ಕೋಲಾರ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ನೆಪವೊಡ್ಡಿ ಕಾಂಗ್ರೆಸ್ ಪಕ್ಷವು ನೋಟಿಸ್ ನೀಡದೆ ನಸೀರ್ ಅಹಮದ್ ಸೇರಿದಂತೆ ಅಲ್ಪಸಂಖ್ಯಾತ ಮುಖಂಡರ ಮೇಲೆ ಕ್ರಮ ಕೈಗೊಂಡಿರುವುದು ಖಂಡನೀಯ ಎಂದು ದ್ರಾವಿಡ ವಿಮೋಚನಾ ಸಂಘದ ಅಧ್ಯಕ್ಷ ಕೆ.ಎಂ.ಅನಂತಕೀರ್ತಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷವು ದ್ರೋಹ ಬಗೆಯುತ್ತಿದೆ. ಈ ಪಕ್ಷದ ಪಾಲಿಗೆ ಅವರು ಬರೀ ವೋಟ್ ಬ್ಯಾಂಕ್ ಆಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

2024ರ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕೆ.ಎಚ್.ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟಿಕೆಟ್ ಅಂತಿಮಗೊಳಿಸಿದ್ದರು. ಆಗ ಜಿಲ್ಲೆಯ ಕಾಂಗ್ರೆಸ್ನ ಬಲಾಢ್ಯ ಮುಖಂಡರು ಆ ಕ್ರಮ ವಿರೋಧಿಸಿ ರಾಜೀನಾಮೆ ಪ್ರಹಸನ ನಡೆಸಿದರು. ಖರ್ಗೆ ಹಾಗೂ ಮುನಿಯಪ್ಪ ಅವರನ್ನು ಅವಮಾನಿಸುವ ವರ್ತನೆ ಅದು. ಷಡ್ಯಂತ್ರದಲ್ಲಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದ್ದರು. ಆಗ ಮುಖ್ಯಮಂತ್ರಿಯೂ ಸುಮ್ಮನಿದ್ದರು. ಕೋಲಾರಕ್ಕೆ ಸಂಬಂಧಪಡದ ಬೆಂಗಳೂರಿನ ಕೆ.ವಿ.ಗೌತಮ್ ಎಂಬುವರನ್ನು ಕರೆತಂದು ಅಭ್ಯರ್ಥಿಯನ್ನಾಗಿ ಮಾಡಿದರು. ಅವರನ್ನು ಇಲ್ಲಿನ ಮತದಾರರು ಸೋಲಿಸಿದರು ಎಂದು ನೆನಪಿಸಿದರು.

ಒಕ್ಕಲಿಗ ಸಂಘದ ಕೆ.ರೋಹನ್ ಕುಮಾರ್ ಮಾತನಾಡಿ, ‘ಅಲ್ಪಸಂಖ್ಯಾತರ ವಿಚಾರದಲ್ಲಿ ಏಕೆ ಯಾರೂ ದನಿ ಎತ್ತುತ್ತಿಲ್ಲ? ತಾರತಮ್ಯ ಆದಾಗ ಪ್ರಶ್ನೆ ಮಾಡುವುದು ನಮ್ಮ ಹಕ್ಕು. ಆರ್ಥಿಕವಾಗಿ ಬಲಿಷ್ಠರಾಗಿರುವ ಮುಖಂಡರ ಮೇಲೆ ಯಾವುದೇ ಕ್ರಮ ಆಗುತ್ತಿಲ್ಲ. ಒಮ್ಮೆ ಮೀಸಲಾತಿ ಪಡೆದುಕೊಂಡು ಶಾಸಕರು, ಸಂಸದರು ಆಗುವವರು ಬಳಿಕ ಅವರ ಕುಟುಂಬದವರನ್ನು ಹೊರತುಪಡಿಸಿ ಉಳಿದ ಮುಖಂಡರನ್ನು ಬೆಳೆಸಿದ್ದಾರೆಯೇ’ ಎಂದು ಕೇಳಿದರು.

ಹುಣಸನಹಳ್ಳಿ ವೆಂಕಟೇಶ್, ಮೋಹನ್ ಗೌಡ, ಛಲಪತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-18-1315944853

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.