ಮಾಗಡಿ: ತಾಲ್ಲೂಕಿನ ಕಳಪೆ ಕಾಮಗಾರಿ ಪ್ರಶ್ನಿಸಿದರೆ ಬೆದರಿಕೆ ತಂತ್ರ ಅನುಸರಿಸುವುದು ಸರಿಯಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಹೇಳಿಗೆಹಳ್ಳಿ ತಮ್ಮಣ್ಣಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದವರು ಟೀಕೆಗಳಿಗೆ ಸಾಕ್ಷಿ ಸಮೇತ ಉತ್ತರಿಸಬೇಕೇ ಹೊರತು, ಧಮ್ಕಿ ಹಾಕುವುದು ಆರೋಗ್ಯಕರ ರಾಜಕಾರಣವಲ್ಲ ಎಂದರು.

ಮಾಜಿ ಶಾಸಕ ಎ.ಮಂಜುನಾಥ್ ಅವರು ಗೌರಮ್ಮನ ಕೆರೆ ಮಣ್ಣು ಮಾರಾಟ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಮುಖಂಡರು ಬೆದರಿಕೆ ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುವ ಮುಖಂಡ ಮರೂರು ಸಾಗರ್ ಗೌಡ, ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸುಳ್ಳು ಆರೋಪ ಬಿಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ನೀಗಿಸಲು ಶಾಸಕರ ಮೇಲೆ ಒತ್ತಡ ತರಬೇಕೆಂದರು.

ಬೆಳಗುಂಬ ವಿಎಸ್ಎಸ್ಎನ್ ಅಧ್ಯಕ್ಷ ರಂಗಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಅವರು ಆಸ್ತಿ ಭಯದಿಂದ ಕಾಂಗ್ರೆಸ್ ಸೇರಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಮುಖಂಡರಾದ ಕೆಂಪಸಾಗರ ಮಂಜುನಾಥ್, ರಮೇಶ್, ಯುವ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಅನಿಲ್ ಕುಮಾರ್, ಕೋಟಪ್ಪ, ಕಲ್ಕೆರೆ ಉಮೇಶ್, ಕರಡಿ ನಾಗರಾಜ್, ಕೆಂಪಸಾಗರ ಗುಂಡಣ್ಣ, ದಂಡಿಗೇಪುರ ಕುಮಾರ್, ವಕೀಲ ವಸಂತ್ ಕುಮಾರ್, ರೋಹಿತ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-14-1060002624

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.