ಕೋಲಾರ: ಅಂಬೇಡ್ಕರ್ ಪ್ರತಿಪಾದಿಸಿದ ಮಾನವ ಹಕ್ಕುಗಳು ಹಾಗೂ ವಾಕ್ ಸ್ವಾತಂತ್ರ್ಯದ ರಕ್ಷಣೆ ಮಾಡುವುದರ ಜೊತೆಗೆ ಸಂಶೋಧನೆ, ಸತ್ಯ, ನಿಷ್ಪಕ್ಷಪಾತ ಸುದ್ದಿ ನೀಡುವ ಬದ್ಧತೆಯನ್ನು ಪತ್ರಿಕಾರಂಗ ಪ್ರದರ್ಶಿಸಬೇಕೇ ಹೊರತು ಹೇಳಿಕೆಗಳ ಸಾಮ್ರಾಜ್ಯವಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ‘ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಪತ್ರಿಕೆ ಆರಂಭಿಸಿ ನೂರು ವರ್ಷಗಳಾದ ನಂತರ ಅವರು ಪತ್ರಕರ್ತರಾಗಿದ್ದರು ಎಂದು ನಾವು ಸ್ಮರಿಸುತ್ತಿದ್ದೇವೆ. ಅವರನ್ನು ವಿಶ್ವದ ನೂರಾರು ದೇಶಗಳು ಮಹಾಜ್ಞಾನಿಯಾಗಿ ಕಾಣುತ್ತಾರೆ. ಆದರೆ, ಭಾರತದಲ್ಲಿ ಅವರೊಬ್ಬ ದಲಿತ ಪರ ಹೋರಾಟಗಾರರು ಎಂಬಷ್ಟರಮಟ್ಟಿಗೆ ನೋಡಲಾಗುತ್ತಿದೆ ಎಂದು ವಿಷಾದಿಸಿದರು.

ಅಸ್ಪೃಶ್ಯತೆ ತುಂಬಿದ್ದ ವೇಳೆ ಅಂಬೇಡ್ಕರ್ ಪತ್ರಕರ್ತರಾಗಿ ಎದುರಿಸಿದ ಸವಾಲುಗಳು ಅಪಾರ. ತಮ್ಮ ಚಿಂತನೆಗಳನ್ನು ಶೋಷಿತರಿಗೆ ತಲುಪಿಸಲು ಅನಕ್ಷರತೆ ಅಡ್ಡಿಯಾಗಿತ್ತು. ಹೀಗಾಗಿ, ಪತ್ರಿಕೆ ನಡೆಸುವುದು ಸುಲಭದ ಮಾತಾಗಿರಲಿಲ್ಲ. ಗಾಂಧಿ, ಅಂಬೇಡ್ಕರ್ ಅವರ ಪತ್ರಿಕೆಗಳಿಗೆ ವ್ಯತ್ಯಾಸವಿದೆ. ಗಾಂಧೀಜಿ ತಮ್ಮ ಹರಿಜನ ಪತ್ರಿಕೆಯಲ್ಲಿ ದೇಶದ ಸಂಸ್ಕೃತಿಯ ಕುರಿತು ಬರೆದರೆ, ಅಂಬೇಡ್ಕರ್ ಅವರು ಶೋಷಿತರ ನೋವು, ಬವಣೆ ಬಗ್ಗೆ ಬರೆದರು ಎಂದರು.

ಅಂಬೇಡ್ಕರ್ ಆರಂಭಿಸಿದ ಪತ್ರಿಕೆಗಳು ಮರಾಠಿಯಲ್ಲಿದ್ದು, ಇಂಗ್ಲಿಷ್ನಲ್ಲಿ ಬರೆದಿದ್ದರೆ ಇಲ್ಲಿನ ಜನರ ಕಷ್ಟಗಳು ಬ್ರಿಟಿಷರಿಗೆ ಸುಲಭವಾಗಿ ಅರ್ಥವಾಗುತ್ತಿತ್ತು. ಸಾಮಾಜಿಕ, ರಾಜಕೀಯ ಅಸ್ಪೃಶ್ಯತೆ ಕೊನೆಗೊಳ್ಳುತ್ತಿತ್ತು ಎಂದು ಹೇಳಿದರು.

