ಮೈಸೂರು: ‘ನೀಟ್ ಅಕ್ರಮದಿಂದ ನುಣುಚಿಕೊಳ್ಳಲು ಬಿಜೆಪಿ ಹಿಜಾಬ್ ವಿಚಾರ ಮುನ್ನಲೆಗೆ ತಂದಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಇರುವ ನಿಯಮವೇ ನಮ್ಮ ಶಾಲೆಗಳಲ್ಲೂ ಇವೆ. ಅಲ್ಲಿ ಮೊದಲು ಕೇಸರಿ ಶಾಲು ಕೊಟ್ಟು ಮತ್ತೆ ನಮ್ಮ ಬಳಿ ಬರಲಿ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತಿ ದೇವನೂರು ಮಹಾದೇವ ಅವರ ಮನೆಗೆ ಶನಿವಾರ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಸರ್ಕಾರ ಶಾಲೆಗಳಲ್ಲಿ ಹಿಜಾಬ್ಗೆ ಅವಕಾಶ ನೀಡಿರುವ ಕುರಿತು ಬಿಜೆಪಿ ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿ, ‘ಸಮವಸ್ತ್ರ ವಿಷಯದಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ, ಮಹಾರಾಷ್ಟ್ರಕ್ಕೆ, ಕರ್ನಾಟಕಕ್ಕೆ ಪ್ರತ್ಯೇಕ ನಿಯಮ ಇದೆಯೇ. ರಾಜ್ಯದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ 95 % ಹಿಂದೂಗಳಿದ್ದಾರೆ. ಟೀಕೆ ಮಾಡುವವರೆಲ್ಲರೂ ಆ ಮಕ್ಕಳ ಕಾಲಡಿಗೆ ನುಗ್ಗಲಿ ಆವಾಗ ಬುದ್ದಿ ಬರುತ್ತದೆ. ಅವರಿಗೆ ಅದು ಹಿಜಾಬ್ ಆಗಿರಬಹುದು ಆದರೆ ನಮಗದು ಸಮಾನತೆ’ ಎಂದು ಸ್ಪಷ್ಟಪಡಿಸಿದರು.

‘ನಾನು ಮೂರು ಪರೀಕ್ಷೆ ನಡೆಸಿದ್ದೇನೆ. ಯಾವ ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗಿಲ್ಲ. ಧರ್ಮೇಂದ್ರ ಪ್ರಧಾನ್ ಕಲಿತಿಲ್ಲ ಎಂದರೆ ನನ್ನಲ್ಲಿಗೆ ಬರಲಿ ಪರೀಕ್ಷೆ ಹೇಗೆ ನಡೆಸಬೇಕೆಂದು ಹೇಳಿಕೊಡುವೆ’ ಎಂದರು.

ಶಿಕ್ಷಣ ಸಚಿವರ ವಿದ್ಯಾಭ್ಯಾಸದ ಕುರಿತ ಟೀಕೆಗೆ ಪ್ರತಿಕ್ರಿಯಿಸಿ, ‘ನಾನು ಪಿಯುಸಿ ಮುಗಿಸಿ ಉದ್ಯಮದಲ್ಲಿ ಆಸಕ್ತಿ ಇದ್ದ ಕಾರಣ ವಿದ್ಯಾಭ್ಯಾಸ ಮುಂದುವರೆಸಿದೆ. ನನ್ನ ಬಗ್ಗೆ ಮಾತನಾಡುವವರು ಮೋದಿ ಅವರ ನಕಲು ಅಂಕಪಟ್ಟಿಯಾದರೂ ತೋರಿಸಿ’ ಎಂದು ಸವಾಲು ಹಾಕಿದರು.

ರಾಜ್ಯ ಶಿಕ್ಷಣ ನೀತಿ ಯಾವಾಗ ಜಾರಿಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ಜೂನ್ನಲ್ಲಿ ಕ್ಯಾಬಿನೆಟ್ನಲ್ಲಿ ಮಂಡನೆ ಮಾಡುತ್ತೇವೆ. ಕ್ಯಾಬಿನೆಟ್ ಉಪಸಮಿತಿ ಸಲಹೆಯಂತೆ ಮುನ್ನಡೆಯುತ್ತದೆ. ಕಲಿಕೆ ಎಲ್ಲವೂ ಒಂದೆ, ಆದರೆ ಬಿಜೆಪಿ ಸಿದ್ದಾಂತಗಳನ್ನು ಪಠ್ಯದಲ್ಲಿ ಹಾಕಲು ಬಿಡುವುದಿಲ್ಲ. ಹೀಗಾಗಿ ಪುಸ್ತಕ ಪರಿಷ್ಕರಣೆ ಮಾಡಿದೆವು’ ಎಂದು ಹೇಳಿದರು.

40 ಸಾವಿರ ಶಾಲೆ ಮುಚ್ಚತ್ತಿದ್ದಾರೆ ಎಂಬ ಗೊಂದಲದ ಕುರಿತು ಪ್ರತಿಕ್ರಿಯಿಸಿ, ‘ರಾಜ್ಯದಲ್ಲಿ ಇರುವುದೇ 46 ಸಾವಿರ ಶಾಲೆ. ಅವುಗಳನ್ನು ಮುಚ್ಚಲು ಹೇಗೆ ಸಾಧ್ಯ. ಇಂತಹ ತಪ್ಪು ಕಲ್ಪನೆ ಬೇಡ. ಶಾಲೆಗಳು ಇರುತ್ತವೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.