ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಈ ಮಾಹಿತಿ ಮುಚ್ಚಿಟ್ಟಿದೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿಯ ಪ್ರಕಾರ ರಾಜ್ಯದಲ್ಲಿ, 2023ರಲ್ಲಿ 2,423 ಮತ್ತು 2024ರಲ್ಲಿ 2,971 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

‘ಒಟ್ಟು ಈ ಅವಧಿಯಲ್ಲಿ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವು ಪತ್ರಿಕೆಗಳು ಹನ್ನೆರಡು ದಿನಗಳ ಹಿಂದೆ ವರದಿ ಮಾಡಿದ್ದವು. ಸರ್ಕಾರವು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ಕಾದು ನೋಡಿದೆ. ಆದರೆ, ಸರ್ಕಾರವು ಈವರೆಗೂ ತುಟಿಬಿಚ್ಚಿಲ್ಲ. ಬದಲಿಗೆ ಸಾಧನಾ ಸಮಾವೇಶಗಳ ನೆಪದಲ್ಲಿ ಸಂಭ್ರಮಾಚರಣೆ ನಡೆಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇವರ ಗ್ಯಾರಂಟಿಗಳು ಉತ್ತಮವಾಗಿದ್ದರೆ ಮತ್ತು ಅವುಗಳಿಂದ ಜನರಿಗೆ ಅನುಕೂಲವಾಗಿದ್ದು ನಿಜವೇ ಆಗಿದ್ದರೆ, ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಸರ್ಕಾರಕ್ಕೆ ಆತ್ಮಹತ್ಯೆಯ ಅಂಕಿಅಂಶಗಳು ಗೊತ್ತಿಲ್ಲವೇ ಅಥವಾ ಬೇಕೆಂದು ಈ ಮಾಹಿತಿಯನ್ನು ಮುಚ್ಚಿಟ್ಟಿದೆಯೇ? ಸರ್ಕಾರದ ವರ್ತನೆ ನೋಡಿದರೆ ಬೇಕೆಂದೇ ಸಾರ್ವಜನಿಕರಿಂದ ಈ ಮಾಹಿತಿ ಮುಚ್ಚಿಟ್ಟಿದೆ ಎಂಬುದು ದೃಢವಾಗುತ್ತದೆ’ ಎಂದರು.

‘ಇವರು ಸಾಧನ ಸಮಾವೇಶ ಮಾಡಿದಾಗಲೆಲ್ಲಾ ಕಂದಾಯ ಇಲಾಖೆ ಕಾರ್ಯಕ್ರಮಗಳು, ಹಕ್ಕುಪತ್ರ ವಿತರಣೆ ಬಗ್ಗೆ ಮಾತನಾಡುತ್ತಾರೆ. ತುಮಕೂರಿನ ಸಮಾವೇಶದಲ್ಲೂ ಈ ಬಗ್ಗೆಯೇ ಮಾತನಾಡಿದ್ದಾರೆ. ಆದರೆ ರೈತರು ಕಂದಾಯ ಇಲಾಖೆ ಬಗ್ಗೆಯೇ ಹೆಚ್ಚು ದೂರು ಹೊತ್ತು ಬರುತ್ತಾರೆ. ರೈತರ ಜಮೀನಿನ ಸಮಸ್ಯೆ ಬಗೆಹರಿಯದೇ ಇದ್ದರೂ, ಭೂಗ್ಯಾರಂಟಿ ಹೆಸರಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.