ಕೋಲಾರ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿ ಮನಯೊಡತಿಯು ಸತ್ತ ನಂತರವೂ ಅವರ ಖಾತೆಗೆ ಪಾವತಿಯಾಗಿ ದುರ್ಬಳಕೆಯಾಗಿರುವ ಗ್ಯಾರಂಟಿ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಮೃತ 246 ಯಜಮಾನಿಯರ ಬ್ಯಾಂಕ್ ಖಾತೆಗಳಿಂದ ₹ 19.06 ಲಕ್ಷವನ್ನು ವಾಪಸ್ ಪಡೆಯಲಾಗಿದೆ.

ಯೋಜನೆಯಡಿ ಜಿಲ್ಲೆಯಲ್ಲಿ 2023ರ ಆಗಸ್ಟ್ನಿಂದ 2025ರ ಅಕ್ಟೋಬರ್ ತಿಂಗಳವರೆಗೆ ₹ 1,522.75 ಕೋಟಿ ಗ್ಯಾರಂಟಿ ಹಣ ಪಾವತಿಸಲಾಗಿದೆ. ಪ್ರತಿ ತಿಂಗಳು 3,15,826 ಯಜಮಾನಿಯರ ಖಾತೆಗೆ ತಲಾ ₹ 2 ಸಾವಿರ ಜಮೆಯಾಗುತ್ತಿದೆ. ಈ ಪೈಕಿ 246 ಮಂದಿ ಮೃತಪಟ್ಟಿದ್ದಾರೆ.

ಫಲಾನುಭವಿ ನಿಧನರಾದ ಬಳಿಕವೂ ಅವರ ಬ್ಯಾಂಕ್ ಖಾತೆಗೆ ಜಮೆ ಆಗಿರುವ ಹಣವನ್ನು ಲೆಕ್ಕಹಾಕಿ ಹಿಂಪಡೆಯಲಾಗಿದೆ. ಬ್ಯಾಂಕ್ಗಳಿಂದಲೇ ನೇರವಾಗಿ ರಾಜ್ಯ ಸರ್ಕಾರಕ್ಕೆ ವಾಪಸ್ ಜಮೆಯಾಗಿದೆ.

ಗೃಹಲಕ್ಷ್ಮಿ ಯೋಜನೆಯ ಗ್ಯಾರಂಟಿ ಹಣ ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿರುವ ಕುರಿತು ಖುದ್ದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೋಲಾರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.

ವೃದ್ಧ ಮನೆಯೊಡತಿ ಬ್ಯಾಂಕ್ಗೆ ಅಲೆದಾಡುವುದು ಕಷ್ಟ. ಇಂತಹ ಫಲಾನುಭವಿಗಳ ಖಾತೆ ನಿರ್ವಹಣೆಯ ಜವಾಬ್ದಾರಿಯನ್ನು ಕುಟುಂಬದ ಸದಸ್ಯರು ಪಡೆದಿರುತ್ತಾರೆ. ಫಲಾನುಭವಿಯ ಎಟಿಎಂ ಕಾರ್ಡ್ ಕೂಡ ಇವರ ಬಳಿ ಇರುತ್ತದೆ. ಫಲಾನುಭವಿ ಮೃತಪಟ್ಟ ಬಳಿಕವೂ ಬ್ಯಾಂಕ್ ಖಾತೆಗೆ ಜಮೆಯಾದ ಗೃಹಲಕ್ಷ್ಮಿ ಹಣ ದುರ್ಬಳಕೆಯಾಗುತ್ತಿತ್ತು. ಈಗ ಮಹಿಳೆಯ ಮರಣ ಮಾಹಿತಿ ಗೊತ್ತಾಗುತ್ತಿದ್ದಂತೆ ತಡೆ ಹಿಡಿಯುವ ಕೆಲಸ ನಡೆಯುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮೃತ ಫಲಾನುಭವಿಯ ಬ್ಯಾಂಕ್ ಖಾತೆಯಿಂದ ಕೆಲ ತಿಂಗಳು ಹಣ ನಗದೀಕರಿಸಲಾಗಿದೆ. ಇನ್ನೂ ಕೆಲವರು ಖಾತೆಯಲ್ಲಿರುವ ಹಣವನ್ನು ಬಳಕೆ ಮಾಡಿಕೊಂಡಿಲ್ಲ. ಇಂತಹ ಹಣವನ್ನು ವಾಪಸ್ ಪಡೆದು ಆ ಕುಟುಂಬದ ಮತ್ತೊಬ್ಬ ಮಹಿಳೆಯನ್ನು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮೃತಪಟ್ಟ ಮಾಹಿತಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ (ಸಿಡಿಪಿಒ) ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಇದನ್ನು ಪರಿಶೀಲಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಆಯಾ ಬ್ಯಾಂಕ್ಗಳಿಗೆ ನಿರ್ದೇಶನ ನೀಡುತ್ತಿದ್ದಾರೆ. ಈಗಾಗಲೇ ಲೀಡ್ ಬ್ಯಾಂಕ್ ಮುಖ್ಯಸ್ಥರ ಮೂಲಕ ಎಲ್ಲಾ ಬ್ಯಾಂಕ್ ಮ್ಯಾನೇಜರ್ಗಳ ಗಮನಕ್ಕೆ ತರಲಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದಲ್ಲಿ ವಯಸ್ಸಿನ ಕಾಯಿಲೆ, ಅನಾರೋಗ್ಯ, ರಸ್ತೆ ಅಪಘಾತದಂತಹ ಇತರೆ ಕಾರಣಗಳಿಗೆ 1,44,056 ಫಲಾನುಭವಿಗಳು ಮೃತಪಟ್ಟಿದ್ದಾರೆ. ಇವರಲ್ಲಿ 68,776 ಮಹಿಳೆಯರ ಬ್ಯಾಂಕ್ ಖಾತೆಗೆ ₹ 79.75 ಕೋಟಿ ಪಾವತಿಯಾಗಿದೆ. ಅದನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.

ಒಂದು ವೇಳೆ ಫಲಾನುಭವಿ ಮಹಿಳೆಯೊಬ್ಬರು ಮೃತಪಟ್ಟು, ಅವರ ವಾರಸುದಾರರು ಆಕೆಯ ಮರಣ ಪ್ರಮಾಣ ಪತ್ರವನ್ನು ಪಡೆದರೆ, ಕೂಡಲೇ ಆ ಮಾಹಿತಿಯು ಇ–ಜನ್ಮ ಪೋರ್ಟಲ್ನಲ್ಲಿ ನಮೂದಾಗಲಿದೆ. ಪ್ರತಿಬಾರಿಯ ಕಂತು ಪಾವತಿಗೂ ಮುನ್ನ ಇ-ಜನ್ಮ ಪೋರ್ಟಲ್ನಲ್ಲಿನ ಮಾಹಿತಿಯನ್ನು ಪರಿಶೀಲಿಸಿ, ಬಳಿಕ ಹಣ ಪಾವತಿ ಮಾಡಲು ಸರ್ಕಾರ ತೀರ್ಮಾನಿಸಿದೆ.

ಮೃತರ ಖಾತೆಗಳಿಂದ ಹಣವನ್ನು ಹಿಂಪಡೆದು ರಾಜ್ಯದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡುವಂತೆ ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ ಮೂಲಕ ಎಲ್ಲಾ ಬ್ಯಾಂಕ್ಗಳಿಗೆ ಸರ್ಕಾರ ಈಗಾಗಲೇ ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.