ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ (ಟಿಸಿಎಸ್) ನಾಸಿಕ್ ಘಟಕ ದಲ್ಲಿ ನಡೆದಿದೆ ಎನ್ನಲಾದ ಮತಾಂತರ ಜಾಲದ ಕಾರ್ಪೊರೇಟ್ ಜಿಹಾದ್ ಖಂಡಿಸಿರುವ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ‘ದೇಶದ ವಿವಿಧೆಡೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ರೂಪಿಸಬೇಕು’ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಈ ಬಗ್ಗೆ ಮಾತನಾಡಿದ ವಿಎಚ್ಪಿ ಕೇಂದ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ‘ಲವ್ ಜಿಹಾದ್ ಜತೆಗೆ ಜಿಮ್ಗಳಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಜಿಮ್ ಜಿಹಾದ್ ಪ್ರಕರಣಗಳು ವರದಿಯಾಗು ತ್ತಿವೆ. ಇಂತಹ ಪ್ರಕರಣಗಳನ್ನು ಖಂಡಿಸುವ ಜತೆಗೆ, ಇದಕ್ಕೆ ಕಾನೂನಿನ ಮೂಲಕ ಕಡಿವಾಣ ಹಾಕಲು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಎಚ್ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸುತ್ತಿದ್ದಾರೆ. ಶುಕ್ರವಾರವೂ ರಾಜ್ಯದಾದ್ಯಂತ ಈ ಪ್ರತಿಭಟನೆ ಮುಂದುವರೆಯಲಿದೆ’ ಎಂದರು.

‘ಜಿಹಾದ್ ಮತ್ತು ಭಯೋತ್ಪಾದನೆ ಇಂದು ಇಡೀ ಜಗತ್ತಿಗೆ ಹಬ್ಬಿದೆ. ಜಿಹಾದ್ ಸಿದ್ಧಾಂತದ ಮೂಲಕ ಇಡೀ ಜಗತ್ತನ್ನು ಇಸ್ಲಾಮೀಕರಣ ಮಾಡುವ ವ್ಯವಸ್ಥಿತ ಷಡ್ಯಂತ್ರದ ಮುಂದುವರಿದ ಭಾಗವೆ, ನಾಸಿಕ್ನಲ್ಲಿ ವರದಿಯಾದ ಕಾರ್ಪೊರೇಟ್ ಜಿಹಾದ್, ಹುಬ್ಬಳ್ಳಿಯಲ್ಲಿ ವರದಿಯಾದ ಲವ್ ಜಿಹಾದ್ ಹಾಗೂ ಜಿಮ್ ಲೈಂಗಿಕ ದೌರ್ಜನ್ಯ ಪ್ರಕರಣಗಳಾಗಿವೆ. ಇವು ಒಂದೇ ಕೇಂದ್ರದಿಂದ ನಿರ್ದೇಶಿಸಲ್ಪಡುವ, ವಿದೇಶಿ ಹಣಕಾಸಿನ ನೆರವಿನಿಂದ ನಡೆಯುವ ದೊಡ್ಡ ಜಾಲದ ಭಾಗವಾಗಿವೆ’ ಎಂದು ಆರೋಪಿಸಿದರು.

‘ಲವ್ ಜಿಹಾದ್, ಜಿಮ್ನಲ್ಲಿ ನಡೆದ ಲೈಂಗಿಕ ದೌರ್ಜನ್ಯ, ಕಾರ್ಪೊರೇಟ್ ಜಿಹಾದ್ ಮತ್ತು ಕಾಣೆಯಾದ ಮಹಿಳೆ ಯರ ಪ್ರಕರಣಗಳ ನಡುವಿನ ನಂಟನ್ನು ಭೇದಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ರಾಜ್ಯ ವಿಶೇಷ ತನಿಖಾತಂಡವು (ಎಸ್ಐಟಿ) ತನಿಖೆ ನಡೆಸ ಬೇಕು. ವಿದೇಶ ಮೂಲದ ಹಣವನ್ನು ಪತ್ತೆ ಮಾಡಬೇಕು’ ಎಂದು ಆಗ್ರಹಿಸಿದರು.

‘ವಿಎಚ್ಪಿ ಕಾರ್ಯಕರ್ತರು ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ಉದ್ದೇಶ ಪೂರ್ವಕವಾಗಿ ಎಫ್ಐಆರ್ ದಾಖಲಿಸು ವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರ್ಕಾರ ಯಾವುದೋ ಒಂದು ಸಮುದಾಯವನ್ನು ಓಲೈಸದೆ, ನಮ್ಮ ಕೆಲ ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-4-1804710070

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.