ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಕಲಾಪ ಆರಂಭವಾದಾಗ ಆಡಳಿತ ಮತ್ತು ವಿರೋಧ ಪಕ್ಷದ ಬಹುತೇಕ ಸದಸ್ಯರು ಗೈರಾಗಿದ್ದರು. ಆಗ ಜೆಡಿಎಸ್ನ ಎಸ್.ಎಲ್.ಭೋಜೇಗೌಡ, ‘ವಿರೋಧ ಪಕ್ಷಗಳ ಸದಸ್ಯರಿಗಿಂತ ಸಚಿವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸದಸ್ಯರು ಕಲಾಪಕ್ಕೆ ಬರುವಂತೆ ಮಾಡಲು ಏನಾದರೂ ಆಕರ್ಷಣೆ ವ್ಯವಸ್ಥೆ ಮಾಡಬೇಕು’ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ, ‘ಭೋಜೇಗೌಡ ಅವರನ್ನು 20 ವರ್ಷಗಳಿಂದ ನೋಡುತ್ತಿದ್ದೇನೆ. ಆಕರ್ಷಿಸುವ ಹಲವು ಕಲೆಗಳು ಅವರಿಗೆ ಗೊತ್ತಿದೆ. ಇಲ್ಲಿ ಏನು ಆಕರ್ಷಣೆ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದರೆ ಜಾರಿಗೆ ತರುತ್ತೇನೆ’ ಎಂದು ಕಿಚಾಯಿಸಿದರು.

ಮಧ್ಯಾಹ್ನ 12ರ ಹೊತ್ತಿಗೆ ಸಭಾನಾಯಕ ಬೋಸರಾಜು ಮತ್ತು ಇಬ್ಬರು ಸಚಿವರಷ್ಟೇ ಸದನದಲ್ಲಿ ಇದ್ದರು. ಆಗ ಭೋಜೇಗೌಡ ಅವರು ಎದ್ದುನಿಂತು, ‘ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರು ಇಲ್ಲದಿದ್ದರೆ ಹೇಗೆ’ ಎಂದು ಆಕ್ಷೇಪ ಎತ್ತಿದರು. ವಿರೋಧ ಪಕ್ಷದ ಎನ್.ರವಿಕುಮಾರ್ ದನಿಗೂಡಿಸಿದರು.

ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಭೋಜೇಗೌಡ ಅವರ ಬೆಳಿಗ್ಗೆಯ ಮಾತು ಮತ್ತು ಆಕರ್ಷಣೆಯ ಸಲಹೆಯನ್ನು ಸದನಕ್ಕೆ ವಿವರಿಸಿ, ರವಿಕುಮಾರ್ ಅವರ ಬಾಯಿಮುಚ್ಚಿಸಿದರು. ರವಿಕುಮಾರ್ ಅವರು, ‘ಭೋಜೇಗೌಡರದ್ದು ಬಹುರಂಗಿ ವ್ಯಕ್ತಿತ್ವ’ ಎಂದು ಕುಳಿತರು.

ಇದರಿಂದ ಪುಳಕಿತರಾದ ಭೋಜೇಗೌಡ, ‘ನಾನು ಒಂದೆರಡು ದಿನ ಕಲಾಪಕ್ಕೆ ಬಂದಿರಲಿಲ್ಲ. ಆದರೆ ನಿನ್ನೆ ರಾತ್ರಿ ಒಂದು ಕನಸು ಬಿತ್ತು. ನಾವೆಲ್ಲಾ ಸದನಕ್ಕೆ ಬರುತ್ತಿಲ್ಲ ಮತ್ತು ಕಲಾಪ ನಡೆಯಲು ಬಿಡುತ್ತಿಲ್ಲ ಎಂದು ಬೇಸರ ಮಾಡಿಕೊಂಡು ಸಭಾಪತಿ ಬಸವರಾಜ ಹೊರಟ್ಟಿ ಅವರು ಕುರ್ಚಿಯಿಂದ ಎದ್ದು ಹೊರಟುಹೋದರು. ನಾವೆಲ್ಲಾ ಸಮಾಧಾನ ಮಾಡಿದರೂ, ರಾಜೀನಾಮೆ ನೀಡುತ್ತೇನೆ ಎನ್ನುತ್ತಿದ್ದರು. ಅಲ್ಲಿಗೆ ಕನಸಿನಿಂದ ಎಚ್ಚರವಾಯಿತು’ ಎಂದು ವಿವರಿಸಿದರು.

‘ಕನಸು ನಿಜವಾಗಿದೆಯೋ ಏನೋ ಇಂದು ಕಲಾಪಕ್ಕೆ ಓಡಿಬಂದೆ. ಸದನದೊಳಗೆ ಬಂದು ನೋಡಿದರೆ, ಸಭಾಪತಿ ಪೀಠದಲ್ಲಿ ಹೊರಟ್ಟಿ ಅವರು ಕುಳಿತಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.