ಬೆಂಗಳೂರು: ಕರ್ನಾಟಕದಲ್ಲಿ ಒಬ್ಬ ಗ್ರಾಹಕ ಒಂದು ಬಾರಿ ಎಲ್ಪಿಜಿ ಖರೀದಿ ಮಾಡಿದ ನಂತರ, ಇನ್ನೊಂದು ಎಲ್ಪಿಜಿ ಸಿಲಿಂಡರ್ ಖರೀದಿ ಮಾಡಲು ಒಂದು ತಿಂಗಳು ಕಾಯಬೇಕು ಎಂಬ ನಿಯಮ ಜಾರಿ ಮಾಡಲಾಗಿದೆ.

ದೇಶದಾದ್ಯಂತ ಈ ‘ಕಾಯುವಿಕೆ’ ಅವಧಿ 25 ದಿನ ಎಂಬ ನಿಯಮ ವಿಧಿಸಲಾಗಿದೆ. ಆದರೆ, ರಾಜ್ಯದಲ್ಲಿ ಗ್ರಾಹಕರು ಮತ್ತೊಂದು ಸಿಲಿಂಡರ್ ಖರೀದಿಸಲು 30 ದಿನ ಕಾಯಬೇಕಿದೆ. ಅಲ್ಲದೆ, ಅವರು ಕಡ್ಡಾಯವಾಗಿ ಒಟಿಪಿಯನ್ನು ನೀಡುವಂತೆಯೂ ಸೂಚನೆ ನೀಡಲಾಗಿದೆ ಎಂದು ತೈಲೋತ್ಪನ್ನ ಕಂಪನಿಯ ಅಧಿಕಾರಿಯೊಬ್ಬರು ಹೇಳಿದರು.

‘ಏಪ್ರಿಲ್ ತಿಂಗಳವರೆಗೂ ಸಿಲಿಂಡರ್ ಸಮಸ್ಯೆಯಾಗದು. ವಾಣಿಜ್ಯ ಸಿಲಿಂಡರ್ ಹಂಚಿಕೆ ಪ್ರಮಾಣ ಶೇ 20ರಷ್ಟು ಕಡಿಮೆಯಾಗಿದ್ದು, ಅದನ್ನು ಗೃಹ ಬಳಕೆಗೆ ವರ್ಗಾಯಿಸಲಾಗಿದೆ’ ಎಂದು ಎಚ್ಪಿಸಿಎಲ್ ಕಂಪೆನಿಯ ವಿತರಕರೊಬ್ಬರು ತಿಳಿಸಿದರು.

ಸಚಿವ ಪುರಿ ಅವರಿಗೆ ಸಿ.ಎಂ ಪತ್ರ

ಬೆಂಗಳೂರು/ನವದೆಹಲಿ: ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆ ಉಂಟಾಗಿರುವ ಬಗ್ಗೆ ಕೇಂದ್ರ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಸಹ ಸಚಿವ ಪುರಿ ಅವರ ಗಮನಕ್ಕೆ ತಂದಿದ್ದಾರೆ. ಕರ್ನಾಟಕಕ್ಕೆ ಅಗತ್ಯವಿರುವಷ್ಟು ಅಡುಗೆ ಅನಿಲ ಸಿಲಿಂಡರ್ಗಳನ್ನು ಸರಬರಾಜು ಮಾಡುವಂತೆ ಪುರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.