ಬೆಂಗಳೂರು: ಜೂನ್ 14ರಂದು ರಾಜ್ಯಮಟ್ಟದ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶಿಸಲು ಕರ್ನಾಟಕ ಮಾದರ ಮಹಾಸಭಾ ನಿರ್ಣಯ ತೆಗೆದುಕೊಂಡಿದೆ.

ಮಹಾಸಭಾದ ಅಧ್ಯಕ್ಷರೂ ಆಗಿರುವ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ನೇತೃತ್ವದಲ್ಲಿ ಮಹಾಸಭಾದ ರಾಜ್ಯ ಕಾರ್ಯಕಾರಣಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಧಾದಿಕಾರಿಗಳ ಸಭೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಭಾನುವಾರ ನಡೆಯಿತು.

ಸಭೆಯಲ್ಲಿ ಮಾತನಾಡಿದ ಮುನಿಯಪ್ಪ, ‘ಈ ತಿಂಗಳ 30ರ ಒಳಗಾಗಿ ಮಹಾಸಭಾದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳು ಕಡ್ಡಾಯವಾಗಿ ರಚನೆಯಾಗಬೇಕು. ಪ್ರತಿಯೊಬ್ಬ ಕಾರ್ಯಕಾರಿಣಿ ಸದಸ್ಯರು ಕನಿಷ್ಠ 50 ಹೊಸ ಸದಸ್ಯರನ್ನು ಸಂಘಟನೆಗೆ ಸೇರಿಸಬೇಕು. ಆ ಮೂಲಕ, ರಾಜ್ಯದಾದ್ಯಂತ ಲಕ್ಷಾಂತರ ಸದಸ್ಯರನ್ನು ಸಂಘಟನೆ ಹೊಂದುವಂತೆ ಆಗಬೇಕು’ ಎಂದರು.

‘ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳನ್ನು ಶೀಘ್ರವಾಗಿ ರಚಿಸಿದರೆ 3,652 ಸದಸ್ಯರಾಗಲಿದ್ದಾರೆ. ಶೋಷಿತ ಸಮುದಾಯದ ಅಭಿವೃದ್ಧಿ ಮಹಾಸಭಾದ ಉದ್ದೇಶ. ಸಮುದಾಯದ ಎಲ್ಲರನ್ನು ಮಹಾಸಭಾದ ಸದಸ್ಯರನ್ನಾಗಿ ಮಾಡಬೇಕು. ಬಿಜೆಪಿ, ಜೆಡಿಎಸ್,ಕಾಂಗ್ರೆಸ್ ಪಕ್ಷದಲ್ಲಿರುವ ಸಮುದಾಯದ ಎಲ್ಲ ನಾಯಕರು ಹಾಗೂ ಸ್ವಾಮೀಜಿಗಳನ್ನು ಒಂದೇ ಸೂರಿನಡಿ ಸೇರಿಸಿ ಜೂನ್ 14ರಂದು ಬೃಹತ್ ಮಟ್ಟದ ಸಭೆಗೆ ನಡೆಸಲು ಉದ್ದೇಶಿಸಲಾಗಿದೆ’ ಎಂದರು.

‘ಇದುವರೆಗೂ ನಮಗೆ ಶೇ 15ರಲ್ಲಿ ಶೇ 1ರಷ್ಟು ಮೀಸಲಾತಿ ಪಡೆಯಲು ಕೂಡಾ ಅವಕಾಶ ಇರಲಿಲ್ಲ. ಎಲ್ಲ ದಲಿತ ಸಂಘಟನೆಗಳ, ಹೋರಾಟಗಾರರ ಶ್ರಮದಿಂದ ಒಳಮೀಸಲಾತಿ ಜಾರಿಗೊಳಿಸಲು ಸಾಧ್ಯವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಎಲ್ಲ ಸದಸ್ಯರ ಸರ್ವಾನುಮತದ ಒಪ್ಪಿಗೆಯಿಂದ ಮೀಸಲಾತಿಯು ಪ್ರವರ್ಗ ‘ಎ’ ಗುಂಪಿಗೆ 5.25, ‘ಬಿ’ ಗುಂಪಿಗೆ 5.25, ‘ಸಿ’ ಗುಂಪಿಗೆ 4.5 ಸಿಕ್ಕಿದೆ. ಒಳ ಮೀಸಲಾತಿಯ ಲಾಭ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು’ ಎಂದರು.

‘ಒಂದನೇ ಹಂತ ಪೂರ್ತಿ ಮಾಡಿದ್ದೇವೆ. ಸಾಕಷ್ಟು ಕೆಲಸಗಳು ಬಾಕಿ ಇವೆ. ನಮಗೆ ಸ್ವಾಭಿಮಾನದಿಂದ ಬದುಕುವುದಕ್ಕೆ ದೊಡ್ಡ ಅವಕಾಶ ಸಿಕ್ಕಿದೆ. ಹೀಗಾಗಿ, ಭಿನ್ನಾಭಿಪ್ರಾಯಗಳನ್ನು ಮರೆತು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲ 101 ಜಾತಿಗಳು ಒಟ್ಟಾಗಿ ಇರೋಣ. ಎಲ್ಲರ ಅಭಿವೃದ್ಧಿಗೆ ಒಟ್ಟಾಗಿ ದುಡಿಯೋಣ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಶೋಷಿತ ವರ್ಗದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ಆಶಿಸಿದರು.

ಮಾದರ ಚನ್ನಯ್ಯ ಸ್ವಾಮೀಜಿ, ಸಿದ್ದರಾಜು ಸ್ವಾಮೀಜಿ, ಆನಂದ ಮುನಿ ಸ್ವಾಮೀಜಿ, ಷಡಕ್ಷರಿ ಮುನಿ ಸ್ವಾಮೀಜಿ, ರಾಜ್ಯ ಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಮಾಜಿ ಸಂಸದ ಚಂದ್ರಪ್ಪ, ನಿಗಮದ ಅಧ್ಯಕ್ಷರಾದ ಮಂಜುನಾಥ್, ಮಾಜಿ ಸಚಿವರಾದ ಕೋಟೆ ಶಿವಣ್ಣ, ನಿವೃತ್ತ ಐಎಎಸ್ ಅಧಿಕಾರಿ ಗೋನಾಳು ಭೀಮಪ್ಪ, ತೇಗನೂರು, ಮುಖಂಡರಾದ ಸುಬ್ಬಣ್ಣ, ಶಿವಪ್ಪ, ವಿಶ್ವನಾಥ್, ಶ್ರೀನಿವಾಸ್, ಮಹಾಸಭಾದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಹಾಸಭಾದ ಉದ್ದೇಶ ಕೇವಲ ರಾಜಕಾರಣವಲ್ಲ. ಸಮುದಾಯದ ಬಡವರು ಪೌರ ಕಾರ್ಮಿಕರ ಮಕ್ಕಳಿಗೆ ಶಿಕ್ಷಣದ ಹಕ್ಕು ಮತ್ತು ಉದ್ಯೋಗ ಅವಕಾಶ ಒದಗಿಸಿಕೊಡುವುದು ಆದ್ಯತೆ

–ಕೆ.ಎಚ್. ಮುನಿಯಪ್ಪ ಅಧ್ಯಕ್ಷ ಕರ್ನಾಟಕ ಮಾದರ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.