ಯುಪಿಎಸ್‌ಸಿ ಕೇಂದ್ರ ನಾಗರಿಕ ಸೇವಾ ಅಧಿಕಾರಿಗಳ ನೇಮಕಾತಿ ಮಾಡುತ್ತದೆ. ಶತಮಾನದಷ್ಟು ಇತಿಹಾಸವಿರುವ ಆಯೋಗವು ನಿಷ್ಪಕ್ಷಪಾತ, ಪಾರದರ್ಶಕ ಪರೀಕ್ಷಾ ಪದ್ಧತಿಗೆ ಹೆಸರಾಗಿದೆ. ಈ ಸ್ವಾಯತ್ತ ಸಂಸ್ಥೆಯು ರಾಜಕೀಯದ ನಂಟಿನಿಂದ ದೂರ ಉಳಿದಿದೆ. ಆದರೆ, 75 ವರ್ಷಗಳ ಹಿಂದೆ ಸ್ಥಾಪನೆಯಾದ ಕೆಪಿಎಸ್‌ಸಿ ಇತಿಹಾಸವು ಹಗರಣ, ವಿವಾದಗಳಿಂದ ತುಂಬಿಹೋಗಿದೆ. ಯುಪಿಎಸ್‌ಸಿಗೆ ಸಾಧ್ಯವಾಗಿದ್ದು ಕೆಪಿಎಸ್‌ಸಿಗೆ ಸಾಧ್ಯವಾಗದೇ ಹೋದದ್ದು ಏಕೆ, ಯುಪಿಎಸ್‌ಸಿ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ...