ಕೆ.ಆರ್. ನಗರ (ಮೈಸೂರು ಜಿಲ್ಲೆ): ‘ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಗಳಿಂದ ಅಭಿವೃದ್ಧಿಶೀಲ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ’ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಬಸವನಪುರ, ಗೇರದಡ ಹಾಗೂ ಕೆಂಚನಹಳ್ಳಿ ಗ್ರಾಮಗಳ ಮೇಲನಕಟ್ಟೆ ಗಣಪತಿ ದೇವಾಲಯ ಲೋಕಾರ್ಪಣೆ, ಹೊಸಅಗ್ರಹಾರ ಗ್ರಾಮದಲ್ಲಿನ ಬಸವೇಶ್ವರ ಸ್ವಾಮಿ ದೇವಾಲಯದ ಗೋಪುರ ಲೋಕಾರ್ಪಣೆ ಹಾಗೂ ಬಸವೇಶ್ವರ ದೇವರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಿಳೆಯರಿಗೆ ₹2ಸಾವಿರ ಕೊಡುತ್ತಿದ್ದಾರೆ ಎಂಬುದೇನೋ ಸರಿ. ಆದರೆ, ಆ ಮೊತ್ತವನ್ನು ರಾಜ್ಯ ಸರ್ಕಾರ ಹೇಗೆ ಕೊಡುತ್ತಿದೆ ಎಂಬುದನ್ನು ಜನರು ಗಮನಿಸಬೇಕು. ಸಾಲ ಮಾಡಿ ತುಪ್ಪ ತಿನ್ನು ಎನ್ನುವಂತೆ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಸುರಿಯುತ್ತಿದೆ. ಈಗಾಗಲೇ ಈ ಸರ್ಕಾರ ₹7.26 ಲಕ್ಷ ಕೋಟಿ ಸಾಲ ಮಾಡಿದೆ. ಈ ಮೂಲಕ ರಾಜ್ಯದ ಪ್ರತಿಯೊಬ್ಬರ ಮೇಲೂ ಕನಿಷ್ಠ ₹ 1 ಲಕ್ಷ ಸಾಲ ಹೇರಿದೆ’ ಎಂದು ದೂರಿದರು.

‘ಇದನ್ನು ನಾನು ಎಲ್ಲಿ ಬೇಕಾದರೂ ಹೇಳುತ್ತೇನೆ. ಯಾವ ವೇದಿಕೆಯಲ್ಲಿ ಬೇಕಾದರೂ ಚರ್ಚೆಗೆ ತಯಾರಿದ್ದೇನೆ. ಅವರಿಗೆ ಧೈರ್ಯವಿದ್ದರೆ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

‘ಗ್ಯಾರಂಟಿಗಳ ಪರಿಣಾಮದಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಸಕಾಲಕ್ಕೆ ಸರ್ಕಾರಿ ನೌಕರಿಗೆ ಸಂಬಳ ಕೊಡುವ ಶಕ್ತಿಯನ್ನೂ ಸರ್ಕಾರ ಕಳೆದುಕೊಂಡಿದೆ. ಹಾಗೆಯೇ ಗ್ಯಾರಂಟಿಗಳ ಆಮಿಷವೊಡ್ಡಿ ಹಿಮಾಚಲಪ್ರದೇಶದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷವು ಆ ರಾಜ್ಯವನ್ನೂ ಆರ್ಥಿಕವಾಗಿ ಹಾಳು ಮಾಡಿದೆ. ಅಧಿಕಾರಿಗಳ ವೇತನದಲ್ಲಿ ಕಡಿತಗೊಳಿಸುತ್ತಿದೆ. ಆ ರಾಜ್ಯದ ಅಧಿಕಾರಿ ವರ್ಗದ ಮುಖ್ಯಸ್ಥರಾಗಿರುವ ಮುಖ್ಯ ಕಾರ್ಯದರ್ಶಿ ವೇತನವನ್ನೂ ಕಡಿತ ಮಾಡಲಾಗಿದೆ ಎಂಬ ವರದಿಗಳು ಮಾಧ್ಯಮದಲ್ಲಿ ಬಂದಿದೆ. ಹಿಮಾಚಲಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕೂ ಬರಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೆಲವು ವರ್ಷಗಳ ಹಿಂದೆ ಶ್ರೀಲಂಕಾ ಪರಿಸ್ಥಿತಿ ಏನಾಗಿತ್ತು ಎಂಬುದನ್ನು ಎಲ್ಲರೂ ಗಮನಿಸಿದ್ದೇವೆ. ಇವರು ಇದೇ ರೀತಿಯಲ್ಲಿ ಆರ್ಥಿಕ ವ್ಯವಸ್ಥೆಯನ್ನು ಕಳಪೆಯಾಗಿ ನಿರ್ವಹಿಸಿದರೆ ಶ್ರೀಲಂಕಾದ ಪರಿಸ್ಥಿತಿಯೇ ಕರ್ನಾಟಕಕ್ಕೂ ಬರಲಿದೆ’ ಎಂದರು.

‘ಮಹಿಳೆಯರು ₹2ಸಾವಿರ ಪಡೆದು ಸಂಸಾರ ನಿರ್ವಹಣೆ ಮಾಡಲು ಸಾಧ್ಯವೇ? ನಿಮಗೆ ಇಲ್ಲಿ ಗೃಹಲಕ್ಷ್ಮೀ ಎಂದು ಹಣ ಕೊಡುತ್ತಾರೆ. ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆಯಿಂದ ಪುರುಷರ (ಗಂಡಂದಿರ) ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಅಲ್ಲದೆ ಅಲ್ಲದೆ ಮನಸೋಇಚ್ಛೆ ಸಾಲ ಮಾಡಿ ಮಕ್ಕಳ ಮೇಲೆಯೂ ಸಾಲ ಹೊರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸಾಲಿಗ್ರಾಮದ ಯೋಗಾ ನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಅವರು ಪೂಜೆ ಸಲ್ಲಿಸಿದರು.

ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ.ವಿವೇಕಾನಂದ, ಮಾಜಿ ಸಚಿವ ಸಾ.ರಾ. ಮಹೇಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಅಶ್ವಿನ್ಕುಮಾರ್, ಮುಖಂಡ ಮಹದೇವ್ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.