ಬೆಂಗಳೂರು: ಇದೇ 27ರಂದು ರಾಮನವಮಿಯ ಪ್ರಯುಕ್ತ ತ್ಯಾಗರಾಜನಗರದ ಅಭಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ‘ಪುಷ್ಪಯಾಗ’ವನ್ನು ಹಮ್ಮಿಕೊಳ್ಳಲಾಗಿದೆ.

ವಜ್ರಕ್ಷೇತ್ರವೆಂದು ಕರೆಯಲಾಗುವ ಸುಮಾರು 150 ವರ್ಷಗಳಿಗೂ ಹಳೆಯದಾದ ಈ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ‘ಪುಷ್ಪಯಾಗ’ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ಸುಮಾರು 1,000 ಕೆ.ಜಿ.ಯಷ್ಟು ವಿವಿಧ ಬಗೆಯ ಪುಷ್ಪಗಳಿಂದ ಈ ಯಾಗ ನಡೆಸಲಾಗುತ್ತದೆ ಎಂದು ವಜ್ರಕ್ಷೇತ್ರದ ಟ್ರಸ್ಟಿ ವಾದಿರಾಜ್ ಆಚಾರ್ ಅವರು ತಿಳಿಸಿದ್ದಾರೆ.

‘ನಮ್ಮ ಸಂಪ್ರದಾಯದ ಪ್ರಕಾರ ಭಗವಂತನಿಗೆ ಪರಿಮಳಯುಕ್ತ ಪುಷ್ಪಗಳನ್ನು ಸಮರ್ಪಿಸಿ ಅರ್ಚಿಸಬೇಕು. ಪುಷ್ಪಯಾಗದಲ್ಲಿ ಹೂವುಗಳನ್ನು ಹೋಮದ ಕುಂಡಕ್ಕೆ ಹಾಕುವುದಿಲ್ಲ. ಐದು ಬಗೆಯ ಬಣ್ಣಗಳ ಹೂವಿನ ರಾಶಿಗೆ ಪೂಜೆ, ಅರ್ಚನೆ ಮಾಡಿ ಪಟ್ಟಾಭಿರಾಮನಿಗೆ ಸಮರ್ಪಿಸಲಾಗುವುದು. ಇದೊಂದು ರೀತಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ. ಭಗವಂತ ನಮಗೆ ದಯಪಾಲಿಸಿದ ಅನನ್ಯ ರೀತಿಯ ಪುಷ್ಪಗಳನ್ನು ಮತ್ತೆ ಅವನಿಗೆ ಸಮರ್ಪಿಸುವ ಯಜ್ಞವಿದು. ಭಕ್ತರು ಆ ದಿನ ಒಂದು ಹಿಡಿಯಷ್ಟು ತಂದು ಸಮರ್ಪಿಸಬಹುದು’ ಎಂದು ಅವರು ಹೇಳಿದ್ದಾರೆ.

ಶ್ರೀಪಟ್ಟಾಭಿರಾಮ ದೇವಸ್ಥಾನ, #152/1, 7ನೇ ಅಡ್ಡ ರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಸಂಪರ್ಕಕ್ಕೆ: 9448850552/ 7019475877

‘ಇಂದ್ರಿಯಾ’ ನೂತನ ಮಳಿಗೆ ಆರಂಭ

ಬೆಂಗಳೂರು: ನಗರದ ಡಿಕನ್ಸನ್ ರಸ್ತೆಯಲ್ಲಿ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ‘ಇಂದ್ರಿಯಾ’ ಹೆಸರಿನ ನಾಲ್ಕನೇ ಮಳಿಗೆಯನ್ನು ತೆರೆಯುವ ಮೂಲಕ ತನ್ನ ಬ್ರ್ಯಾಂಡ್ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ, ಇಂದ್ರಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಕೊಹ್ಲಿ, ‘ಬೆಂಗಳೂರು ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ. ಇಲ್ಲಿನ ಗ್ರಾಹಕರು ಕಲಾತ್ಮಕವಾದ ಮತ್ತು ವಿವಿಧ ವಿನ್ಯಾಸದ ಆಭರಣಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ನಾಲ್ಕನೇ ಮಳಿಗೆಯನ್ನು ಆರಂಭಿಸುವ ಮೂಲಕ ನಾವು ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಮುಂದಾಗಿದ್ದೇವೆ’ ಎಂದರು.

ಆದಿತ್ಯ ಬಿರ್ಲಾ ಜ್ಯುವೆಲ್ಲರಿ ರಾಷ್ಟ್ರಮಟ್ಟದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಲೇ ಬಂದಿದೆ. ಬೆಂಗಳೂರು ನಗರದಲ್ಲಿ ಈಗ ನಾಲ್ಕನೇ ಮಳಿಗೆಯನ್ನು ತೆರೆಯುವ ಮೂಲಕ ಇಲ್ಲೂ ತನ್ನ ಜಾಲವನ್ನು ಇನ್ನಷ್ಟು ವಿಸ್ತರಿಸಿದೆ. ದೇಶದ ಪ್ರಮುಖ ಮೆಟ್ರೊಪಾಲಿಟನ್ ನಗರಗಳಲ್ಲಿ ‘ಇಂದ್ರಿಯಾ’ ಮಳಿಗೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

‘ಸಾಂಪ್ರದಾಯಿಕವಾದ ಆಭರಣಗಳಿಗೆ ನಗರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದರ ಜೊತೆಗೆ ಹೊಸ ವಿನ್ಯಾಸದ ಆಭರಣಗಳಿಗೂ ಆದ್ಯತೆ ನೀಡಲಾಗಿದೆ. 32 ಸಾವಿರಕ್ಕೂ ಹೆಚ್ಚಿನ ಆಭರಣಗಳು ಇಲ್ಲಿ ಲಭ್ಯ ಇವೆ. ಇಲ್ಲಿಗೆ ಭೇಟಿ ನೀಡುವ ಗ್ರಾಹಕರು ವಿಶಿಷ್ಟ ರೀತಿಯ ಅನುಭವ ಪಡೆಯಲಿದ್ದಾರೆ. ನಮ್ಮ ಬ್ರ್ಯಾಂಡ್ನ ಉತ್ಪನ್ನಗಳು ಗ್ರಾಹಕರನ್ನು ಸೆಳೆಯಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.