ಬೆಂಗಳೂರು: ಬಸ್ ಅಪಘಾತದಲ್ಲಿ ಪ್ರಯಾಣಿಕ ಸಾವನ್ನಪ್ಪಿದ ಪ್ರಕರಣ ವೊಂದರಲ್ಲಿ ಚಾಲಕನ ತಪ್ಪು ಮುಚ್ಚಿಟ್ಟು, ನ್ಯಾಯಾಲಯದ ಹಾದಿ ತಪ್ಪಿಸಲು ಯತ್ನಿಸಿದ ಪ್ರಕರಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್ಟಿಸಿ) ಚಾಟಿ ಬೀಸಿರುವ ಹೈಕೋರ್ಟ್ ₹25 ಸಾವಿರ ದಂಡ ವಿಧಿಸಿದೆ.

‘ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಮಂಡಳಿ’ ಆದೇಶ ಪ್ರಶ್ನಿಸಿ ಕೆಕೆಆರ್ಟಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ದಾವೆದಾರರು ನ್ಯಾಯಾಲಯಕ್ಕೆ ಶುದ್ಧಹಸ್ತರಾಗಿ ಬರಬೇಕು. ತಪ್ಪು ಮಾಹಿತಿ ನೀಡಿದಲ್ಲಿ ಯಾವುದೇ ಪರಿಹಾರ ಪಡೆಯಲು ಅರ್ಹರಾಗಿರುವುದಿಲ್ಲ. ಇಂತಹ ನಡವಳಿಕೆ ನ್ಯಾಯಾಂಗದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತದೆ’ ಎಂದು ನ್ಯಾಯಪೀಠ ನಿಗಮವನ್ನು ತರಾಟೆಗೆ ತೆಗೆದುಕೊಂಡಿದೆ.

‘ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ₹25 ಸಾವಿರ ದಂಡ ಪಾವತಿಸಬೇಕು. ದಂಡದ ಮೊತ್ತವನ್ನು ಈ ಮೊಕದ್ದಮೆ ಹೂಡಲು ಕಾರಣರಾದ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು. ಇಂತಹ ದ್ವಂದ್ವ ನಿಲುವುಗಳನ್ನು ತಡೆಗಟ್ಟಲು ನಿಗಮವು ಪ್ರತ್ಯೇಕ ಪರಿಶೀಲನಾ ಸಮಿತಿ ರಚಿಸಬೇಕು. ಈ ಸಂಬಂಧ ಸೂಕ್ತ ಸುತ್ತೋಲೆ ಹೊರಡಿಸಬೇಕು’ ಎಂದು ನ್ಯಾಯಪೀಠ, ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ತಾಕೀತು ಮಾಡಿದೆ.

ಪ್ರಕರಣವೇನು?: ವಿನೋದ್ ಕುಮಾರ್ ಮಾನೆ ಎಂಬುವವರು ಬಸ್ ಅಪಘಾತದಲ್ಲಿ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ‘ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಮಂಡಳಿ’ ಮೃತರ ಕುಟುಂಬಕ್ಕೆ ಅಪಘಾತ ನಡೆದ ದಿನದಿಂದ ಶೇ 6ರ ಬಡ್ಡಿ ದರದಲ್ಲಿ ₹1.10 ಕೋಟಿ ಪರಿಹಾರ ನೀಡುವಂತೆ 2025ರ ಮಾರ್ಚ್ 14ರಂದು ಕೆಕೆಆರ್ಟಿಸಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಿಗಮವು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.

ಮಕ್ಕಳಿಗೆ ಬರೆ: ಜಾಮೀನು ಮಂಜೂರು

ಚಾಕು ಬಿಸಿ ಮಾಡಿ ತಮ್ಮ ಮಕ್ಕಳ ಕೈ-ಕಾಲು ಹಾಗೂ ಬೆನ್ನಿಗೆ ಬರೆಯಿಟ್ಟ ಮತ್ತು ಬಾಸುಂಡೆ ಬರುವಂತೆ ಕೋಲಿನಿಂದ ಹೊಡೆದ ಪ್ರಕರಣವೊಂದರಲ್ಲಿ ಮಕ್ಕಳನ್ನು ಹೆತ್ತ ತಾಯಿ, ಮಲತಂದೆ, ಅಜ್ಜಿ-ತಾತನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಿರೀಕ್ಷಣಾ ಜಾಮೀನು ಕೋರಿ ಚಾಮರಾಜನಗರ ತಾಲ್ಲೂಕಿನ ಕಳ್ಳೀಪುರ ನಿವಾಸಿಗಳಾದ ಮಕ್ಕಳ ತಾಯಿ ರಂಜಿತಾ, ಮಲತಂದೆ ಕೆಂಡಗಣ್ಣ ಸ್ವಾಮಿ, ಅವರ ತಂದೆ ಸ್ವಾಮಿ ಮತ್ತು ರಂಜಿತಾ ಅವರ ತಾಯಿ ಮಹದೇವಮ್ಮ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿವಿ.ಶ್ರೀಶಾನಂದ ಅವರ ರಜಾಕಾಲದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರು ಈಗಾಗಲೇ ತನಿಖಾಧಿಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ತನಿಖೆ ಪೂರ್ಣಗೊಂಡಿದ್ದು ಸಂಬಂಧಿಸಿದ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹಾಗಾಗಿ, ದೋಷಾರೋಪ ಪಟ್ಟಿ ಪ್ರಕಾರ ಅರ್ಜಿದಾರರ ಬಂಧನದ ಅಗತ್ಯ ಕಂಡುಬರುತ್ತಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

‘ಅರ್ಜಿದಾರರು ತಲಾ ₹50 ಸಾವಿರ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯಾಧಾರ ತಿರುಚಲು ಹಾಗೂ ನಾಶಪಡಿಸಲು ಯತ್ನಿಸಬಾರದು. ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು. ನ್ಯಾಯಾಲಯದ ಪೂರ್ವಾನುಮತಿ ಪಡೆಯದೇ ಚಾಮರಾಜನಗರ ಜಿಲ್ಲೆ ತೊರೆಯಬಾರದು’ ಎಂದು ನ್ಯಾಯಪೀಠ ಅರ್ಜಿದಾರರಿಗೆ ಷರತ್ತುವಿಧಿಸಿದೆ.

ಮಕ್ಕಳ ಮೊದಲ ತಂದೆ ನಂಜೇಗೌಡ ಅವರ ತಂದೆ ಮಾದೇಗೌಡ ನೀಡಿದ ಮಾಹಿತಿ ಆಧರಿಸಿ ಚಾಮರಾಜನಗರ ಜಿಲ್ಲೆಯ ಮಕ್ಕಳ ಸಂರಕ್ಷಣಾ ಘಟಕದ ಸಮನ್ವಯ ಅಧಿಕಾರಿ ಎಲ್.ಸಿದ್ದರಾಜು 2025ರ ಡಿಸೆಂಬರ್ 4ರಂದು ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆರೋಪಿಗಳಿಗೆ ಚಾಮರಾಜನಗರದ ಜಿಲ್ಲಾ ಪ್ರಧಾನ ಸಿವಿಲ್ (ಹಿರಿಯ) ಮತ್ತು ಸಿಜೆಎಂ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿ 2026ರ ಜನವರಿ 12ರಂದು ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.