ಕೋಲಾರ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿದ್ದು ನನಗೆ ಬಹಳ ಬೇಸರ ಉಂಟು ಮಾಡಿದೆ. ಅವರು ಮುಖ್ಯಮಂತ್ರಿ ಆಗಿ ಇನ್ನೂ ಎರಡು ವರ್ಷ ಮುಂದುವರಿಯಬೇಕಿತ್ತು. ಜನಪರ ಆಡಳಿತಗಾರರಾದ ಅವರಿಗೆ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ನಗರದ ತಮ್ಮ ನಿವಾಸದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಗಟ್ಟಿಯಾಗಿಯೇ ಇದ್ದಾರೆ. ಏನಾದರೂ ವ್ಯತ್ಯಾಸವಾಗಿದ್ದರೆ ಕೈಬಿಡಬಹುದಿತ್ತು. ಅವರು ಚೆನ್ನಾಗಿಯೇ ಆಡಳಿತ ನಡೆಸುತ್ತಿದ್ದರು. ಬೇರೆ ಏನೋ ಬಲವಾದ ಕಾರಣವಿರಬೇಕು’ ಎಂದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಅವರು ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಆಗ ಶಾಸಕನಾಗಿದ್ದ ನಾನು, ಸಿದ್ದರಾಮಯ್ಯ ಅವರಿಗಾಗಿ ಪುನಃ ಸ್ಪರ್ಧೆ ಮಾಡದೆ ಕ್ಷೇತ್ರ ತ್ಯಾಗ ಮಾಡಿದೆ. ಆದರೆ ಅವರು ಇಲ್ಲಿ ಸ್ಪರ್ಧಿಸಲೇ ಇಲ್ಲ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ದರಲ್ಲ ಎಂಬ ಪ್ರಶ್ನೆಗೆ, ‘ನಾನು ಮತ್ತೆ ಆ ವಿಚಾರ ಪ್ರಸ್ತಾಪ ಮಾಡಲಿಲ್ಲ, ಅವರೂ ಕೊಡಲಿಲ್ಲ. ಅದೀಗ ಮುಗಿದ ಕಥೆ. ಈಗ ಅವರೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ’ ಎಂದು ಹೇಳಿದರು.

ಸ್ಥಳೀಯ ರಾಜಕಾರಣದಿಂದ ದೂರು ಉಳಿದಿದ್ದೀರಾ ಎಂಬ ಪ್ರಶ್ನೆಗೆ, ‘ಪರಿಸ್ಥಿತಿಗೆ ತಕ್ಕಂತೆ ಮುಂದುವರಿದಿದ್ದೇನೆ. ನಾನು ಇಫ್ಕೊ ನಿರ್ದೇಶಕನಾಗಿದ್ದು, ತಿಂಗಳಿಗೊಮ್ಮೆ ದೆಹಲಿಗೆ ಹೋಗಿ ಬರುತ್ತೇನೆ. ಅಲ್ಲಿಯೇ ನನ್ನ ವ್ಯವಹಾರಗಳು ಇವೆ’ ಎಂದರು.

ಜಿಲ್ಲೆಯಿಂದ ಯಾರೊಬ್ಬರಿಗೂ ಸಚಿವ ಸ್ಥಾನ ಸಿಗದ ಬಗ್ಗೆ, ‘ನಾನು ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೆ. ಕೆ.ಎಚ್.ಮುನಿಯಪ್ಪ ನಮ್ಮ ಜಿಲ್ಲೆಯವರೇ ಅಲ್ಲವೇ? ದೇವನಹಳ್ಳಿ ಇದ್ದರೂ ಅವರು ಕೋಲಾರದವರು. ಉಳಿದವರ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ನನ್ನನ್ನು ಕರೆದಿಲ್ಲ. ಹೀಗಾಗಿ, ಹೋಗಿಲ್ಲ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಮುಂದೆ ಏನಾಗಲಿದೆ ಎಂಬುದನ್ನು ನೋಡೋಣ ಎಂದರು.

ಶ್ರೀನಿವಾಸಗೌಡ ಅವರು ಅಣ್ಣಿಹಳ್ಳಿ ಸೊಸೈಟಿಯ ಮೂಲಕ ರಾಜಕೀಯ ಪ್ರಾರಂಭಿಸಿ ತಾಲ್ಲೂಕು ಬೋರ್ಡ್ ಸದಸ್ಯರಾಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ನಾಲ್ಕು ಬಾರಿ ಕೋಲಾರ ಕ್ಷೇತ್ರದ ಶಾಸಕರಾಗಿ ಜೊತೆಗೆ ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಫ್ಕೋ ಸಹಕಾರ ಸಂಸ್ಥೆಗೆ ಸತತ ಏಳನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-18-1546063715

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.