ಮಡಿಕೇರಿ: ಹಾರಂಗಿ ಜಲಾಶಯದ ಎಇಇ, ಕಾವೇರಿ ನೀರಾವರಿ ನಿಗಮದ ಪ್ರಭಾರ ಇಇ ಐ.ಕೆ.ಪುಟ್ಟಸ್ವಾಮಿ ಅವರ ಬಳಿ ಲೋಕಾಯುಕ್ತ ಪೊಲೀಸರ ದಾಳಿ ವೇಳೆ 2 ಕೆ.ಜಿಗೂ ಅಧಿಕ ಬೆಳ್ಳಿ, 6 ನಿವೇಶನ, 1 ಮನೆ, 1 ಐ20 ಕಾರು, ₹5.50 ಲಕ್ಷ ನಗದು ಪತ್ತೆಯಾಗಿದೆ.

ಅಧಿಕಾರಿಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ಮಂಗಳವಾರ ದಾಳಿ ನಡೆದಿದ್ದು, ಇವರ ಬಳಿ 950 ಗ್ರಾಂ ಚಿನ್ನಾಭರಣಗಳಿದ್ದು, ಅದರಲ್ಲಿ ಅರ್ಧ ಕೆ.ಜಿ ಆಭರಣಗಳನ್ನು ಗಿರವಿ ಇಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

‘ನಿಗದಿತ ಆದಾಯಕ್ಕಿಂತ ₹2.40 ಕೋಟಿ ಅಧಿಕ ಆಸ್ತಿ ಪತ್ತೆಯಾಗಿದೆ. ₹ 1.98 ಕೋಟಿ ಮೊತ್ತದ ಸ್ಥಿರ ಆಸ್ತಿ, ₹ 1.01 ಕೋಟಿ ಮೊತ್ತದ ಚರ ಆಸ್ತಿ ಇದೆ’ ಎಂದು ’ಪ್ರಜಾವಾಣಿ‘ಗೆ ತಿಳಿಸಿದರು.

ಕುಶಾಲನಗರದ ಹಾರಂಗಿ ಜಲಾಶಯದ ಕಚೇರಿ, ಕಾವೇರಿ ನೀರಾವರಿ ನಿಗಮದ ಕಚೇರಿ, ಹಾಸನದ ವಿದ್ಯಾನಗರದ ಸ್ವಂತ ಮನೆ ಹಾಗೂ ಮೈಸೂರಿನ ಬಾಡಿಗೆ ಮನೆಯಿಂದ ನಗದು, ಚಿನ್ನಾಭರಣ ಹಾಗೂ ಆಸ್ತಿಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು.

ಲೋಕಾಯುಕ್ತ ಮೈಸೂರು ವಿಭಾಗದ ಎಸ್.ಪಿ. ಉದೇಶ್ ಮಾರ್ಗ ದರ್ಶನದಲ್ಲಿ ಡಿವೈಎಸ್ಪಿ ದಿನಕರಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-4-1861318938

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.