ಪತ್ರಕರ್ತರಾಗಿದ್ದ ಗಾಂಧಿ, ಅಂಬೇಡ್ಕರ್ ಭಾವಚಿತ್ರಗಳನ್ನು ಪತ್ರಕರ್ತರ ಸಂಘಗಳಲ್ಲಿ ಹಾಕಬೇಕು. ಪತ್ರಕರ್ತರ ಸಹಕಾರ ಸಂಘ ಪ್ರತಿವರ್ಷ ಅಂಬೇಡ್ಕರ್ ಜಯಂತಿ ನಡೆಸಿ ಒಬ್ಬ ಸಾಧಕರಿಗೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಅದಕ್ಕಾಗಿ 1 ಲಕ್ಷ ದತ್ತಿನಿಧಿ ನೀಡುತ್ತೇನೆ. ಅಂಬೇಡ್ಕರ್ ಪ್ರಶಸ್ತಿ ಸಿ.ಎಂ.ಮುನಿಯಪ್ಪ ಅವರಿಗೆ ಬಂದಿದ್ದು, ಸೂಕ್ತ ವ್ಯಕ್ತಿಗೆ ಸಿಕ್ಕಂತಾಗಿದೆ. ಹೋರಾಟದ ಮೂಲಕ ಸಮಾಜಕ್ಕೆ ಬದುಕು ಮುಡಿಪಾಗಿಟ್ಟ ಅವರಿಗೆ ಸಂದಿದ್ದು ಸಂತಸ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ‘ಪ್ರಜಾಪ್ರಭುತ್ವಕ್ಕೆ ಪೂರಕವಾಗಿ ಇಂದು ಪತ್ರಿಕೋದ್ಯಮ ಕೆಲಸ ಮಾಡುತ್ತಿಲ್ಲ. ಮಾನವೀಯ ವರದಿಗಳು, ತನಿಖಾ ವರದಿಗಳು ಮಾಯವಾಗಿವೆ. ಪತ್ರಕರ್ತರಿಗೆ ಅಂಬೇಡ್ಕರ್ ಮಾರ್ಗದರ್ಶನವಾಗಲಿ’ ಎಂದು ಆಶಿಸಿದರು.

ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ‘ಅಂಬೇಡ್ಕರ್ ಅಧ್ಯಯನಶೀಲರಾಗಿ ಸತ್ಯದ ಹುಡುಕಾಟ ನಡೆಸಿ ಪಡೆದ ಜ್ಞಾನವನ್ನು ದನಿ ಇಲ್ಲದವರಿಗೆ ದನಿ ನೀಡಲು ಬಳಸುತ್ತಿದ್ದರು. ಹೀಗಾಗಿ, ಪ್ರತಿ ಪತ್ರಕರ್ತ ಅಂಬೇಡ್ಕರ್ ವಾದಿ ಆಗಬೇಕು, ಪತ್ರಕರ್ತರ ಸಂಘಗಳು ಅಂಬೇಡ್ಕರ್ ಭವನಗಳಾಗಬೇಕು’ ಎಂದರು.

ರಾಜ್ಯ ಸರ್ಕಾರದ ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾಗಿರುವ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಅವರು ಅಂಬೇಡ್ಕರ್ ಭಾವಚಿತ್ರವನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಿದರು.

ಪತ್ರಕರ್ತರಿಗೆ ನಿವೇಶನಕ್ಕಾಗಿ ಪ್ರತಿ ತಾಲ್ಲೂಕಿನಲ್ಲೂ ತಲಾ 5 ಎಕರೆ ಜಮೀನು ಮಂಜೂರು ಮಾಡುವಂತೆ ಕೆ.ವಿ.ಪ್ರಭಾಕರ್ ಹಾಗೂ ಕೆ.ಶಿವಕುಮಾರ್ ಅವರಿಗೆ ಸಂಘದಿಂದ ಮನವಿ ಸಲ್ಲಿಸಲಾಯಿತು.

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ಕುಮಾರ್ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ರಾಜೇಂದ್ರ ಸಿಂಹ ಸ್ವಾಗತಿಸಿ, ಉಪಾಧ್ಯಕ್ಷ ರವಿಕುಮಾರ್ ವಂದಿಸಿದರು. ಕೊಂಡರಾಜನಹಳ್ಳಿ ಮಂಜುಳಾ ಸೌಹಾರ್ದ ಗೀತೆ ಹಾಡಿದರು.

ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ, ಜಿಲ್ಲಾ ವಾರ್ತಾಧಿಕಾರಿ ಡಾ.ಕವನಾ, ರಾಜ್ಯಕಾರ್ಯಕಾರಿ ಸದಸ್ಯ ವಿ.ಮುನಿರಾಜು, ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಎಚ್.ಎನ್.ಮುರಳೀಧರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ಬಾಬಾ, ರಾಜ್ಯ ಅಲ್ಪಸಂಖ್ಯಾತರ ಮಾನ್ಯತೆ ಪಡೆದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸದಾನಂದ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮದ್ ಯೂನುಸ್, ಸಹಕಾರ ಸಂಘದ ನಿರ್ದೇಶಕರಾದ ಸಿ.ವಿ.ನಾಗರಾಜ್, ಎಂ.ವರಲಕ್ಷ್ಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ತ್ಯಾಗರಾಜ್, ಬಂಗಾರಪೇಟೆ ಅಧ್ಯಕ್ಷ ಮೋಹನ್, ಶ್ರೀನಿವಾಸಪುರ ಅಧ್ಯಕ್ಷ ನಾಗರಾಜ್, ಪತ್ರಕರ್ತರು, ಕನ್ನಡ, ದಲಿತ, ರೈತ ಸಂಘಟನೆಗಳು ಹೋರಾಟಗಾರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-18-1580490916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.