ಮಂಗಳೂರು: ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಹೊತ್ತ ಶಿವಾಲಿಕ್ ಹಡಗು, ಪಶ್ಚಿಮ ಏಷ್ಯಾದ ಯುದ್ಧ ಪೀಡಿತ ಪ್ರದೇಶದಲ್ಲಿರುವ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಿ ಬಂದಿದ್ದು, ಗುಜರಾತಿನ ಮುಂದ್ರಾ ಬಂದರನ್ನು ಸೋಮವಾರ ತಲುಪಿದೆ. ಆ ಹಡಗು ಭಾಗಶಃ ಎಲ್ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಇಳಿಸಿ, ಸುಮಾರು 26 ಸಾವಿರ ಟನ್ ಎಲ್ಪಿಜಿಯೊಂದಿಗೆ ಇಲ್ಲಿನ ನವಮಂಗಳೂರು ಬಂದರಿಗೆ ಬರಲಿದೆ.

‘ಶಿವಾಲಿಕ್ ಹಡಗು ಇಂಡಿಯನ್ ಆಯಿಲ್ ಕಾರ್ಪೊರೇಷನ್ಗೆ ಎಲ್ಪಿಜಿಯನ್ನು ಸಾಗಿಸುತ್ತಿದೆ. 46 ಸಾವಿರ ಟನ್ ಎಲ್ಪಿಜಿ ಹೊತ್ತ ಈ ಹಡಗು ಮುಂದ್ರ ಬಂದರಿನಲ್ಲಿ 20 ಸಾವಿರ ಟನ್ ಎಲ್ಪಿಜಿಯನ್ನು ಇಳಿಸಲಿದೆ. ಬಳಿಕ ನವಮಂಗಳೂರು ಬಂದರಿಗೆ ಪ್ರಯಾಣಿಸುವ ಹಡಗು 26 ಸಾವಿರ ಟನ್ ಎಲ್ಪಿಜಿಯನ್ನು ಇಲ್ಲಿ ಇಳಿಸಲಿದೆ’ ಎಂದು ಮೂಲಗಳು ತಿಳಿಸಿವೆ.

‘ಗುಜರಾತ್ನ ಮುಂದ್ರಾ ಬಂದರಿನಲ್ಲಿ 20 ಸಾವಿರ ಟನ್ ಎಲ್ಪಿಜಿಯನ್ನು ಖಾಲಿ ಮಾಡಲು ಕನಿಷ್ಠ ಒಂದು ದಿನವಾದರೂ ಬೇಕು. ಅಲ್ಲಿಂದ ಹಡಗು ನವಮಂಗಳೂರು ಬಂದರನ್ನು ತಲುಪಲು ಮೂರು– ನಾಲ್ಕು ದಿನಗಳಾದರೂ ಬೇಕು’ ಎಂದು ನವಮಂಗಳೂರು ಬಂದರು ಪ್ರಾಧಿಕಾರದ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.