ಸರ್ಕಾರ, ಅಧಿಕಾರಿಗಳು ಹೊಣೆಗಾರಿಕೆ ಪ್ರದರ್ಶಿಸಲಿ

ಕೆಪಿಎಸ್ಸಿ ಎಂಬ ಭ್ರಷ್ಟರ ಸಂಸ್ಥೆಗೆ ಚಿಕಿತ್ಸೆ ನೀಡುವ ಸಲುವಾಗಿ, ಕರ್ನಾಟಕ ಲೋಕಸೇವಾ ಆಯೋಗ ಕಾಯ್ದೆ-1959ಕ್ಕೆ ಕೆಲವು ಅವಶ್ಯಕ ತಿದ್ದುಪಡಿ ಮಾಡಿ ಸಿದ್ಧಪಡಿಸಿದ ಮಸೂದೆಯನ್ನು ರಾಜ್ಯ ಸರ್ಕಾರ ಸಲ್ಲಿಸಿ ವರ್ಷವೇ ಕಳೆದರೂ ರಾಷ್ಟ್ರಪತಿಯವರು ಯಾವುದೇ ಕ್ರಮ ಜರುಗಿಸದಿರುವುದು ಖಂಡಿತ ಉಚಿತವಲ್ಲ. ಇದು ಒಂದು ರಾಜ್ಯದ ಹಾಗೂ ದೇಶದ ಲಕ್ಷಾಂತರ ಯುವಜನರ ಭವಿಷ್ಯ ಮತ್ತು ಜೀವನದ ಹಿತರಕ್ಷಣೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯ. ರಾಷ್ಟ್ರಪತಿ ಭವನದ ಹಿರಿಯ ಅಧಿಕಾರಿಗಳು ಇಂಥ ಮಸೂದೆಯನ್ನು ತುರ್ತು ವಿಲೇವಾರಿ ಮಾಡುವ ಬಗ್ಗೆ ರಾಷ್ಟ್ರಪತಿಯವರಿಗೆ ಮನವರಿಕೆ ಮಾಡುವ ಅಗತ್ಯ ಮತ್ತು ಅನಿವಾರ್ಯ ಇದೆ.

ಪ್ರಜೆಗಳ ಹಿತರಕ್ಷಣೆ ಮಾಡುವುದರ ಜೊತೆಗೆ ಅವರಿಗೆ ಭದ್ರತೆ, ಸುರಕ್ಷೆ ಮತ್ತು ನೆಮ್ಮದಿಯ ಜೀವನ ಕಲ್ಪಿಸುವುದೇ ನಮ್ಮ ಸಂವಿಧಾನದ ಮೂಲ ಆಶಯ. ಅದರ ಆದ್ಯತೆ ಕೂಡ ಹೌದು. ಜನರಿದ್ದರೆ ದೇಶ, ದೇಶವಿದ್ದರೆ ಸಂವಿಧಾನ, ಸಾಂವಿಧಾನಿಕ ಹುದ್ದೆ, ಅಧಿಕಾರ, ಸೌಲಭ್ಯ ಇತ್ಯಾದಿ. ಹಾಗಾಗಿ ಯಾವುದೇ ಹುದ್ದೆಯಲ್ಲಿದ್ದರೂ ಭಾರತೀಯರ ತೆರಿಗೆ ಹಣದಿಂದ ಸಂಬಳ ಸೌಲಭ್ಯ ಪಡೆಯುತ್ತಿರುವವರು, ತಾವು ನಿರ್ವಹಿಸುತ್ತಿರುವ ಕರ್ತವ್ಯ ಮಾಡುವಾಗ ಯಾವುದೇ ವಿಳಂಬವಿಲ್ಲದೇ, ಪ್ರಸ್ತಾವಿತ ವಿಷಯದಲ್ಲಿನ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಸೂಕ್ತ ಕ್ರಮ ಜರುಗಿಸುವ ಹೊಣೆಗಾರಿಕೆಯ ನಡವಳಿಕೆ ಪ್ರದರ್ಶಿಸಲೇಬೇಕು.

ದೇಶದ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯ ಅಪಸವ್ಯಗಳನ್ನು ನೋಡಿದರೆ ಯಾವುದೇ ಸರ್ಕಾರ, ಸಾಂವಿಧಾನಿಕವಾದ ಉನ್ನತ ಹುದ್ದೆಗಳಲ್ಲಿ ಇರುವವರು ತಮ್ಮ ಕರ್ತವ್ಯಗಳಲ್ಲಿ ಜವಾಬ್ದಾರಿಯುತ ಕಳಕಳಿ, ಪ್ರಾಮಾಣಿಕ ಬದ್ಧತೆಯನ್ನು ತೋರುತ್ತಿಲ್ಲ ಎನ್ನುವುದು ಅತ್ಯಂತ ಕಳಕವಳಕಾರಿ ಸಂಗತಿ. ಎಲ್ಲರೂ ತಮ್ಮ ತಮ್ಮ ಅಧಿಕಾರ, ಸ್ಥಾನಮಾನ ಉಳಿಸಿಕೊಳ್ಳುವ ಅಥವಾ ಗಳಿಸಿಕೊಳ್ಳುವ ಯೋಚನೆ, ಯೋಜನೆಗಳಲ್ಲೇ ಸದಾಕಾಲವೂ ನಿರತರಾಗಿರುತ್ತಾರೆ.

