ಬೆಂಗಳೂರು: ‘ಸ್ವತಂತ್ರ ಸರ್ಕಾರ ರಚಿಸಲು ಜೆಡಿಎಸ್ಗೆ ಅವಕಾಶ ನೀಡಿ. ಬೆಂಗಳೂರು ಮತ್ತು ರಾಜ್ಯದಲ್ಲಿ ಅಭಿವೃದ್ಧಿಗೆ ಬಡಿದಿರುವ ಗ್ರಹಣವನ್ನು ಬಿಡಿಸುತ್ತೇನೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಕ್ಷದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ‘ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಾವೇಶ’ವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೆ. ನಂತರ ಬಂದ ಸರ್ಕಾರಗಳು ಆ ಕಾರ್ಯಕ್ರಮಗಳನ್ನು ಕಡೆಗಣಿಸಿದವು’ ಎಂದರು.

‘ನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳ ವೃತ್ತದವರೆಗೆ ನಾಲ್ಕು ಪಥಗಳ ಸುರಂಗ ರಸ್ತೆ ನಿರ್ಮಿಸಲು ಟೆಂಡರ್ ಕರೆದಿದ್ದೆವು. ನಮ್ಮ ಸರ್ಕಾರ ಹೋದ ಮೇಲೆ ಆ ಯೋಜನೆಯೂ ಹೋಯಿತು. ಈಗಿನ ಸರ್ಕಾರ ಅಂಥದ್ದೇ ಯೋಜನೆ ಜಾರಿಗೆ ಮುಂದಾಗಿದೆ. ನಾನು ₹3,000 ಕೋಟಿ ವೆಚ್ಚದ ಯೋಜನೆ ರೂಪಿಸಿದ್ದರೆ, ಇವರು ₹28,000 ಕೋಟಿ ವೆಚ್ಚ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನಗರದಲ್ಲಿ ಯಾವೊಂದು ರಸ್ತೆಗಳೂ ಗುಂಡಿಗಳಿಂದ ಮುಕ್ತವಾಗಿಲ್ಲ. ಕಸದ ರಾಶಿ ಎಲ್ಲೆಡೆ ಬಿದ್ದಿದೆ. ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಇವುಗಳಿಂದ ನಗರ ಮುಕ್ತವಾಗಬೇಕು ಅಂದರೆ ನಮ್ಮ ಸರ್ಕಾರ ಬರಬೇಕು. ಆಗ ಯಾರ ಎದುರೂ ಕೈಜೋಡಿಸುವ ಸ್ಥಿತಿ ಬರುವುದಿಲ್ಲ. ಅಭಿವೃದ್ಧಿ ಕಾರ್ಯ ನಡೆಸಬಹುದು. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳ ಚುನಾವಣೆಗಳಿಂದಲೇ ಆಗಬೇಕು. ಟಿಕೆಟ್ ಆಕಾಂಕ್ಷಿಗಳು, ಪಕ್ಷದ ನಾಯಕರು ಪ್ರತಿ ವಾರ್ಡ್ನಲ್ಲಿ ದಿನ ಒಂದು ಗಂಟೆ ಸಮಯ ವಿನಿಯೋಗಿಸಿದರೂ ನಾವು ಗೆಲ್ಲಬಹುದು’ ಎಂದರು.

ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ‘ಈ ಸರ್ಕಾರಕ್ಕೆ ಜಿಬಿಎ ಪಾಲಿಕೆಗಳ ಚುನಾವಣೆ ನಡೆಸುವ ಉದ್ದೇಶವಿಲ್ಲ. ನ್ಯಾಯಾಲಯ ಆದೇಶಿಸಿದೆ ಎಂಬ ಮಾತ್ರಕ್ಕಷ್ಟೇ ಚುನಾವಣೆ ನಡೆಯಬೇಕು. ಅದು ಯಾವಾಗ ನಡೆದರೂ, ನಾವು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಪ್ರಮುಖರ ಸಮಿತಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಪಕ್ಷದ ಜಿಬಿಎ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ಗೌಡ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಸಿದ್ದರಾಮಯ್ಯ ವಿರುದ್ಧ ದೇವೇಗೌಡ ವಾಗ್ದಾಳಿ

‘ಸಿದ್ದರಾಮಯ್ಯ ಯಾವತ್ತಿಗೂ ಸಾಮಾಜಿಕ ನ್ಯಾಯದ ಪರ ಇರಲಿಲ್ಲ’ ಎಂದು ಎಚ್.ಡಿ.ದೇವೇಗೌಡ ಹೇಳಿದರು. ‘ತಾನು ಸಾಮಾಜಿಕ ನ್ಯಾಯದ ಪರ ಇದ್ದೇನೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸಿದ್ದರಾಮಯ್ಯ ತಮ್ಮ ಆತ್ಮವನ್ನು ಪ್ರಶ್ನಿಸಿಕೊಳ್ಳಬೇಕು. ರಾಜಕೀಯವಾಗಿ ತಾವು ಮೇಲೆ ಬರಲು ಅವರು ಸಾಮಾಜಿಕ ನ್ಯಾಯ ಮತ್ತು ಅಹಿಂದ ಎಂಬುದನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ’ ಎಂದು ಆರೋಪಿಸಿದರು. ‘ಒಬ್ಬ ಮುಸ್ಲಿಂ ನಾಯಕನನ್ನು ಚುನಾವಣೆಯಲ್ಲಿ ಗೆಲ್ಲಿಸಲು ದರಿದ್ರ ನಾರಾಯಣ ರ್ಯಾಲಿ ನಡೆಸಿದೆವು. ಆ ರ್ಯಾಲಿಗೆ ಸಿದ್ದರಾಮಯ್ಯ ಬರಲಿಲ್ಲ. ವೇದಿಕೆ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಸುಮ್ಮನೆ ಬಂದು ಹಾಜರಿ ಹಾಕಿ ಹೋದರು. ತಾನು ಅಹಿಂದ ನಾಯಕ ಎಂದು ಕರೆದುಕೊಳ್ಳುವವರು ನಮ್ಮ ಸರ್ಕಾರವನ್ನು ಬೀಳಿಸಿದರು. ಸಾಮಾಜಿಕ ನ್ಯಾಯ ಮತ್ತು ಅಹಿಂದದ ಬಗ್ಗೆ ಅವರಿಗೆ ಇರುವ ಬದ್ಧತೆ ಇಂಥದ್ದು’ ಎಂದು ಟೀಕಿಸಿದರು. ಕುಮಾರಸ್ವಾಮಿ ‘ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಸಮಾಜಗಳನ್ನು ಒಡೆದು ಲಾಭ ಮಾಡಿಕೊಳ್ಳುತ್ತಿದ್ದೀರಿ. ಆಯೋಗದ ಮೇಲೆ ಆಯೋಗ ರಚನೆ ಮಾಡಿದ್ದೀರಿ. ನಿಮ್ಮ ಕಾಂತರಾಜು ವರದಿ ಎಲ್ಲಿ ಹೋಯಿತು? ಜಯಪ್ರಕಾಶ್ ಹೆಗಡೆ ಅವರಿಂದ ಪಡೆದುಕೊಂಡ ವರದಿಯನ್ನು ಎಲ್ಲಿ ಇಟ್ಟಿದ್ದೀರಿ? ನೇಮಕಾತಿ ಪ್ರಕ್ರಿಯೆ ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದರು.

‘ಗಾರ್ಬೇಜ್ ಬ್ಯಾಡ್ರೋಡ್’

‘ಬಿಬಿಎಂಪಿಯ ಹೆಸರನ್ನು ಜಿಬಿಎ ಬದಲಾಯಿಸಿದ್ದಷ್ಟೇ ಈ ಸರ್ಕಾರದ ಸಾಧನೆ. ಜಿ ಅಂದರೆ ಗಾರ್ಬೇಜ್ ಬಿ ಅಂದರೆ ಬ್ಯಾಡ್ರೋಡ್ ಎ ಅಂದರೆ ಎ ಖಾತಾ ಹಗರಣ ಎಂಬಂತಾಗಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಬೆಂಗಳೂರು ಅಭಿವೃದ್ಧಿಗೆ ದೇವೇಗೌಡರ ಕೊಡುಗೆ ಏನು ಎಂಬುದು ನಗರದ ಜನರ ಮನಸ್ಸಿನಲ್ಲಿ ಇದೆ. ಅವರು ಅಧಿಕಾರದಲ್ಲಿ ಇದ್ದಾಗ ಸಿಂಗಪೂರ ಸರ್ಕಾರದ ಜತೆ ಮಾತನಾಡಿ ವೈಟ್ಫೀಲ್ಡ್ನಲ್ಲಿ 40000 ಉದ್ಯೋಗ ಸೃಷ್ಟಿಸಿದ್ದರು. ಐಟಿ–ಬಿಟಿ ಕಂಪನಿಗಳಿಗೆ ತೆರಿಗೆ ವಿನಾಯತಿ ನಗರದ ರಸ್ತೆಗಳಲ್ಲಿ ಮೇಲ್ಸೇತುವೆ ಮತ್ತು ಕಾವೇರಿ ನಾಲ್ಕನೇ ಹಂತದಲ್ಲಿ ನಗರಕ್ಕೆ ನೀರು ಒದಗಿಸಿದ ಶ್ರೇಯ ದೇವೇಗೌಡರದ್ದು. ನಗರದ ಅಭಿವೃದ್ಧಿಗೆ ನಾವು ಏನು ಮಾಡಿದ್ದೇವೆ ಮತ್ತು ಮಾಡಲಿದ್ದೇವೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದರು. ‘2028ಕ್ಕೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಇದಕ್ಕಾಗಿ ಜಿಬಿಎ ಪಾಲಿಕೆಗಳ ಚುನಾವಣೆಯಿಂದಲೇ ಕಾರ್ಯಪ್ರವೃತ್ತರಾಗಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.