ಮಹಾಲಿಂಗಪುರ: ರಾಜ್ಯದ ವಿದ್ಯುತ್ ಚಾಲಿತ ಮಗ್ಗದ ನೇಕಾರರಿಗೆ ಉಚಿತ ವಿದ್ಯುತ್ ಜಾರಿಯಲ್ಲಿದ್ದರೂ ಎರಡ್ಮೂರು ತಿಂಗಳಿಂದ ಬಿಲ್ ಬರುತ್ತಿದ್ದು, ಅದನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ನೇಕಾರ ಸೇವಾ ಕೇಂದ್ರದಿಂದ ಪಟ್ಟಣದ ಹೆಸ್ಕಾಂ ಶಾಖೆ ಅಧಿಕಾರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.

ಸೇವಾ ಕೇಂದ್ರದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ‘ರಾಜ್ಯದಾದ್ಯಂತ ಲಕ್ಷಾಂತರ ವೃತ್ತಿಪರ ನೇಕಾರರು ವಿದ್ಯುತ್ ಚಾಲಿತ ಮಗ್ಗದ ನೇಕಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ನಿರಂತರ ಹತ್ತಾರು ವರ್ಷಗಳಿಂದ ಸಂಘಟನೆ ಮೂಲಕ ಹೋರಾಟ ನಡೆಸಿದ ಫಲವಾಗಿ ಎರಡು ವರ್ಷದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಚಿತ ವಿದ್ಯುತ್ ಪೂರೈಕೆ ಘೋಷಿಸಿ ಜಾರಿಗೊಳಿಸಿದ್ದಾರೆ. ಇದೀಗ ಹೆಸ್ಕಾಂನಿಂದ ನೇಕಾರರಿಗೆ ಹಣ ಸಂದಾಯ ಮಾಡುವಂತೆ ಬಿಲ್ ಬರುತ್ತಿವೆ. ಹೆಸ್ಕಾಂ ಅಧಿಕಾರಿಗಳನ್ನು ಈ ತಾಂತ್ರಿಕ ದೋಷ ಸರಿಪಡಿಸಿ ಉಚಿತ ವಿದ್ಯುತ್ ನೀಡಬೇಕು. ಸರ್ಕಾರ ಕೂಡ ಈ ಕುರಿತು ಮಾರ್ಗಸೂಚಿ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ರಾಜೇಂದ್ರ ಮಿರ್ಜಿ, ಸಂಜೀವ ಜಿಡ್ಡಿಮನಿ, ರಾಜು ಹನಗಂಡಿ, ರಾಜು ಕುಕ್ಕುಗೋಳ, ಸಿದ್ದರಾಯ ಅಂಬಿ, ಸಂಗಪ್ಪ ಹಿಡಕಲ್ಲ, ಮಲ್ಲಪ್ಪ ಹಳ್ಳಿ, ಗಿರಮಲ್ಲ ಬಾಗೇವಾಡಿ, ಆನಂದ ಪಂಕಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-19-1958572663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.