ಕೋಲಾರ: ದಾವಣಗೆರೆ ದಕ್ಷಿಣ ಉಪಚುನಾವಣೆ ವಿಚಾರವಾಗಿ ನಸೀರ್ ಅಹಮದ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದು ವಿಪಕ್ಷಗಳ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. 2028ರ ವಿಧಾನಸಭೆ ಚುನಾವಣೆ ಮುಂದಿದ್ದು, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನೆ ನಡೆಸಬೇಕಾದ ಸಂದರ್ಭದಲ್ಲಿ ಇಂಥ ಪರಿಸ್ಥಿತಿ ಬರಬಾರದಿತ್ತು ಎಂದು ಕಾಂಗ್ರೆಸ್ ಹಾಗೂ ದಲಿತ ಮುಖಂಡ ಎಂ.ಚಂದ್ರಮೌಳಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವಿಲ್ಲಿ ಒಬ್ಬ ವ್ಯಕ್ತಿಯ ಪರವಾಗಿ ಮಾತನಾಡಲು ಬಂದಿಲ್ಲ. ಪಕ್ಷ ಸಂಘಟನೆಗೆ ಐದು ದಶಕಗಳಿಂದ ಶ್ರಮಿಸುತ್ತಿರುವ ನಸೀರ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಿ ಅನ್ಯಾಯವೆಸಗಿರುವ ವಿರುದ್ಧ ದನಿ ಎತ್ತಲು ಬಂದಿದ್ದೇವೆ. ಅವರ ಮೇಲೆ ಬಂದಿರುವ ಆರೋಪಗಳ ಮರು ಪರಿಶೀಲನೆ ಮಾಡಿ ಸ್ಥಾನಮಾನವನ್ನು ಮತ್ತೆ ನೀಡಬೇಕು’ ಎಂದು ಆಗ್ರಹಿಸಿದರು.

ನಸೀರ್ ಅವರು ಕೆಪಿಸಿಸಿಯಲ್ಲಿ ನಾನಾ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಬಿನ್ನಿಪೇಟೆಯಲ್ಲಿ ಗೆದ್ದು ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಕೋಲಾರ ಜಿಲ್ಲೆಯಲ್ಲಿ ಅಹಿಂದ ವರ್ಗಗಳಿಗೆ ತೊಂದರೆ ಆದಾಗ ರಕ್ಷಣೆಗೆ ಬಂದವರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಸೀರ್ ಕೂಡ ಕಾರಣ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ 90ರಷ್ಟು ಅಲ್ಪಸಂಖ್ಯಾತರ ಮತ ಹಾಕಿಸಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದಾರೆ. ತೆಲಂಗಾಣ ರಾಜ್ಯಕ್ಕೂ ಹೋಗಿ ಸಮುದಾಯದವರನ್ನು ಭೇಟಿ ಮಾಡಿ ಕಾಂಗ್ರೆಸ್ಗೆ ಮತ ಹಾಕಿಸಿದ್ದಾರೆ ಎಂದು ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಗೊಂದಲ ಪ್ರಸ್ತಾಪಿಸಿದ ಅವರು, ‘ಮೃತ ಶಾಸಕರ ಕುಟುಂಬಕ್ಕೆ ಟಿಕೆಟ್ ನೀಡುವುದು ಕಾಂಗ್ರೆಸ್ ಸಂಪ್ರದಾಯ. ಸಮರ್ಥ್ ಅವರಿಗೆ ಟಿಕೆಟ್ ಕೊಟ್ಟ ಮೇಲೆ ಮುಸ್ಲಿಂ ಸಮುದಾಯ ಅಸಮಾಧಾನಗೊಳ್ಳುತ್ತದೆ. ಟಿಕೆಟ್ ಕೊಡಿಸುವಂತೆ ನಸೀರ್ ಹಾಗೂ ಸಚಿವ ಜಮೀರ್ ಅಹ್ಮದ್ ಅವರ ಮೇಲೆ ಒತ್ತಡ ಬರುತ್ತದೆ. ಹೀಗಾಗಿ, ವರಿಷ್ಠರು ಅಲ್ಲಿಗೆ ಹೋಗಿ ಸಮುದಾಯವನ್ನು ಮನವೊಲಿಸುವಂತೆ ನಸೀರ್ ಅವರಿಗೆ ಸೂಚನೆ ನೀಡಿದ್ದರು. ಆದರೆ, ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿದ್ದ ಅವರು ದಾವಣಗೆರೆಗೆ ಹೋಗಲಿಲ್ಲ. ಅದನ್ನೇ ಘೋರ ಅಪರಾಧವೆಂಬಂತೆ ಪರಿಗಣಿಸಿದ ಹೈಕಮಾಂಡ್ ಏಕಾಏಕಿ ಶಿಸ್ತಿನ ಕ್ರಮ ಕೈಗೊಂಡಿದೆ. ಅವರನ್ನು ಕರೆಸಿ ನಾಲ್ಕು ಗೋಡೆ ಮಧ್ಯೆ ಮಾತನಾಡಿಸಿ ಸಮಜಾಯಿಷಿ ಪಡೆಯಬೇಕಿತ್ತು’ ಎಂದರು.

ನಸೀರ್ ವಿರುದ್ಧ ಕ್ರಮ ಆಗಿರುವ ಕಾರಣ ಅಲ್ಪಸಂಖ್ಯಾತರು, ಅಭಿಮಾನಿಗಳು ಕೋಪಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಗೊಂದಲ ನಿವಾರಿಸಿ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.

ಕೆಪಿಸಿಸಿ ಎಸ್ಸಿ ಘಟಕದ ಕಾರ್ಯಕಾರಿಣಿ ಸದಸ್ಯ ಗೋವಿಂದರಾಜು, ಗ್ರಾ.ಪಂ. ಮಾಜಿ ಸದಸ್ಯ ಪಾರೇಹೊಸಹಳ್ಳಿ ನಾರಾಯಣಸ್ವಾಮಿ, ಸಿ.ವೆಂಕಟೇಶ್, ಎಂ.ವೆಂಕಟೇಶ್ ಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-18-169173999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.