ಬೆಂಗಳೂರು: ಕೆಎಸ್ಆರ್ಟಿಸಿ ಕೆಲವು ಮಾರ್ಗಗಳಲ್ಲಿ ಫೋನ್ ಪೇ ಹೊರತುಪಡಿಸಿ ಉಳಿದ ಯುಪಿಐ ಆಧಾರಿತ ಪಾವತಿಯಲ್ಲಿ ಸಮಸ್ಯೆ ಉಂಟಾಗುತ್ತಿದೆ.

‘ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದೆ. ಗೂಗಲ್ ಪೇ ಮಾಡಲು ಸ್ಕ್ಯಾನ್ ಮಾಡಿದರೆ ಆಗಲೇ ಇಲ್ಲ. ನನ್ನ ಹತ್ತಿರ ನಗದು ಕೂಡ ಇರಲಿಲ್ಲ. ಸಹ ಪ್ರಯಾಣಿಕರಿಗೆ ಗೂಗಲ್ ಪೇ ಮೂಲಕ ಪಾವತಿಸಿ ಅವರಿಂದ ನಗದು ಪಡೆದು ನಿರ್ವಾಹಕರಿಗೆ ನೀಡಿ ಟಿಕೆಟ್ ಪಡೆಯಬೇಕಾಯಿತು’ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

‘ಎರಡು ವಾರದಿಂದ ಈ ಸಮಸ್ಯೆ ಆಗುತ್ತಿದೆ. ನಾನು ಮೈಸೂರಿಗೆ ಹೋಗುವಾಗಲೂ ವಾಪಸ್ ಬರುವಾಗಲೂ ಗೂಗಲ್ ಪೇ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಮೈಸೂರು–ಬೆಂಗಳೂರು ನಡುವೆ ಓಡಾಡುವ ಪ್ರಯಾಣಿಕರು ಹೇಳಿದ್ದಾರೆ.

‘ಬೆಂಗಳೂರು–ಮೈಸೂರು ಮಾರ್ಗದಲ್ಲಿ ಈ ಸಮಸ್ಯೆ ಉಂಟಾಗಿರುವ ಬಗ್ಗೆ ನಮಗೂ ದೂರುಗಳು ಬಂದಿವೆ. ಎಲ್ಲ ಯುಪಿಐಗಳನ್ನು ನಿರ್ವಹಿಸುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ದ (ಎನ್ಪಿಸಿಐ) ಗಮನಕ್ಕೆ ತಂದಿದ್ದೇವೆ’ ಕೆಎಸ್ಆರ್ಟಿಸಿ ಉಪಮುಖ್ಯ ಗಣಕ ವ್ಯವಸ್ಥಾಪಕಿ ಸುಧಾರಾಣಿ ತಿಳಿಸಿದರು.

‘ರಾಜ್ಯದ ಬೇರೆ ಮಾರ್ಗಗಳಲ್ಲಿ ಇಂಥ ಸಮಸ್ಯೆ ಉಂಟಾಗಿಲ್ಲ. ಬೆಂಗಳೂರು ಮೈಸೂರು ಮಾರ್ಗದಲ್ಲಿ ಮಾತ್ರ ಅದೂ ನಿರ್ದಿಷ್ಟ ಪ್ರದೇಶದಲ್ಲಿ ಈ ತರಹ ಆಗುತ್ತಿದೆ. ಇದನ್ನು ಎನ್ಪಿಸಿಐ ಗಮನಕ್ಕೆ ತಂದಾಗ ಅವರು ಪರಿಶೀಲಿಸಿದರು. ಫೋನ್ ಪೇ, ಗೂಗಲ್ ಪೇ ಎರಡೂ ಯುಪಿಐ ಆಗಿದ್ದರೂ ಸರ್ವರ್ ನೆಟ್ವರ್ಕ್ಗಳು ಬೇರೆ ಬೇರೆ. ಒಂದು ನೆಟ್ವರ್ಕ್ ವಿಫಲವಾಗುತ್ತಿದೆ. ಎರಡು ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಎನ್ಪಿಸಿಐ ತಂತ್ರಜ್ಞರು ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.

‘ಯುಪಿಐ ಆಧಾರಿತ ಪಾವತಿ ಮೂಲಕವೇ ಸಂಸ್ಥೆಗೆ ಪ್ರತಿದಿನ ಸರಾಸರಿ ₹1.61 ಕೋಟಿ ವರಮಾನ ಬರುತ್ತಿದೆ. ಪ್ರಯಾಣಿಕರಿಗೆ ಉಂಟಾಗುತ್ತಿರುವ ಈ ಸಮಸ್ಯೆ ಶೀಘ್ರದಲ್ಲಿ ಪರಿಹಾರಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಂಟಿಸಿಯಲ್ಲೂ ಸಮಸ್ಯೆ

ಬಿಎಂಟಿಸಿ ಬಸ್ಗಳಲ್ಲಿ ಡೈನಾಮಿಕ್ ಕ್ಯೂಆರ್ ಕೋಡ್ ಇರುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷಿನ್ (ಇಟಿಎಂ) ಪರಿಚಯಿಸಿದ ಬಳಿಕ ಅಲ್ಲಿಯೂ ಆಗಾಗ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ.

‘ಇಟಿಎಂಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಸ್ಕ್ಯಾನ್ ಆಗದೇ ಪಾವತಿ ವಿಫಲವಾದಾಗ ಹಣ ಕೊಡಿ ಎಂದು ನಿರ್ವಾಹಕರು ಕೇಳುತ್ತಾರೆ. ಹಣ ಇಲ್ಲ ಸ್ಕ್ಯಾನರ್ ಇದೆ ಎಂದು ಬಂದಿದ್ದೇವೆ ಎಂದರೆ, ನಾವೇನು ಮಾಡಕ್ಕಾಗಲ್ಲ. ದುಡ್ಡು ಕೊಡಿ ಇಲ್ಲ ಇಳಿದು ಬಿಡಿ ಎಂದು ನಿರ್ವಾಹಕರು ಹೇಳುತ್ತಿದ್ದಾರೆ’ ಎಂದು ಪ್ರಯಾಣಿಕರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.