ಬೆಂಗಳೂರು: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಹೋಟೆಲ್ಗಳು ಹಾಗೂ ಪೇಯಿಂಗ್ ಗೆಸ್ಟ್ (ಪಿ.ಜಿ) ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಕೆಲವು ಹೋಟೆಲ್ಗಳು ಮುಂಜಾಗ್ರತಾ ಕ್ರಮವಾಗಿ ಸೌದೆ ತರಿಸಿಕೊಂಡು ದಾಸ್ತಾನು ಮಾಡಿಕೊಳ್ಳುತ್ತಿವೆ. ಮತ್ತೆ ಕೆಲವು ಹೋಟೆಲ್ಗಳ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದ್ದು, ದೋಸೆ, ಚಪಾತಿ, ಫ್ರೈಡ್ ರೈಸ್, ಗೋಬಿ ಮಂಚೂರಿ ಸ್ಥಗಿತಗೊಳಿಸಲಾಗಿದೆ. ಕೆಲವೆಡೆ, ‘ಕಾಫಿ, ಟೀ, ಅನ್ನ, ಸಾಂಬಾರ್ ಮಾತ್ರ ಲಭ್ಯವಿದೆ’ ಎಂಬ ಫಲಕ ಹಾಕಿರುವುದು ಕಂಡುಬಂತು.

ಸಿಲಿಂಡರ್ಗಳ ಕೊರತೆಯಿಂದ ನಗರದಲ್ಲಿ ಮಂಗಳವಾರ ಕೆಲವು ಹೋಟೆಲ್ಗಳು ಬಂದ್ ಆಗಿದ್ದವು. ಬಸವನಗುಡಿಯ ವಿದ್ಯಾರ್ಥಿ ಭವನ ಹೋಟೆಲ್ನಲ್ಲಿ ನಾಲ್ಕು ದೋಸೆ ಹಂಚುಗಳ ಪೈಕಿ ಎರಡು ಹಂಚುಗಳನ್ನು ಬಳಸಲಿಲ್ಲ. ಇದು ನಗರದ ಬಹುತೇಕ ಹೋಟೆಲ್ಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ.

‘ಎರಡು ದಿನಕ್ಕೆ ಆಗುವಷ್ಟು ಸಿಲಿಂಡರ್ ದಾಸ್ತಾನು ಇದೆ. ಹೋಟೆಲ್ ಬಂದ್ ಮಾಡಲು ಇಷ್ಟವಿಲ್ಲ. ಆಸನಗಳ ಸಂಖ್ಯೆ ಹಾಗೂ ದೋಸೆ ಹಂಚುಗಳನ್ನು ಕಡಿಮೆ ಮಾಡಲಾಗಿದೆ. ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ವಿದ್ಯಾರ್ಥಿ ಭವನ ಮಾಲೀಕ ಅರುಣ ಅಡಿಗ ತಿಳಿಸಿದರು.

‘ಸದ್ಯ ಇರುವ ಸಿಲಿಂಡರ್ಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ತಿಂಡಿ–ತಿನಿಸುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಹೋಟೆಲ್ಗೆ ನಿತ್ಯ 5 ರಿಂದ 10 ಸಿಲಿಂಡರ್ ಅಗತ್ಯವಿದೆ. ಕೆಲವೆಡೆ 5 ರಿಂದ 7 ಸಿಲಿಂಡರ್ ದಾಸ್ತಾನು ಇರುತ್ತದೆ. ಕಾಳಸಂತೆಯಲ್ಲೂ ಸಿಲಿಂಡರ್ ಸಿಗುತ್ತಿಲ್ಲ’ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳಿದರು.

‘ಗ್ರಾಹಕರಿಗೆ ತೊಂದರೆ ಆಗಬಾರದೆಂದು ತಾರಾ ಹೋಟೆಲ್ಗಳಲ್ಲಿ ಸೌದೆ ಬಳಸಿ ಅಡುಗೆ ತಯಾರಿಸಲಾಗುತ್ತಿದೆ. ಸಿಲಿಂಡರ್ ಪೂರೈಕೆಯಾಗದಿದ್ದರೆ 48 ತಾಸು ಕಳೆದ ಬಳಿಕ ಬಹುತೇಕ ಹೋಟೆಲ್ಗಳು ಬಂದ್ ಆಗಲಿವೆ. ಬುಧವಾರ ಸಂಜೆವರೆಗೂ ಕಾದು ನೋಡಲಾಗುವುದು’ ಎಂದು ಬೆಂಗಳೂರು ಹೋಟೆಲ್ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ ನಗರದಲ್ಲಿ ಸಿಎನ್ಜಿ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿಲ್ಲ.

15 ಸಾವಿರ ಪಿ.ಜಿ: 10 ಲಕ್ಷ ಮಂದಿ

ಬೆಂಗಳೂರಿನಲ್ಲಿ ಅಂದಾಜು 15 ಸಾವಿರ ಪಿ.ಜಿ. ಗಳಿದ್ದು ( ಪೇಯಿಂಗ್ ಗೆಸ್ಟ್), 10 ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ನೋಂದಾಯಿತ ಪಿ.ಜಿಯಲ್ಲಿ ಮೂರು ಎಲ್ಪಿಜಿ ಸಿಲಿಂಡರ್ ದಾಸ್ತಾನು ಇರಲಿದ್ದು, ಐದಾರು ದಿನಗಳು ಬಳಸಿಕೊಳ್ಳಬಹುದು. ಸಿಲಿಂಡರ್ಗೆ ಕಡಿಮೆ ಬೇಡಿಕೆ ಇರುವ ಸಮೀಪದ ಪಟ್ಟಣಗಳಿಂದ ಅವುಗಳನ್ನು ತರಿಸಿಕೊಳ್ಳುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಬೆಂಗಳೂರು ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.

‘ಪಿ.ಜಿ ಮಾಲೀಕರ ಸಂಘ ಸಭೆ ನಡೆಸಿದ್ದು, ಅನಿವಾರ್ಯವಾದರೆ ಇಂಡಕ್ಷನ್ ಸ್ಟೌ, ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಿಕ್ ಹೀಟರ್ಗಳನ್ನು ಬಳಸಿ ಅಡುಗೆ ಮಾಡಲು ಚರ್ಚಿಸಲಾಗಿದೆ. ಚಪಾತಿ, ರೊಟ್ಟಿ ಮಾಡದಂತೆ ನಿರ್ಧರಿಸಲಾಗಿದೆ. ಅನ್ನ, ಸಾಂಬಾರ್ ಸೇರಿದಂತೆ ಗ್ಯಾಸ್ ಕಡಿಮೆ ಬಳಕೆ ಆಗುವ ಪದಾರ್ಥಗಳನ್ನು ಮಾಡಲು ನಿರ್ಧರಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.