ಕೋಲಾರ: ಸಮಾಜದಲ್ಲಿರುವ ಹಿಂದೂಗಳು ಜಾತಿ ಮರೆತು ಒಗ್ಗಟಾಗಬೇಕು. ಆಗ ಮಾತ್ರ ನಮ್ಮತನ ಗಟ್ಟಿಕೊಳ್ಳಿಸಿಕೊಳ್ಳಲು ಸಾಧ್ಯ. 2028ಕ್ಕೆ ನಮ್ಮ ಆಟ ಶುರುವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಎಂ.ಜಿ ರಸ್ತೆಯಲ್ಲಿ ಶ್ರೀರಾಮೋತ್ಸವ ಪ್ರಯುಕ್ತ ಶ್ರೀರಾಮಸೇನೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀರಾಮನ ಶೋಭಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ತಾರತಮ್ಯದ ನೀತಿಗಳು ಹಿಂದೂಗಳ ವಿರುದ್ಧ ನಡೆಯುತ್ತಿವೆ. ಇದನ್ನೆಲ್ಲಾ ಎದುರಿಸಲು ಒಗ್ಗಟ್ಟಾಗಬೇಕು, ಪ್ರತಿರೋಧ ವ್ಯಕ್ತಪಡಿಸಬೇಕು ಎಂದು ಎಚ್ಚರಿಸಿದರು.

ರಂಜಾನ್ ನಡೆದಾಗ ಕಲ್ಲು ಎಸೆಯುವ ಘಟನೆಗಳು ನಡೆಯಲಿಲ್ಲ, ಆದರೆ ಗಣಪತಿ ಮೆರವಣಿಗೆ, ರಾಮನ ಮೆರವಣಿಗೆ, ಶಿವಾಜಿ ಮೆರವಣಿಗೆ ಮೇಲೆ ಕಲ್ಲು ಹೊಡೆಯುತ್ತಾರೆ. ಇದು ಯಾವ ನ್ಯಾಯ? ಅವರಿಗೆ ಕುಮ್ಮಕ್ಕು ನೀಡುತ್ತಿರುವವರು ಯಾರು ಎಂದು ಪ್ರಶ್ನಿಸಿದ ಅವರು, ನಮ್ಮ ಗೃಹ ಸಚಿವರು ಗೊತ್ತಿಲ್ಲ ಎನ್ನುತ್ತಾರೆ. ಹಿಂದೂಗಳ ಕಾರ್ಯಕ್ರಮಕ್ಕೆ ಕಲ್ಲು ಹೊಡೆದವರಿಗೆ ಬುಲ್ಡೋಜಾರ್ ನೀತಿ ಜಾರಿ ಮಾಡಬೇಕು ಎಂದರು.

ಕೆಲವರು ದೇಶದಲ್ಲಿ ಇದ್ದುಕೊಂಡೇ ದ್ರೋಹ ಬಗೆಯುತ್ತಾರೆ. ಇರಾನ್ನಲ್ಲಿ ಯಾರೋ ಮೃತಪಟ್ಟರೆ ಇಲ್ಲಿ ಗೋಳಾಡುತ್ತಾರೆ.ಇವರು ಗಾಂಧೀಜಿ, ನೆಹರೂ, ಇಂದಿರಾ ಗಾಂಧಿ ಸತ್ತಾಗ ಅತ್ತಿದ್ದರೆ? ಇಂಥವರನ್ನು ಪಾಕಿಸ್ತಾನಕ್ಕೆ ಓಡಿಸಬೇಕು ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿಯಾದರೆ ಮುಸ್ಲಿಮರ ಮೀಸಲಾತಿ ತೆಗೆಯುತ್ತೇನೆ. ಅದನ್ನು ದಲಿತರು, ಬಡವರಿಗೆ, ಹಿಂದುಳಿದವರಿಗೆ ಹಂಚಿಕೆ ಮಾಡುತ್ತೇನೆ ಎಂದರು.

ಭಾಷಣ ಮಾಡಿದ ಮಾತ್ರಕ್ಕೆ ಪೊಲೀಸರು ನನ್ನ ಮೇಲೆ ಈವರೆಗೆ 80 ಕೇಸು ದಾಖಲಿಸಿದ್ದಾರೆ. ಇದು ಮುಂದುವರಿದು 150 ಕೇಸು ಆದರೆ ಮುಂದಿನ ಚುನಾವಣೆಯಲ್ಲಿ 150 ಹಿಂದೂಗಳು ಶಾಸಕರಾಗಿ ಆಯ್ಕೆಯಾಗಿ ಬರುತ್ತಾರೆ. 2028ರ ನಂತರ ಹಿಂದೂಗಳ ಮೇಲೆ ಎಫ್ಐಆರ್ ದಾಖಲು ಮಾಡುವುದು ಬದಲಾಗುತ್ತದೆ. ಇದೇ ಪೊಲೀಸರ ಕೈಯಲ್ಲಿ ನಾವು ಆಟ ಶುರು ಮಾಡುತ್ತೇವೆ. ಹೀಗಾಗಿ, 2028ಕ್ಕೆ ಯಾವುದೇ ತಪ್ಪು ನಡೆಯಬಾರದು. ಈಗ ಮೋದಿ ಮುಂದೆ ಯೋಗಿ ಆದಿತ್ಯನಾಥ್ ಎಂದು ಹೇಳಿದರು.

