ಬೆಂಗಳೂರು: ‘ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಮುಂದಿನ ಹತ್ತು ದಿನಗಳಲ್ಲಿ ಬಗೆಹರಿಯುವ ನಿರೀಕ್ಷೆ ಇದೆ. ಹೋಟೆಲ್ನವರು ಅಲ್ಲಿಯವರೆಗೆ ವಿದ್ಯುತ್ ಮತ್ತು ಇಂಡಕ್ಷನ್ ಒಲೆಗಳನ್ನು ಬಳಸಿ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.

ವಿಧಾನ ಪರಿಷತ್ತಿನ ಕಲಾಪದ ಶೂನ್ಯವೇಳೆಯಲ್ಲಿ ಕಾಂಗ್ರೆಸ್ನ ಐವನ್ ಡಿಸೋಜ ಮತ್ತು ಎಂ.ನಾಗರಾಜ ಯಾದವ್ ಅವರು ಎಲ್ಪಿಜಿ ಸಿಲಿಂಡರ್ ಕೊರತೆ ಬಗ್ಗೆ ವಿಷಯ ಪ್ರಸ್ತಾಪಿಸಿದರು.

ಅದಕ್ಕೆ ಉತ್ತರಿಸಿದ ಮುನಿಯಪ್ಪ, ‘ತೈಲ ಸಂಸ್ಕರಣ ಕಂಪನಿಗಳ ಜತೆಗೆ ಶುಕ್ರವಾರ ಬೆಳಿಗ್ಗೆಯೂ ಸಭೆ ನಡೆಸಿದ್ದೇವೆ. ಎಲ್ಪಿಜಿ ತುಂಬಿದ ಒಂದು ಟ್ಯಾಂಕರ್ ಗುರುವಾರ ಭಾರತ ತಲುಪಿದೆ. ಇನ್ನೂ ಹತ್ತು ಟ್ಯಾಂಕರ್ಗಳು ಕೊಲ್ಲಿ ದೇಶಗಳಿಂದ ಹೊರಡಬೇಕಿದೆ. ಅವು ಬಂದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ. ಅಲ್ಲಿಯವರೆಗೆ ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಬೇಕು’ ಎಂದರು.

‘ಎಲ್ಪಿಜಿ ಸಿಲಿಂಡರ್ ಮೇಲೆ ರಾಜ್ಯ ಸರ್ಕಾರ ₹500 ತೆರಿಗೆ ಹಾಕುತ್ತಿದೆ ಎಂದು ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಐವನ್ ಡಿಸೋಜ ಒತ್ತಾಯಿಸಿದರು. ಆಗ ಮುನಿಯಪ್ಪ, ‘ಯಾವ ಸರ್ಕಾರ ಎಷ್ಟು ತೆರಿಗೆ ವಿಧಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಂಡು, ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.