘಟಕದ ಮೂಲಕ ರಾಜಕೀಯಕ್ಕೆ ಸೇರಿದರು. 6 ಬಾರಿ ಶಾಸಕರಾಗಿರುವ ಇರುವ ಈ ಹಿಂದೆ ಭಾರತಿ ನಗರವನ್ನು ಪ್ರತಿನಿಧಿಸಿದ್ದರು. ಈಗ ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು. ಅದಕ್ಕೂ ಮುನ್ನ ಗೃಹ ಸಚಿವ, ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ವಸತಿ ಮತ್ತು ನಗರಾಭಿವೃದ್ಧಿ, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.