ಶ್ರೀನಿವಾಸಪುರ: ಕೋಮಲ್ ರೈತರ ಜೀವನಾಡಿ. ಈ ಸಂಸ್ಥೆಯಲ್ಲಿ ₹512 ಕೋಟಿ ಹಗರಣವಾಗಿದೆ ಎಂದು ಮಾಜಿ ಶಾಸಕ ಮಂಜುನಾಥ್ ಗೌಡ, ಸಾಮಾಜಿಕ ಹೋರಾಟಗಾರ ಗೂಳಿಗಾನಹಳ್ಳಿ ನಾಗರಾಜ ಹಾಗೂ ಕೆ.ಪಿ.ವೆಂಕಟಚಲಾಪತಿ ಅವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್ ತಿಳಿಸಿದರು.

ಪಟ್ಟಣದ ಶಿಬಿರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಶಾಸಕ ಮಂಜುನಾಥಗೌಡ ಅವರು ರಾಜಕೀಯ ಉದ್ದೇಶಕ್ಕಾಗಿ ಕೋಮುಲ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಅವರ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ. ನಿಮ್ಮ ವಯಕ್ತಿಕ ದ್ವೇಷಗಳು ಇದ್ದರೆ ಮಾಲೂರಿಗೆ ಸೀಮಿತಗೊಳಿಸಿ. ಕೆ.ವೈ.ನಂಜೇಗೌಡ ಅವರ ಮೇಲೆ ದ್ವೇಷ ಇದ್ದಲ್ಲಿ ಮಾಲೂರಿನಲ್ಲಿ ಪ್ರಶ್ನಿಸಿ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಳ್ಳಿ ನಮಗೆ ಅಭ್ಯಂತರವಿಲ್ಲ’ ಎಂದು ಹೇಳಿದರು.

‘ಕೋಮುಲ್ನಲ್ಲಿ ನೇಮಕಾತಿ ವಿಚಾರದಲ್ಲಿ ಈಗಾಗಲೇ ಇಡಿ ತನಿಖೆಯಾಗಿದೆ. ಲೋಕಾಯುಕ್ತರಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯಲ್ಲಿ ಕೋಮುಲ್ನಲ್ಲಿ ಯಾವುದೇ ಭ್ರಷ್ಟಾಚಾರ ಅವ್ಯವಹಾರ ನಡೆದಿಲ್ಲ ಎಂದು ತಿಳಿಸಿದ್ದಾರೆ’ ಎಂದರು.

‘ಈಗಾಗಲೇ ಅಧಿಕಾರಿಗಳಿಗೆ 12 ವರ್ಷಗಳ ಹಣದ ವಹಿವಾಟು ದಾಖಲೆಗಳನ್ನು ನೀಡಲಾಗಿದೆ. ಆದರೂ ನಿಮ್ಮ ಆರೋಪ ನಿಂತಿಲ್ಲ. ಯಾವುದೇ ಪ್ರಕ್ರಿಯೆಯಲ್ಲಾದರೂ ಲೋಪವಾಗಿದ್ದರೆ ಅಧಿಕಾರಿಗಳಿಗೆ ತನಿಖೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳಲಿ. ಯಾವುದೇ ರೀತಿಯ ಶಿಕ್ಷೆ ನೀಡಿದರೆ ಅದಕ್ಕೆ ಬದ್ಧರಾಗಿರುತ್ತೇವೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-18-597113074

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.