
ಅಡುಗೆ ಅನಿಲ ದರ ಏರಿಕೆ
–ಪಿಟಿಐ ಚಿತ್ರ
ಒಂದು ಸಿಲಿಂಡರ್ ಆದರೂ ಸಿಕ್ಕರೆ ಸಾಕಪ್ಪ
ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದ್ದು ನಮ್ಮ ಪಿಜಿ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಪಿಜಿಯಲ್ಲಿರುವ ಮಕ್ಕಳು ನಮ್ಮ ಮೇಲೆ ಅವಲಂಬಿತರಾಗಿದ್ದಾರೆ. ಈಗ ಅವರಿಗೆ ಸರಿಯಾದ ಸಮಯಕ್ಕೆ ತಿಂಡಿ, ಊಟ ಒದಗಿಸಲು ಆಗುತ್ತಿಲ್ಲ. ಇದರಿಂದ ನಮಗೆ ತುಂಬಾ ತೊಂದರೆ ಆಗುತ್ತದೆ. ಮುಂಚೆ 4ರಿಂದ 5 ಸಿಲಿಂಡರ್‌ಗಳು ಪೂರೈಕೆ ಆಗುತ್ತಿತ್ತು. ನಮಗೆ ದಿನಕ್ಕೆ 2 ಸಿಲಿಂಡರ್‌ಗಳು ಬೇಕೇ ಬೇಕು. ಆದರೆ, ಈಗ ಜಾಸ್ತಿ ದುಡ್ಡು ಕೊಡುತ್ತೇವೆ ಎಂದರು ತುರ್ತಾಗಿ ಒಂದು ಎಲ್‌ಪಿಜಿ ಬೇಕೆಂದರೆ ಕೂಡ ಸಿಗುತ್ತಿಲ್ಲ. ಹೀಗಾಗಿ ನಮಗೆ ದಿಕ್ಕು ತೋಚದಂತೆ ಆಗಿದೆ. ಸದ್ಯಕ್ಕೆ ಊಟದಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ. ದೋಸೆ, ಇಡ್ಲಿ, ಪುರಿಯನ್ನು ನಿಲ್ಲಿಸಿ, ಸರಳವಾಗಿರುವ ಊಟವನ್ನು ಪಿಜಿಯಲ್ಲಿರುವ ಮಕ್ಕಳಿಗೆ ಕೊಡಲು ನಿರ್ಧರಿಸಿದ್ದೇವೆ.– ಉಷಾ ಲೋಕೇಶ್, ಪಿಜಿ ಮಾಲೀಕರು
ನಾವು ಒಂದಿಷ್ಟು ಸಿಲಿಂಡರ್‌ಗಳನ್ನು ಸ೦ಗ್ರಹಿ ಇಟ್ಟುಕೊಂಡಿದ್ದೇವು. ಆದರೆ ಈಗ ಒಂದು ಇಲ್ಲದಂತೆ ಆಗಿದೆ. ಸಿಲಿಂಡರ್ ಏಜೆನ್ಸಿಗಳಿಗೆ ಕರೆ ಮಾಡಿದರೆ ಅವರು ಪ್ರತಿಕ್ರಿಯಿಸುತ್ತಿಲ್ಲ. ಈಗಾಗಲೇ ಪಿಜಿ ಹುಡುಗರಿಗೆ ಮಾಹಿತಿ ನೀಡಿದ್ದೇವೆ. ಸಾಧ್ಯವಾದಷ್ಟು ಊಟವನ್ನು ನೀಡುತ್ತೇವೆ ಸಹಕರಿಸಿ ಎಂದಿದ್ದೇವೆ. ಆದರೆ, ಹೀಗೆ ಮುಂದುವರೆದರೆ ನಾವು ಸಂಪೂರ್ಣವಾಗಿ ಪಿಜಿಯನ್ನು ಮುಚ್ಚುವ ಪರಿಸ್ಥಿತಿಗೆ ಬಂದು ಬಿಡುತ್ತೇವೆ. ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುಕೊಳ್ಳುತ್ತೇನೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ಎನ್ನುತ್ತಿದ್ದಾರೆ ಪಿಜಿ ಮಾಲೀಕರು.ಜಯಂತಿ, ಪಿಜಿ ಮಾಲೀಕರು
ಮೊನ್ನೆಯಿಂದ ನಾವು ಸಿಲಿಂಡರ್‌ಗಳ ಪೂರೈಕೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈಗಾಗಲೇ ನಾವು ಪಿಜಿಯಲ್ಲಿ ಇರುವ ಹುಡುಗಿಯರಿಗೆ ಹೊರಗಡೆಯಿಂದ ಊಟವನ್ನು ತರಿಸಿಕೊಡುತ್ತಿದ್ದೇವೆ. ನಮ್ಮಲ್ಲಿ ಸಿಲಿಂಡರ್‌ಗಳು ಇಲ್ಲದಂತಾಗಿದ್ದು, ಇದರಿಂದ ನಷ್ಟ ಅನುಭವಿಸುತ್ತಿದ್ದೇವೆ. ಆದರೆ, ಈಗ ಹೋಟೆಲ್‌ಗಳು ಬಂದ್ ಆಗುವ ಪರಿಸ್ಥಿತಿಯಲ್ಲಿವೆ. ಸದ್ಯಕ್ಕೆ ಹುಡುಗಿಯರಿಗೆ ನಾವು ದಿನಕ್ಕೆ ಸಾಧ್ಯವಾದಷ್ಟು ಊಟವನ್ನು ಪೂರೈಕೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಆತಂಕವಾಗುತ್ತಿದೆ.ಮಹಾಂತೇಶ, ಪಿಜಿ ಮಾಲೀಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.