ಬಂಗಾರಪೇಟೆ: ನಗರದ ಸಂಜಯ್ ಗಾಂಧಿ ಬಡಾವಣೆಯಲ್ಲಿ ತಾಲ್ಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘಟನಾ ಸಭೆ ನಡೆಯಿತು.

ಈ ವೇಳೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಲ್ಪಿಸಿರುವ ಮೂಲ ಮೀಸಲಾತಿ ವ್ಯವಸ್ಥೆಯು ಸಮರ್ಪಕವಾಗಿದೆ. ಆದರೆ, ಪ್ರಸ್ತುತ ಜಾರಿಗೆ ತರಲು ಉದ್ದೇಶಿಸಿರುವ ಒಳ ಮೀಸಲಾತಿ ಪದ್ಧತಿಯಿಂದ ಭೋವಿ, ಕೊರಚ, ಕೊರಮ ಹಾಗೂ ಲಂಬಾಣಿ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಒಳ ಮೀಸಲಾತಿಯು ಕೇವಲ ಒಂದು ವರ್ಗಕ್ಕೆ ಸೀಮಿತವಾಗುವ ಅಪಾಯವಿದೆ. ಇದು ಜಾರಿಯಾದರೆ ದಶಕಗಳಿಂದ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂಚೂಣಿಗೆ ಬರುತ್ತಿರುವ ಭೋವಿ ಸಮುದಾಯವು ಮತ್ತೆ ಸಾಮಾಜಿಕವಾಗಿ ಹಿನ್ನೆಡೆ ಅನುಭವಿಸಲಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚುವ ನೀತಿಯು ಭೋವಿ, ಲಂಬಾಣಿ ಸೇರಿದಂತೆ ಅಸ್ಪೃಶ್ಯವಲ್ಲದ ಸಮುದಾಯಗಳಲ್ಲಿ ಆತಂಕ ಮೂಡಿಸಿದೆ. ವರ್ಗೀಕರಣದಿಂದ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳು ಕೈ ತಪ್ಪಲಿವೆ. ಹಾಗಾಗಿ ಈ ವ್ಯವಸ್ಥೆಯನ್ನು ವಿರೋಧಿಸಬೇಕೆಂದು ಕರೆ ನೀಡಿದರು.

ಮುಖಂಡ ಶೇಷು ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ. ನಾವು ಚದುರಿ ಹೋದರೆ ನಮ್ಮ ಹಕ್ಕುಗಳು ನಮಗೆ ಮರೀಚಿಕೆಯಾಗಲಿವೆ. ಹಾಗಾಗಿ ಸಮಾನತೆಗಾಗಿ ನಾವು ಸಂಘಟಿತ ಹೋರಾಟದ ಹಾದಿ ತುಳಿಯೋಣ ಎಂದರು.

ತಾಲ್ಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘ ಗೌರವಾಧ್ಯಕ್ಷರಾಗಿ ಕೃಷ್ಣಪ್ಪ ಗಾಜಗ, ಅಧ್ಯಕ್ಷ ಕೆ.ಜಿ.ಮಂಜುನಾಥ್, ಉಪಾಧ್ಯಕ್ಷರಾಗಿ ರಾಮಕೃಷ್ಣಪ್ಪ, ವೆಂಕಟೇಶ್, ಚಲಪತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ, ಜಂಟಿ ಕಾರ್ಯದರ್ಶಿ ರಾಮಮೂರ್ತಿ, ವೆಂಕಟೇಶ್, ಕಾರ್ಯದರ್ಶಿ ಮುನಿರಾಮ್, ಸಹ ಕಾರ್ಯದರ್ಶಿ ಲೋಕೇಶ್, ಬಾಬು, ಸಂಘಟನಾ ಕಾರ್ಯದರ್ಶಿಯಾಗಿ ಪಿಳ್ಳಪ್ಪ, ಗೋವಿಂದಪ್ಪ, ಕಾಶಿ, ನಾರಾಯಣಸ್ವಾಮಿ, ಪ್ರಕಾಶ್, ಗೋವಿಂದಪ್ಪ ಆಯ್ಕೆಯಾಗಿದ್ದಾರೆ.

ಮಾಜಿ ಜಿ.ಪಂ.ಸದಸ್ಯ ಬಿ.ವಿ.ಕೃಷ್ಣ, ಸಿ.ವಿ.ಗೋಪಾಲ್, ಆದಿನಾರಾಯಣ ಕುಟ್ಟಿ, ಜಿಲ್ಲಾ ಭೋವಿ ಕ್ಷೇಮಾಭಿವೃದ್ಧಿ

ಸಂಘದ ಉಪಾಧ್ಯಕ್ಷ ಎಸ್.ನಾರಾಯಣ್, ಶ್ರೀಕೃಷ್ಣ, ಜೆಸಿಬಿ ನಾರಾಯಣಪ್ಪ, ಕಣಿಂಬೆಲೆ ಚಿನ್ನಪ್ಪ, ಎಂ.ಜಿ.ಗೋವಿಂದ, ಎಲ್.ಜಿ.ಮುನಿರಾಜು, ಎಳನೀರು ವೆಂಕಟೇಶ್, ತೊಪ್ಪನಹಳ್ಳಿ ರಾಮಮೂರ್ತಿ, ಕರವೇ ಚಲಪತಿ, ಮೋಹನ್ ಬಾಬು, ವಿನೋದ್, ವಿಕ್ಕಿ, ಶಿಕ್ಷಕ ಕಾಂತರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-18-872198949

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.