ಗುರುವಾರ, 11 ಜೂನ್ 2026
×
ADVERTISEMENT

ಸಾರಿಗೆ ಮುಷ್ಕರ ಸಂಭವ

ಆಡಳಿತ ವರ್ಗದ ಮನವಿಗೆ ಒಪ್ಪದ ಜಂಟಿ ಕ್ರಿಯಾ ಸಮಿತಿ
Published : 19 ಮೇ 2026, 0:15 IST
Last Updated : 19 ಮೇ 2026, 0:15 IST
ADVERTISEMENT
ಫಾಲೋ ಮಾಡಿ
Comments
ಮುಂಜಾಗರೂಕತಾ ಕ್ರಮ
ಮುಷ್ಕರ ಅವಧಿಯಲ್ಲಿ ಬಸ್‌ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು  ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ  ಅಕ್ರಂ ಪಾಷ ಅವರು ಹಿರಿಯ/ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಾರ್ಯ ವ್ಯವಸ್ಥಾಪಕರು ತರಬೇತಿ ಕೇಂದ್ರದ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ನಿಯಂತ್ರಣಾಧಿಕಾರಿಗಳು ಪೊಲೀಸ್‌ ಇಲಾಖೆ ಸಾರಿಗೆ ಇಲಾಖೆ ಸಹಿತ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅಗತ್ಯ ಬಿದ್ದರೆ ಖಾಸಗಿ ಬಸ್‌ಗಳನ್ನೂ ಬಳಸಿಕೊಳ್ಳಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ವಾಪಸ್‌ ತೆಗೆದುಕೊಳ್ಳುವ ವಿಶ್ವಾಸವಿದೆ. ತೆಗೆದುಕೊಂಡಿಲ್ಲ ಅಂದರೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಸ್ಮಾ ಜಾರಿ: ಅಕ್ರಂ ಪಾಷ ಎಚ್ಚರಿಕೆ
‘ಸಾರಿಗೆ ನಿಗಮಗಳು ಅಗತ್ಯ ಸೇವಾ ನಿರ್ವಹಣಾ ಕಾಯ್ದೆ–2013 (ಎಸ್ಮಾ) ಅಡಿಯಲ್ಲಿ ಇರುವ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಗಳಾಗಿರು ವುದರಿಂದ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವಂತಿಲ್ಲ. ಹಾಗಿದ್ದೂ ಪಾಲ್ಗೊಂಡರೆ ಶಿಸ್ತುಕ್ರಮ ಮತ್ತು ವೇತನ ಕಡಿತಗೊಳಿಸಲಾಗುವುದು’ ಎಂದು ಎಚ್ಚರಿಸಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಎಸ್ಮಾ ಜಾರಿ ಮಾಡಿದ್ದಾರೆ. ‘ಎಸ್ಮಾ ಜಾರಿ ಇದ್ದಾಗ ಯಾವುದೇ ಸಂಘ ಸಂಸ್ಥೆಗಳು, ವ್ಯಕ್ತಿಗಳು ಮುಷ್ಕರಕ್ಕೆ ಪ್ರಚೋದನೆ ನೀಡುವಂತಿಲ್ಲ. ಜಂಟಿ ಕ್ರಿಯಾ ಸಮಿತಿಯವರು ಆಡಳಿತ ಮಂಡಳಿಗೆ ನೀಡಿರುವ ಮುಷ್ಕರದ ನೋಟಿಸ್‌ ಕುರಿತ ವಿವಾದವು ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದ ಹಂತದಲ್ಲಿದೆ. ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದೇ ದೈನಂದಿನ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT