ಬೆಂಗಳೂರು: ಒಬ್ಬರ ಹೆಸರಿನಲ್ಲೇ ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕಗಳು ಇದ್ದರೆ, ಎಲ್ಲ ಸಂಪರ್ಕಗಳನ್ನೂ ತೈಲ ಕಂಪನಿಗಳು ಏಕಾಏಕಿ ರದ್ದುಪಡಿಸುತ್ತಿವೆ. ಈ ಬಗ್ಗೆ ಮಾಹಿತಿ ಇರದ ಗ್ರಾಹಕರು ಈಗ ಎಲ್ಪಿಜಿ ಸಿಲಿಂಡರ್ ಪಡೆಯಲು ಪರದಾಡುವಂತಾಗಿದೆ.

ಈ ಮೊದಲು ಒಬ್ಬ ವ್ಯಕ್ತಿಯು ಸರ್ಕಾರಿ ಸ್ವಾಮ್ಯದ ಎಚ್ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿಎಲ್ ಸೇರಿ ಮೂರೂ ಕಂಪನಿಗಳ ಎಲ್ಪಿಜಿ ಸಂಪರ್ಕ ಪಡೆದುಕೊಳ್ಳಬಹುದಿತ್ತು. ಅಷ್ಟೂ ಸಂಪರ್ಕಗಳಿಂದ ಸಿಲಿಂಡರ್ ಪಡೆಯಬಹುದಿತ್ತು. ಎಲ್ಪಿಜಿ ಸಂಪರ್ಕ ಸಂಖ್ಯೆಗೆ ಕೆವೈಸಿ ಹಾಗೂ ಪ್ಯಾನ್ ಸಂಖ್ಯೆ ಜೋಡಣೆ ಮಾಡುವಂತೆ ತೈಲ ಕಂಪನಿಗಳು ಸೂಚಿಸಿದ್ದವು. ಆ ಬಳಿಕ ಎರಡು ಸಂಪರ್ಕ ಹೊಂದಿದ್ದವರಲ್ಲಿ ಒಂದು ಸಂಪರ್ಕ ಸ್ಥಗಿತವಾಗಿತ್ತು.

ಕೆಲವರು ಎರಡು ಸಂಪರ್ಕ ಹೊಂದಿದ್ದರೂ ಒಂದನ್ನು ಮಾತ್ರ ನಿರಂತರವಾಗಿ ಬಳಸುತ್ತಿದ್ದರು. ಮತ್ತೊಂದು ಸಂಪರ್ಕದ ಇತ್ತಾದರೂ ಸಿಲಿಂಡರ್ ಬುಕ್ ಮಾಡದೇ ಇದ್ದುದರಿಂದ ನಿಷ್ಕ್ರಿಯವಾಗಿತ್ತು. ಹೀಗೆ ಎರಡು ಸಂಪರ್ಕ ಇದ್ದವರು ಈಗ ಬುಕ್ ಮಾಡಲು ಹೋದಾಗ, ಎರಡೂ ಸಂಪರ್ಕಗಳು ಸ್ಥಗಿತಗೊಂಡಿರುವುದು ಗೊತ್ತಾಗಿದೆ.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಎಲ್ಪಿಜಿ ಸಿಲಿಂಡರ್ ಪೂರೈಸುವಲ್ಲಿನ ತಮ್ಮ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಕಂಪನಿಗಳು ಮುಂದಾಗಿವೆ. ಕೊಳವೆ ಜಾಲದ ಮೂಲಕ ಮನೆಗೆ ನೈಸರ್ಗಿಕ ಅನಿಲ (ಪಿಎನ್ಜಿ) ಸಂಪರ್ಕ ಹೊಂದಿರುವವರ ಎಲ್ಪಿಜಿ ಸಂಪರ್ಕ ರದ್ದುಪಡಿಸಿದ್ದಂತೆಯೇ, ಒಂದಕ್ಕಿಂತ ಹೆಚ್ಚು ಎಲ್ಪಿಜಿ ಸಂಪರ್ಕ ಹೊಂದಿರುವವರಿಗೂ ಸ್ಥಗಿತದ ಕ್ರಮವನ್ನು ವಿಸ್ತರಿಸಿವೆ.

ಎರಡು ಭಿನ್ನ ಕಂಪನಿಗಳ ಸಂಪರ್ಕ ಹೊಂದಿರುವವರ ಎರಡೂ ಸಂಪರ್ಕಗಳು ರದ್ದಾಗಿರುವುದರಿಂದ ಗ್ರಾಹಕರಿಗೆ ಸಮಸ್ಯೆ ಎದುರಾಗಿದೆ. ಉದಾಹರಣೆಗೆ ಗ್ರಾಹಕರೊಬ್ಬರು ಎಚ್ಪಿಸಿಎಲ್ ಮತ್ತು ಬಿಪಿಸಿಎಲ್ ಎಲ್ಪಿಜಿ ಸಂಪರ್ಕ ಹೊಂದಿದ್ದರೆ, ಎರಡೂ ಕಂಪನಿಗಳು ತಮ್ಮಲ್ಲಿನ ಖಾತೆಯನ್ನು ಸ್ಥಗಿತಗೊಳಿಸುತ್ತಿವೆ. ಈ ಕ್ರಮಕ್ಕೂ ಮುನ್ನ ಕಂಪನಿಗಳು ಗ್ರಾಹಕರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ, ಸಂಪರ್ಕ ಸ್ಥಗಿತದ ನಂತರವೂ ಮಾಹಿತಿ ರವಾನಿಸುತ್ತಿಲ್ಲ. ಇದರಿಂದ ಸಮಸ್ಯೆಗೆ ಸಿಲುಕುವಂತಾಗಿದೆ.

‘ಕಂಪನಿಗಳು ಆಧಾರ್ ಸರ್ವರ್ ಮಾಹಿತಿ ಆಧರಿಸಿ ನೇರವಾಗಿ ಸಂಪರ್ಕ ರದ್ದು ಮಾಡುವುದರಿಂದ ಗ್ರಾಹಕರಿಗೆ ತಿಳಿಯುವುದೇ ಇಲ್ಲ. ನಿತ್ಯ ಹಲವು ಗ್ರಾಹಕರು ನಮಗೂ ದೂರು ನೀಡುತ್ತಿದ್ದಾರೆ. ಎರಡು ಸಂಪರ್ಕ ಇರುವವರು, ಒಂದನ್ನು ಕುಟುಂಬದ ಇನ್ನೊಬ್ಬರ ಹೆಸರಿಗೆ ವರ್ಗಾಯಿಸಿಕೊಳ್ಳುವುದು ಈಗ ಸುಲಭವಲ್ಲ. ಕಚೇರಿಗೆ ತೆರಳಿ ಮಾಹಿತಿ ಪಡೆದು ಈಗಲೇ ಗೊಂದಲ ಬಗೆಹರಿಸಿಕೊಳ್ಳಬೇಕು’ ಎಂದು ಬೆಂಗಳೂರಿನ ಏಜೆನ್ಸಿಯೊಂದರ ವ್ಯವಸ್ಥಾಪಕರು ತಿಳಿಸಿದರು.

ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಎಲ್ಪಿಜಿ ಸಂಪರ್ಕ ಹೊಂದಿರುವವರ ಸಂಖ್ಯೆ 2.75 ಲಕ್ಷದಷ್ಟಿದೆ ಎಂದು ಆಹಾರ ಇಲಾಖೆಯ ಮೂಲಗಳು ಹೇಳಿವೆ.

