ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬುದು ಲಕ್ಷಾಂತರ ಯುವಕ ಯುವತಿಯರ ಕನಸು. ಉದ್ಯೋಗ ಪಡೆದು ಸಾರ್ವಜನಿಕರ ಕೆಲಸಗಳನ್ನು ಮಾಡುವುದರ ಜೊತೆಗೆ, ತಮ್ಮ ಕುಟುಂಬದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶವೂ ಅವರ ಈ ಕನಸಿನ ಹಿಂದಿದೆ. ಅದಕ್ಕಾಗಿ ಅವರು ತಮ್ಮ ವಿದ್ಯಾಭ್ಯಾಸದ ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ನಮ್ಮ ರಾಜ್ಯದಲ್ಲಿ ಇಂತಹ ಕನಸು ಕಟ್ಟಿಕೊಂಡು, ಕರ್ನಾಟಕ ಆಡಳಿತ ಸೇವೆಗೆ (ಕೆಎಎಸ್) ಸೇರಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಪ್ರತಿ ವರ್ಷ ಹತ್ತು ಲಕ್ಷಕ್ಕೂ ಹೆಚ್ಚು ಪ್ರತಿಭಾವಂತ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಈ ಉದ್ದೇಶದಿಂದ ಬೆಂಗಳೂರು, ಧಾರವಾಡ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ತರಬೇತಿ ಕೇಂದ್ರಗಳಿಗೆ ದಾಖಲಾಗಿ ಅಭ್ಯಾಸ ಆರಂಭಿಸುತ್ತಾರೆ. ಈ ರೀತಿ ಅಭ್ಯಾಸ ಮಾಡುವವರಲ್ಲಿ ಸಾಮಾನ್ಯ ಆರ್ಥಿಕ ಹಿನ್ನೆಲೆಯವರು ಹಾಗೂ ಮಧ್ಯಮ ವರ್ಗದ ಪ್ರತಿಭಾವಂತರೇ ಹೆಚ್ಚು. ಆದರೆ, ಕರ್ನಾಟಕ ಲೋಕಸೇವಾ ಆಯೋಗವು ಯುವಜನರ ಅಪೇಕ್ಷೆ, ಆಕಾಂಕ್ಷೆಗಳನ್ನು ನಿರ್ಲಕ್ಷಿಸುವ ಮೂಲಕ ಅವರ ಕನಸಿಗೆ ತಣ್ಣೀರು ಎರಚುತ್ತಲೇ ಬಂದಿದೆ.

ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ನೇಮಕಾತಿಗೆ ವಿಶೇಷ ಅಧಿಸೂಚನೆ ಹೊರಡಿಸಿ ಹುದ್ದೆಗಳನ್ನು ಭರ್ತಿ ಮಾಡುವ ಜವಾಬ್ದಾರಿಯನ್ನು ಕೆಪಿಎಸ್ಸಿ ಹೊಂದಿದೆ. ಆದರೆ, ಆಯೋಗವು ಈ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಅದು ತನ್ನ ಕಾರ್ಯವೈಖರಿಯಿಂದ ನಿರೂಪಿಸುತ್ತಲೇ ಬಂದಿದೆ. ಆಯೋಗವು ವರ್ಷಕ್ಕೆ ಕೆಲವು ಹುದ್ದೆಗಳಿಗಷ್ಟೇ ಅಧಿಸೂಚನೆ ಹೊರಡಿಸುತ್ತದೆ. ಆದರೆ, ಕಡಿಮೆ ಹುದ್ದೆಗಳಿಗೂ ನೇಮಕ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎರಡರಿಂದ ಮೂರು ಅಥವಾ ಐದು ವರ್ಷಗಳವರೆಗೂ ತೆಗೆದುಕೊಳ್ಳುತ್ತದೆ. ಹೀಗಾಗಿ, ಈ ಪ್ರಕ್ರಿಯೆಯನ್ನು ‘ಕರ್ನಾಟಕ ಲೋಕಸೇವಾ ಆಯೋಗದ ಪಂಚವಾರ್ಷಿಕ ಯೋಜನೆ’ ಎಂದು ಕರೆಯುವುದು ಹೆಚ್ಚು ಸೂಕ್ತ.

