ಕುಣಿಗಲ್: ‘ಮತದಾರರ ಪಟ್ಟಿಯಿಂದ ಅಭ್ಯರ್ಥಿ ರಾಮಸ್ವಾಮಿ ಹೆಸರು ಕೈಬಿಟ್ಟಿರುವ ಪ್ರಕರಣದಲ್ಲಿ ನಮ್ಮ ಪಾತ್ರವಿಲ್ಲ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೋರೆಗೌಡ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ರಾಮಸ್ವಾಮಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿಯಾಗಿದ್ದರೂ, ಶಿಕ್ಷಕರ ಸಭೆಗಳಲ್ಲಿ ರಾಜ್ಯ ಸಂಘ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಸಂಘಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೋಬಳಿ ಮಟ್ಟದ ಗುರುಸ್ಪಂದನ ಕಾರ್ಯಕ್ರಮಗಳಲ್ಲಿ ‘56 ವರ್ಷ ತುಂಬಿದ ರಾಜ್ಯ ಸಂಘ ಶಿಕ್ಷಕರ ಸಮಸ್ಯೆಗೆ ಶೇ 10ರಷ್ಟೂ ಸ್ಪಂದಿಸಿಲ್ಲ’ ಎಂದು ಸಂಘ ವಿರೋಧಿ ಹೇಳಿಕ ನೀಡುವ ಜೊತೆಗೆ ಜಾಲತಾಣಗಳಲ್ಲೂ ಅಪಪ್ರಚಾರ ಮಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಜಿಲ್ಲಾ ಮತ್ತು ರಾಜ್ಯ ಸಮಿತಿಗೆ ನೀಡಿದ ಕಾರಣ ಶಿಸ್ತು ಪಾಲನಾ ಸಮಿತಿ ರಾಮಸ್ವಾಮಿ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಈ ಬಗ್ಗೆ ರಾಮಸ್ವಾಮಿ ಅವರಿಗೆ ಹಲವು ಬಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಇದೇ ಮಾರ್ಚ್ 26ರಂದು ಸಹ ನೋಟಿಸ್ ನೀಡಿದ್ದು, ಉತ್ತರ ನೀಡದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದರು.

ಗೌರವಾಧ್ಯಕ್ಷ ಗೋವಿಂದ ರಾಜು, ಪದಾಧಿಕಾರಿಗಳಾದ ನಂದಿನಿ, ಶಿವರಾಮಯ್ಯ, ಸುಜಾತಾ, ಜಯಲಕ್ಷ್ಮೀ, ಸೋಮಶೇಖರ್, ಯಶೋಧ, ಚಂದ್ರಶೇಖರ, ವೆಂಕಟೇಶ್, ವಿಜಯ್ ಕುಮಾರ್, ರೂಪಾ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-17-1412434209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.