ಕುಷ್ಟಗಿ: ಪಟ್ಟಣದ 4ನೇ ವಾರ್ಡ್ನಲ್ಲಿ ಖಾಸಗಿ ವ್ಯಕ್ತಿಗಳು ತಮಗೆ ಸೇರಿದ್ದು ಎನ್ನಲಾದ ನಿವೇಶನಕ್ಕೆ ಬೇಲಿ ಅಳವಡಿಸುವ ಸಂದರ್ಭದಲ್ಲಿ ಅಲ್ಲಿಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದಕ್ಕಿಳಿದ ಘಟನೆ ಬುಧವಾರ ನಡೆದಿದೆ.

ದಶಕಗಳ ಹಿಂದೆಯೇ ಪಟ್ಟಣದ ಕೆಲ ವ್ಯಕ್ತಿಗಳು ಜಂಟಿಯಾಗಿ ನಿವೇಶನ ಖರೀದಿಸಿ ಹಾಗೆಯೇ ಬಿಟ್ಟಿದ್ದರು. ಈಗ ನಿವೇಶನವನ್ನು ಗುರುತಿಸಿ ಅದರ ಸುತ್ತಲೂ ತಂತಿ ಬೇಲಿ ಅಳವಡಿಸುವುದಕ್ಕೆ ಯಂತ್ರಗಳೊಂದಿಗೆ ಸ್ಥಳಕ್ಕೆ ಬಂದಿದ್ದರು. ಆದರೆ ಅದೇ ಪ್ರದೇಶದಲ್ಲಿ ಹಿಂದೆ ಮಹಿಳೆಯರ ಶೌಚಾಲಯ ಇತ್ತು, ಮತ್ತೊಂದೆಡೆ ಕುಡಿಯುವ ನೀರಿನ ಸಿಮೆಂಟ್ ಕೊಳಾಯಿ (ಸಿಸ್ಟರ್ನ್) ಇದ್ದು ಹಾಗಾಗಿ ಅಲ್ಲಿ ಬೇಲಿ ಹಾಕುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಆದರೆ ಈ ಜಾಗ ತಮಗೆ ಸೇರಿದೆ, ಯಾರೂ ಇಲ್ಲದ ಸಂದರ್ಭದಲ್ಲಿ ರಸ್ತೆ ನಿರ್ಮಿಸಲಾಗಿದೆ, ಕುಡಿಯುವ ನೀರಿನ ಟ್ಯಾಂಕ್ ಇರಿಸಲಾಗಿದೆ. ಶೌಚಾಲಯ ಇರಲಿಲ್ಲ. ಹಾಗಾಗಿ ತಮಗೆ ಸೇರದಿರುವ ಒಂದಿಂಚೂ ಜಾಗ ಬೇಕಿಲ್ಲ ಎಂದರು. ಆದರೆ ಅದಕ್ಕೆ ಒಪ್ಪದ ಅಲ್ಲಿಯ ನಿವಾಸಿಗಳು ಪುರಸಭೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಮತ್ತೊಮ್ಮೆ ಅಳತೆ ನಡೆಸಿ ಜಾಗ ಗುರುತಿಸುವವರೆಗೂ ಯಾವುದೇ ಕೆಲಸ ಮಾಡದಂತೆ ತಕರಾರು ತೆಗೆದರು.

ನಂತರ ಈ ಕುರಿತು 'ಪ್ರಜಾವಾಣಿ' ಬಳಿ ಮಾತನಾಡಿದ ನಿವೇಶನದ ಮಾಲೀಕರಲ್ಲೊಬ್ಬರು, ಈಗಾಗಲೇ ಒಂದು ಬಾರಿ ಸರ್ವೆ ನಡೆಸಲಾಗಿತ್ತು, ಖಾಸಗಿ ನಿವೇಶನದಲ್ಲಿ ಅನಧಿಕೃತವಾಗಿ ರಸ್ತೆ ಇತರೆ ಅಭಿವೃದ್ಧಿ ಕೆಲಸ ನಡೆಸಲಾಗಿದೆ. ಈ ಮಾಹಿತಿ ಅರಿಯದ ಜನರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ನಿವೇಶನ ಮಾಲೀಕರಲ್ಲೊಬ್ಬರು ಸರ್ಕಾರಿ ಹುದ್ದೆಯಲ್ಲಿದ್ದು ಪೊಲೀಸ್ ವಾಹನದೊಂದಿಗೆ ಸ್ಥಳದಲ್ಲಿದ್ದು ಅಚ್ಚರಿ ಮೂಡಿಸಿದರು. ಅಲ್ಲದೆ ತರಾತುರಿಯಲ್ಲಿ ತಂತಿ ಬೇಲಿ ಹಾಕಲು ಮುಂದಾಗಿರುವುದೂ ಸರಿಯಲ್ಲ ಎಂದು ಅಲ್ಲಿಯ ಕೆಲ ನಿವಾಸಿಗಳು ನಂತರ ಅತೃಪ್ತಿ ಹೊರಹಾಕಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-35-769070004

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.