ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗ ದಲ್ಲಿ(ಕೆಪಿಎಸ್ಸಿ) ನಡೆಯುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಸಂಘಟಿತ ಹೋರಾಟ ಅನಿವಾರ್ಯ’ ಎಂದು ಕರ್ನಾಟಕ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಸಲಹೆಗಾರ ಜಿ.ಎಸ್.ಕುಮಾರ್ ಹೇಳಿದರು.

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ–ಕರ್ನಾಟಕ ಘಟಕ ಹಮ್ಮಿಕೊಂಡಿದ್ದ ವೆಬಿನಾರ್ನಲ್ಲಿ ಮಾತನಾಡಿದ ಅವರು, ‘ಕೆಪಿಎಸ್ಸಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಯುತ್ತಿದೆ. ಅಲ್ಲದೇ ಖಾಲಿ ಇರುವ ಹುದ್ದೆಗಳ ಭರ್ತಿಗೂ ಅವಿರತ ಹೋರಾಟ ಮಾಡಬೇಕಾಗುತ್ತದೆ. ಯುವಜನರ ಸಹಕಾರದಿಂದ ಇದು ಸಾಧ್ಯ’ ಎಂದು ತಿಳಿಸಿದರು.

‘ಒಳಮೀಸಲಾತಿ ಕಾರಣದಿಂದ 56,432 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ನೇಮಕದ ಅಧಿಕೃತ ದಿನಾಂಕ ಪ್ರಕಟಣೆಗೆ ಹೋರಾಟ ಮುಂದುವರಿಸಬೇಕಾಗಿದೆ. ಗುರಿ ತಲುಪವವರೆಗೂ ಎಂತಹ ಸಂದರ್ಭದಲ್ಲೂ ಯುವಕರು ವಿಚಲಿತರಾಗಬಾರದು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ‘2011ರಿಂದ ನಿರುದ್ಯೋಗದ ವಿರುದ್ಧ ಹೋರಾಟಗಳು ನಡೆದುಕೊಂಡೇ ಬಂದಿವೆ. ಇದಕ್ಕೆ ಹಿರಿಯರಾದ ಸಂತೋಷ್ ಹೆಗ್ಡೆ, ಎಸ್.ಆರ್.ಹಿರೇಮಠ ಸಹಿತ ಹಲವರು ಬೆಂಬಲಿಸಿದ್ದಾರೆ. ಮುಂದೆಯೂ ನಮ್ಮ ಹಕ್ಕು ಪಡೆಯಲು ಒಗ್ಗಟ್ಟಿನಿಂದ ಇರೋಣ’ ಎಂದರು.

ಸಮಿತಿ ಸಹ ಸಂಚಾಲಕರಾದ ವೀರೇಶ್ ನರೇಗಲ್, ಟಿ.ಆರ್.ಸುನೀಲ್, ಭವಾನಿ ಶಂಕರೇಗೌಡ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-4-910452480

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.