ಎಲ್ಪಿಜಿ ಸಂಪರ್ಕ ಇರುವವರಿಗೆ ಕೆವೈಸಿ ಕಡ್ಡಾಯ ಮಾಡಲಾಗಿದೆ. ಇದನ್ನು ನೀಡಬೇಕು. ಇಲ್ಲದೇ ಇದ್ದರೆ ಮುಂದೆ ಸಂಪರ್ಕವನ್ನು ತಡೆಯುವ ಇಲ್ಲವೇ ಸಹಾಯಧನ ರದ್ದುಪಡಿಸುವ ಸಾಧ್ಯತೆಯೂ ಇದೆ

ಮೆಹುಲ್ ಪಟೇಲ್ ಕರ್ನಾಟಕ ಎಲ್ಪಿಜಿ ವಿತರಕರ ಸಂಘದ ಅಧ್ಯಕ್ಷ

ಒಂದಕ್ಕಿಂತ ಹೆಚ್ಚು ಎಲ್ಪಿಜಿ ಸಂಪರ್ಕ ಸ್ಥಗಿತಗೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಕಂಪನಿಗಳೇ ಇಂತಹ ಕ್ರಮ ತೆಗೆದುಕೊಂಡಿವೆ. ಗ್ರಾಹಕರು ಈ ಬಗ್ಗೆ ತಮ್ಮ ಏಜೆನ್ಸಿಗೆ ಮಾಹಿತಿ ಒದಗಿಸಿದರೆ ಸಂಪರ್ಕ ಸಕ್ರಿಯಗೊಳ್ಳುತ್ತದೆ

ರಮ್ಯಾ ಜಂಟಿ ನಿರ್ದೇಶಕಿ ಆಹಾರ ಇಲಾಖೆ

ಪರಿಹಾರವೇನು?

l ಎರಡು ಭಿನ್ನ ಕಂಪನಿಗಳಲ್ಲಿ ಪ್ರತ್ಯೇಕ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ತಕ್ಷಣವೇ ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ–ಕೆವೈಸಿ’ ದಾಖಲೆಗಳನ್ನು ಸಲ್ಲಿಸಿ ಸಂಪರ್ಕವನ್ನು ಖಚಿತಪಡಿಸಿಕೊಳ್ಳಬೇಕು l ಒಂದು ಕಂಪನಿಯ ಸಂಪರ್ಕ ರದ್ದಾಗಿರುವ ಬಗ್ಗೆ ಸಂಬಂಧಪಟ್ಟ ಏಜೆನ್ಸಿಯಿಂದ ದೃಢೀಕರಣ ಪತ್ರ ಪಡೆದುಕೊಂಡು ಇನ್ನೊಂದು ಕಂಪನಿಯ ಏಜೆನ್ಸಿಗೆ ಸಲ್ಲಿಸಬೇಕು. ಇದರಿಂದ ಒಂದು ಸಂಪರ್ಕವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ l ಈಗಾಗಲೇ ಎರಡು ಸಂಪರ್ಕ ರದ್ದಾಗಿರುವವರು ಆ ಬಗ್ಗೆ ತಮ್ಮ ಏಜೆನ್ಸಿಗಳಲ್ಲಿ ದೂರು ದಾಖಲಿಸಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿ ಒಂದು ಸಂಪರ್ಕವನ್ನು ಚಾಲ್ತಿ ಮಾಡಿಸಿಕೊಳ್ಳಬಹುದು l ಒಂದು ಕಂಪನಿಯ ಸಿಲಿಂಡರ್ಗಳು ಹಾಗೂ ರೆಗ್ಯುಲೇಟರ್ಗಳನ್ನು ಏಜೆನ್ಸಿಗೆ ವಾಪಸ್ ಮಾಡಿರುವ ಬಗ್ಗೆ ಸರಂಡರ್ ಸರ್ಟಿಫಿಕೇಟ್ ಪಡೆದು ತಮಗೆ ಬೇಕಾದ ಏಜೆನ್ಸಿಗೆ ಸಲ್ಲಿಸಿದರೆ ಸ್ಥಗಿತಗೊಂಡ ಸಂಪರ್ಕ ಪುನರ್ ಸ್ಥಾಪಿಸಿಕೊಳ್ಳಬಹುದು l ಆಧಾರ್ ಫೇಸ್ ಆರ್ಡಿ ಆ್ಯಪ್ ಮೂಲಕವೂ ಗ್ರಾಹಕರು ವಿವರ ಸಲ್ಲಿಸಬಹುದು. 1800 2333 555 ಸಹಾಯವಾಣಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.