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ‘ದೆಹಲಿಯಲ್ಲಿ ಯಾರಿಗಾದರೂ ದೂರವಾಣಿ ಕರೆ ಮಾಡಿದಾಗ ಹಲೋ ಬದಲು ರಾಮ್ ರಾಮ್ ಎನ್ನುತ್ತಾರೆ. ಆ ಪದ್ಧತಿಯೂ ನಮ್ಮಲ್ಲೂ ಜಾರಿಯಾಗಬೇಕು, ಆ ಮೂಲಕ ರಾಮನ ಸ್ಮರಣೆ ನಿತ್ಯ ನಡೆಯಬೇಕು’ ಎಂದು ತಿಳಿಸಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ‘ಕೋಲಾರಕ್ಕೆ ಯಾರು ಬಂದು ಭಾಷಣ ಮಾಡಬೇಕು ಎಂದು ತೀರ್ಮಾನ ಮಾಡುವುದು ನಾವು. ಅಂಥ ದಿನಗಳು ಸಮೀಪಿಸಬೇಕು. ಮುತಾಲಿಕ್ ಅವರಿಗೆ ನಿಷೇಧ ಹೇರಿದ ಮಾತ್ರಕ್ಕೆ ಯಶಸ್ಸು ಆಗಿದ್ದೇವೆ ಎಂದು ಬೀಗಬಾರದು. ನಮಗೆ ಯಾವ ದೊಣ್ಣೆ ನಾಯಕನ ಅನುಮತಿಯೂ ಬೇಡ’ ಎಂದರು.

ಹಿಂದೆ ಕ್ಲಾಕ್ ಟವರ್ನಲ್ಲಿ ಕೆಲಸ ಮಾಡಲು ಭಯ ಆಗುತ್ತದೆ ಎಂಬುದಾಗಿ ಪೊಲೀಸರು ಹೇಳುತ್ತಿದ್ದರು, ಧ್ಜಜ ಹಾರಿಸಿದ ನಂತರ ನಿರಾಳವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಹುಲಿ, ಸಿಂಹ ಇದೆ ಎಂಬುದಾಗಿ ಹೇಳುತ್ತಿದ್ದರು. ಯಾವುದಕ್ಕೂ ಜಗ್ಗದೆ ಆರ್ಎಸ್ಎಸ್ ಪಥಸಂಚಲನ, ಡಾ.ಬಿ.ಆರ್.ಅಂಬೇಡ್ಕರ್ ಮೆರವಣಿಗೆ ನಡೆಸಲಾಯಿತು. ನ್ಯಾಯವಾಗಿದ್ದವರು ಯಾರು ಎಲ್ಲಿಗೆ ಬೇಕಾದರು ಬರಬಹುದು ಎಂದು ತಿಳಿಸಿದರು.

ಪುಲ್ವಾಮಾ ದಾಳಿಯಲ್ಲಿ ಭಾರತಮಾತೆ ಮಕ್ಕಳು ಮೃತಪಟ್ಟಾಗ ಯಾರಿಗೂ ನೋವಾಗಲಿಲ್ಲ. ಇರಾನ್ನಲ್ಲಿ ದೇಹಗಳು ಉರುಳುತ್ತಿದ್ದರೆ ಕೂತಕಡೆ ಕಣ್ಣೀರು ಹರಿಸುತ್ತಿದ್ದಾರೆ. ದೇಶದ ಮಾಲೀಕರು ನಾವೇ. ಈ ನೆಲದಲ್ಲಿ ಜೀವಿಸುತ್ತಾ ಇರಾನ್, ಇರಾಕ್ ಬಗ್ಗೆ ಯೋಚಿಸೋದು ಯಾವ ನ್ಯಾಯ? ಅಂಥವರು ಯಾರೂ ಈ ನೆಲದಲ್ಲಿ ಇರಬಾರದು. ಪಾಕಿಸ್ತಾನಕ್ಕೆ ಹೋಗಲಿ ಎಂದರು.

ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರಮೇಶ್ ರಾಜ್, ರಾಜ್ಯ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಸುಂದ್ರೇಶ್ ನಾರ್ಗಲ್, ಶ್ರೀನಿವಾಸ ಗುರೂಜಿ, ಸಿಎಂಆರ್ ಶ್ರೀನಾಥ್, ವೆಂಕಟೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-18-1372740121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.