ಯುವಜನರಿಗೆ ಅನ್ಯಾಯ

ಕೆಪಿಎಸ್ಸಿಯ ಇಂತಹ ಕಾರ್ಯವೈಖರಿಯಿಂದಾಗಿ ರಾಜ್ಯದ ಯುವ ಸಮುದಾಯಕ್ಕೆ ಅನ್ಯಾಯವಾಗುತ್ತಿರುವುದು ಜಗಜ್ಜಾಹೀರಾದ ಸತ್ಯ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬಡವರ ಮಕ್ಕಳು ಎಷ್ಟು ಕಷ್ಟಪಡುತ್ತಾರೆ ಎಂಬುದರ ಅರಿವು ಕೆಪಿಎಸ್ಸಿ ಆಡಳಿತಗಾರರಿಗೆ ಇದ್ದಂತಿಲ್ಲ. ಒಂದು ವೇಳೆ ಅರಿವಿದ್ದರೂ ತಮಗೇನೂ ಗೊತ್ತಿಲ್ಲ ಎಂಬಂತಿದೆ ಅವರ ವರ್ತನೆ.

ಪರೀಕ್ಷೆಗೆ ಸಿದ್ಧತೆ ನಡೆಸಲು ಹೆಚ್ಚು ಅಧ್ಯಯನ, ತರಬೇತಿ ಬೇಕು. ಬಹುಪಾಲು ಉದ್ಯೋಗಾಕಾಂಕ್ಷಿಗಳು ಉನ್ನತ ಶಿಕ್ಷಣ ಮುಗಿದ ನಂತರ ಉದ್ಯೋಗಕ್ಕೂ ಸೇರದೆ ಪೂರ್ಣ ಪ್ರಮಾಣದಲ್ಲಿ ಪರೀಕ್ಷಾ ಸಿದ್ಧತೆಯಲ್ಲಿ ತೊಡಗುತ್ತಾರೆ. ತರಬೇತಿಗೆ ಸೇರುತ್ತಾರೆ. ಕಡಿಮೆ ಅವಧಿಯ ಈ ತರಬೇತಿಯ ಶುಲ್ಕ ಹೆಚ್ಚೇ ಇರುತ್ತದೆ. ಬಡವರು, ಮಧ್ಯಮ ವರ್ಗದ ಕುಟುಂಬಗಳಿಂದ ಬಂದ ಅಭ್ಯರ್ಥಿಗಳು ತರಬೇತಿ ಅವಧಿಯ ಖರ್ಚು ವೆಚ್ಚಗಳನ್ನು ಭರಿಸಲು ಸ್ವಿಗ್ಗಿ, ಜೊಮಾಟೊ ಮುಂತಾದ ಆನ್ಲೈನ್ ವೇದಿಕೆಗಳಲ್ಲಿ ಡೆಲಿವರಿ ಬಾಯ್ ಆಗಿ, ಕ್ಯಾಟರಿಂಗ್ ಸೇವೆ, ಪೆಟ್ರೋಲ್ ಬಂಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅರೆಕಾಲಿಕ ನೌಕರಿಗೆ ಸೇರುತ್ತಾರೆ. ಇವು ತಮ್ಮ ಶೈಕ್ಷಣಿಕ ಅರ್ಹತೆಗಿಂತಲೂ ಕಡಿಮೆ ಅರ್ಹತೆ ಬೇಡುವ ಉದ್ಯೋಗಗಳಾದರೂ ಅದು ಅವರಿಗೆ ಅನಿವಾರ್ಯ.