ಆಡಳಿತ ನಡೆಸುವವರು ಅಧಿಕಾರ ಶಾಶ್ವತ ಅಲ್ಲ ಎಂಬ ಸತ್ಯವನ್ನು ಅರ್ಥೈಸಿಕೊಂಡು ಕೆಪಿಎಸ್ಸಿಯಂತಹ ಸಂಸ್ಥೆಗಳನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಮಾಡಬೇಕು.

-ಎಸ್.ಎನ್.ರಮೇಶ್, ಸಾತನೂರು, ಮಂಡ್ಯ

ಯುವಜನರ ಪಾಲಿಗೆ ‘ನಿರಾಶಾ ಸೌಧ’

‘ಪ್ರಜಾವಾಣಿ’ಯು ಕರ್ನಾಟಕ ಲೋಕಸೇವಾ ಆಯೋಗದ ಕುರಿತು ನಿರಂತರವಾಗಿ ಚರ್ಚೆ ನಡೆಸುತ್ತಿದೆ. ವಿಧಾನಸಭಾ ಅಧಿವೇಶನದಲ್ಲಿಯೂ ಈ ಬಗ್ಗೆ ಚರ್ಚೆ ಆಗಿದೆ. ಕನ್ನಡ ಸಿನೆಮಾವೊಂದರಲ್ಲಿ ‘ಯಾರೇ ಕೂಗಾಡಲಿ ಊರೇ ಹೋರಾಡಲಿ' ಹಾಡಿನಲ್ಲಿ ‘ಎಮ್ಮೆ’ ಕುರಿತು ಅರ್ಥಪೂರ್ಣವಾಗಿ ಬರೆಯಲಾಗಿದೆ. ಎಮ್ಮೆಯಾದರೂ ‘ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕ್ಕಿಂತ ಕೀಳು’ ಎನ್ನುವ ಸಾಲುಗಳು ಕನ್ನಡಿಗರ ನಡುವೆ ಪ್ರತಿಧ್ವನಿಸುತ್ತಿವೆ.

ಆ ‘ಎಮ್ಮೆ’ ಜಾಗಲ್ಲಿ ‘ಕೆಪಿಎಸ್ಸಿ’ ಹಾಕಿದರೆ ವ್ಯತ್ಯಾಸ ಏನೂ ಆಗದು. ಉದ್ಯೋಗ ಸೌಧ ಯುವಜನರ ಪಾಲಿಗೆ ನಿರಾಸೆಯ ಸೌಧವಾಗಿದೆ. ನಮಗೂ ಇದರ ಬಿಸಿ ಏನು ಅಂತ ಗೊತ್ತಾಗಿದೆ. ಏನು ಹೇಳಿದರೂ ಪ್ರಯೋಜನವಿಲ್ಲ, ಕಾಲ ಮಿಂಚಿಹೋಗಿದೆ.

ಪತ್ರಿಕೆಯಲ್ಲಿ ಸಿಬ್ಬಂದಿ ಅಕ್ರಮಗಳ ಕುರಿತು ವಿವರಗಳಿವೆ. ಆದರೆ ಸಾಬೀತು ಮಾಡಲು ಸಾಧ್ಯವಿಲ್ಲದ ಕಾರಣ ಕಾಣದ ಕೈಗಳು ಇಲ್ಲಿ ಬಂದು ಸೇರುತ್ತಿವೆ. ಎಷ್ಟೋ ಬಾರಿ ಸದಸ್ಯರ ಮೇಲೂ ಆಪಾದನೆಗಳು ಬಂದಿವೆ. ಸದಸ್ಯರಾಗಲು ತುಂಬಾ ‘ಸಾಹಸಗಳು’ ನಡೆಯುತ್ತವೆ ಎಂಬ ಗುಸುಗುಸು ಕೇಳಿ ಬರುತ್ತಿದೆ. ಇವರನ್ನು ತಂದು ಕೂರಿಸುವ ಮಂದಿ ಯಾರು ಎಂಬುದು ಗುಟ್ಟಿನ ವಿಚಾರವೇನಲ್ಲ.

‘ವ್ಯಕ್ತಿತ್ವ ಪರೀಕ್ಷೆ’ ಎನ್ನುವುದು ಅಭ್ಯರ್ಥಿ ಎಷ್ಟು ಹಣ ಕೊಡುತ್ತಾನೆ ಎಂಬುದರ ಮೇಲೆ ನಿರ್ಧಾರವಾಗಬಾರದು. ಅದು ಆತನ ನಿಜವಾದ ಕಾರ್ಯ ನಿರ್ವಹಣಾ ಸಾಮರ್ಥ್ಯವನ್ನು ಅಳೆಯುವ ಪರೀಕ್ಷೆಯಾಗಬೇಕು.

ನಾಡಿಗೆ ಉತ್ತಮ ಅಧಿಕಾರಿಗಳನ್ನು ಕೊಡುವ ಮಹತ್ತರ ಜವಾಬ್ದಾರಿ ಹೊತ್ತಿರುವ ಕೆಪಿಸಿಎಸ್ ಇನ್ನಾದರೂ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲಿ. ಕಳಂಕದಿಂದ ಪಾರಾಗಲು ಸಮರ್ಥರ ಸಮೂಹದೊಂದಿಗೆ ಸಾಗಿ ಯುವಜನರ ಬದುಕಿಗೆ ಬೆಳಕಾಗಲಿ.

ತಿರುಪತಿ ನಾಯಕ್, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.