ಕೆಲವು ಅಭ್ಯರ್ಥಿಗಳಂತೂ ಇಂದಿರಾ ಕ್ಯಾಂಟೀನ್ಗಳಲ್ಲಿ ಊಟ ಮಾಡಿ, ಗ್ರಂಥಾಲಯಗಳಲ್ಲಿ ಮಲಗುತ್ತಿದ್ದಾರೆ. ಮತ್ತೂ ಕೆಲವು ಆಕಾಂಕ್ಷಿಗಳು ಉಚಿತವಾಗಿ ಊಟ ಲಭ್ಯವಿರುವ ಸ್ಥಳಗಳನ್ನು ಪತ್ತೆ ಮಾಡಿ, ಅಲ್ಲಿ ಊಟ ಮಾಡಿ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಎಲ್ಲೆಲ್ಲಿ ಊಚಿತ ಊಟ ಸಿಗುತ್ತದೆ ಎಂಬ ಮಾಹಿತಿಗಳನ್ನು ಹಂಚಿಕೊಳ್ಳುವ ವಾಟ್ಸ್ಆ್ಯಪ್ ಗ್ರೂಪ್ಗಳೂ ಇವೆ. ಇಂತಹ ಪರಿಸ್ಥಿತಿಗಳನ್ನು ಎದುರಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಯುವ ಸಮುದಾಯದವರು ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾರೆ. ಇದರೊಂದಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ನೇಮಕಾತಿ ವಿಳಂಬ, ಇನ್ನಿತರ ಸಮಸ್ಯೆಗಳು ಅವರ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತಿವೆಯಲ್ಲದೆ, ಅವರಲ್ಲಿ ಖಿನ್ನತೆಗೂ ಕಾರಣವಾಗುತ್ತಿವೆ. ಈ ರೀತಿಯ ಸನ್ನಿವೇಶದ ಸೃಷ್ಟಿಗೆ ಮೂಲ ಕಾರಣ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಎಂಬುದು ರಹಸ್ಯವೇನಲ್ಲ.

ಇದಕ್ಕೇನು ಮಾಡಬಹುದು?

ಆಯೋಗವು ಕಳೆದುಕೊಂಡಿರುವ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸರಿಪಡಿಸಲು ಕೆಪಿಎಸ್ಸಿ ತನ್ನ ಕಾರ್ಯವೈಖರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಅದು ಕೂಡ ಯುಪಿಎಸ್ಸಿ ಮಾದರಿಯಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿ ರೂಪುಗೊಳ್ಳಬಹುದು.

→ಆಯೋಗವು ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸಬೇಕು. ಜೊತೆಗೆ ಯುಪಿಎಸ್ಸಿ ಮಾದರಿಯಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅದರಂತೆ ನಡೆದುಕೊಳ್ಳಬೇಕು

→ಪಾರದರ್ಶಕತೆ ಹೆಚ್ಚಿಸಲು, ಭ್ರಷ್ಟಾಚಾರವನ್ನು ತಡೆಯಲು ಮತ್ತು ಅಭ್ಯರ್ಥಿಗಳಲ್ಲಿ ಆಯೋಗದ ಬಗ್ಗೆ ಮತ್ತೆ ವಿಶ್ವಾಸ ಬರುವಂತೆ ಮಾಡಲು, 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಕ್ಕೂ ಮೊದಲೇ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಅಂತಿಮ ಅಂಕಗಳನ್ನು ಪ್ರಕಟ ಮಾಡಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಈ ವಿಧಾನವನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಜಾರಿಗೆ ತರುತ್ತಿದೆ

→‘ಸಿ’ ಗುಂಪಿನ ಹುದ್ದೆಗಳಿಗೆ ನಡೆಯುವ ಎಲ್ಲ ಪರೀಕ್ಷೆಗಳಿಗೆ ಒಂದೇ ಪಠ್ಯಕ್ರಮ ಇರುವುದರಿಂದ, ಎಲ್ಲ ‘ಸಿ’ ಗುಂಪಿನ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್ಸಿಯು ಪ್ರತಿ ವರ್ಷಕ್ಕೆ ಒಂದು ಪರೀಕ್ಷೆಯನ್ನು ನಡೆಸಬಹುದು

l→ಉತ್ತರ ಪತ್ರಿಕೆ ತಿರುಚುವುದು, ಪ್ರಶ್ನೆಪತ್ರಿಕೆಗಳ ಸೋರಿಕೆ ತಡೆಯಲು ಮತ್ತು ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಒಎಂಆರ್ ಶೀಟ್ ಆಧಾರಿತ ಪರೀಕ್ಷೆಯ ಬದಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (ಸಿಬಿಟಿ) ಜಾರಿಗೆ ತರಬೇಕು

→ಅಗತ್ಯವಿರುವ ದಾಖಲೆಗಳ ಪರಿಶೀಲನಾ ಕಾರ್ಯದಲ್ಲಿ ಆರ್ಡಿ ಸಂಖ್ಯೆಯನ್ನು (ಜಾತಿ/ಆದಾಯ ಪ್ರಮಾಣಪತ್ರದಲ್ಲಿನ 12 ಅಂಕೆಗಳನ್ನು ಹೊಂದಿರುವ ವಿಶಿಷ್ಟ ಗುರುತಿನ ಸಂಖ್ಯೆ) ಬಳಸಿಕೊಂಡು ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಡೆಯಬೇಕು

→ಕರ್ನಾಟಕ ಆಡಳಿತ ಸೇವೆಗಳ (ಕೆಎಎಸ್) ಮಾದರಿಯಲ್ಲಿ ತಾಂತ್ರಿಕ ಹುದ್ದೆಗಳಿಗಾಗಿ ಕರ್ನಾಟಕ ಎಂಜಿನಿಯರಿಂಗ್ ಸೇವೆಗಳು (ಕೆಇಎಸ್) ಎಂಬ ವಿಭಾಗವನ್ನು ಸೃಷ್ಟಿಸಬೇಕು ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ತಾಂತ್ರಿಕ ಪರೀಕ್ಷೆ ನಡೆಸಬೇಕು

ಈ ಮೇಲಿನ ಕ್ರಮಗಳನ್ನು ತೆಗೆದುಕೊಂಡರೆ, ಕೆಪಿಎಸ್ಸಿಯ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ಕಾಣಬಹುದು ಹಾಗೂ ಈವರೆಗೂ ಮರೀಚಿಕೆಯಾಗಿರುವ, ಭ್ರಷ್ಟಾಚಾರ– ಸ್ವಜನಪಕ್ಷಪಾತದಿಂದ ಮುಕ್ತವಾದ, ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿ ಆದಂತಹ ನೇಮಕಾತಿಗಳು ನಡೆಯಬಹುದು ಎಂಬುದು ಅಭ್ಯರ್ಥಿಗಳು ಮತ್ತು ಕೆಪಿಎಸ್ಸಿಯ ಸುಧಾರಣೆಯನ್ನು ಬಯಸುವ ಎಲ್ಲರ ಅಭಿಪ್ರಾಯ. ಈ ದಿಸೆಯಲ್ಲಿ ಕೆಪಿಎಸ್ಸಿ ಗಮನಹರಿಸುತ್ತದೆ ಎಂಬುದು ನನ್ನದೂ ಸೇರಿದಂತೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ನಿರೀಕ್ಷೆ.

ಸರ್ಕಾರ ಏನು ಮಾಡಬೇಕು?

ಕೆಪಿಎಸ್ಸಿಯ ಸುಧಾರಣೆಗೆ ಸರ್ಕಾರವೂ ವಿಶೇಷ ಗಮನಹರಿಸಬೇಕು. ಇದರೊಂದಿಗೆ, ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವ ಬಗ್ಗೆ ತನ್ನ ಯೋಜನೆಯ ಮಾಹಿತಿಯನ್ನು ಸರ್ಕಾರ ಕನಿಷ್ಠ ಮೂರು ವರ್ಷ ಮುಂಚಿತವಾಗಿ ಕೆಪಿಎಸ್ಸಿಗೆ ನೀಡಬೇಕು. ಇದರಿಂದ ಆಯೋಗಕ್ಕೆ ನೇಮಕಾತಿಯ ಬಗ್ಗೆ ಅತ್ಯಂತ ವ್ಯವಸ್ಥಿತವಾಗಿ ಯೋಜನೆ ಮಾಡಲು ಸಾಧ್ಯವಾಗುತ್ತದೆ.

ಲೇಖಕಿ: ಉದ್ಯೋಗಾಕಾಂಕ್ಷಿಗಳ ಪರ ಹೋರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.