ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಎಆರ್ಎಐ (ಆಟೊಮೋಟೋವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ) ಕೇಂದ್ರ ಸ್ಥಾಪನೆಗೆ ಆಸಕ್ತಿ ತೋರಿಸಿದ್ದು, ಅದಕ್ಕೆ ನಿಗದಿಪಡಿಸಿರುವ 100 ಎಕರೆ ಸೇರಿಸಿ, ಕನಿಷ್ಠ 500 ಎಕರೆಯಲ್ಲಿ ಕೈಗಾರಿಕಾ ಹಬ್ ಸ್ಥಾಪನೆ ಬಗ್ಗೆ ಸೂಕ್ತ ಸ್ಥಳ ಹುಡುಕುವಂತೆ ಅಧಿಕಾರಿಗಳಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದರು.

ಎಆರ್ಎಐ ಕೇಂದ್ರ ಸ್ಥಾಪನೆ ಕುರಿತಂತೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ಜೊತೆ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಎಂ.ಬಿ. ಪಾಟೀಲ ಸೋಮವಾರ ಚರ್ಚೆ ನಡೆಸಿದರು.

‘ಕೇವಲ 100 ಎಕರೆಯಲ್ಲಿ ಎಆರ್ಎಐ ಕೇಂದ್ರ ಸ್ಥಾಪಿಸಿದರೆ ಅದು ಒಂದು ಕೇಂದ್ರವಾಗಿ ಇರುತ್ತದೆ. ಅದರ ಬದಲು ಪೂರಕ ಆಟೊಮೊಬೈಲ್ ಕ್ಷೇತ್ರದ ಅಭಿವೃದ್ಧಿ ಉದ್ದೇಶದಿಂದ ಕನಿಷ್ಠ 500 ಎಕರೆಯಲ್ಲಿ ಆ ಕೇಂದ್ರವನ್ನೂ ಸೇರಿಸಿಕೊಂಡು ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವುದು ಸೂಕ್ತ. ಅದಕ್ಕೆ ಕುಮಾರಸ್ವಾಮಿ ಕೂಡ ಒಪ್ಪಿದ್ದಾರೆ. ಈ ಉದ್ದೇಶಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ ಇರುವ ಸರ್ಕಾರಿ, ಖಾಸಗಿ ಜಮೀನು ಗುರುತಿಸುವಂತೆ ವಿಶೇಷ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಪಾಟೀಲ ತಿಳಿಸಿದರು.

‘ವಾಹನಗಳ ಪರೀಕ್ಷೆ ನಡೆಸಿ, ಪ್ರಮಾಣಪತ್ರ ಕೊಡುವ ಎಆರ್ಎಐ ಕೇಂದ್ರ ಸ್ಥಾಪನೆಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಾಗ ನೀಡುವಂತೆ ಕುಮಾರಸ್ವಾಮಿ ಕೇಳಿದ್ದರು. ನಾವು ಬಸರಾಳು ಬಳಿ 105 ಎಕರೆ ತೋರಿಸಿದ್ದೇವೆ. ಆ ಜಾಗ ಅವರಿಗೆ ಒಪ್ಪಿಗೆಯಾಗಿದೆ. ಆದರೆ, ಈಗ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಚಿಂತನೆ ಬಂದಿದ್ದು ಪರ್ಯಾಯ ಜಾಗಕ್ಕೆ ಸಲಹೆ ನೀಡಲಾಗಿದೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳ್ಳೂರಿನ ಬಳಿ 2021ರಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 425 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಪರಿಹಾರ ವಿತರಣೆ ಮಾತ್ರ ಬಾಕಿ ಇದೆ. ಈ ಜಾಗವನ್ನೂ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಮಂಡ್ಯ ಸಮೀಪದ ತೂಬಿನಕೆರೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಪಾಂಡವಪುರ ಹಾಗೂ ಮಂಡ್ಯ ತಾಲ್ಲೂಕುಗಳ ಅಂಚಿನಲ್ಲಿಯೂ ಕೈಗಾರಿಕಾ ಹಬ್ ಸ್ಥಾಪಿಸಬಹುದು ಎಂದು ಸಭೆಯಲ್ಲಿ ಹಾಜರಿದ್ದ ಕೆಲವರು ಸಲಹೆ ನೀಡಿದರು. ಅಧಿಕಾರಿಗಳ ವರದಿ ಬಂದ ಬಳಿಕ ಮತ್ತೊಂದು ಸುತ್ತು ಸಭೆ ಸೇರಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಕೈಗಾರಿಕಾ ಹಬ್ ಬಂದರೆ ಬಂಡವಾಳ ಹೂಡಿಕೆ, ಆರ್ಥಿಕ ವಹಿವಾಟು ಮತ್ತು ಉದ್ಯೋಗ ಸೃಷ್ಟಿ ಎರಡೂ ಸಾಧ್ಯವಾಗುತ್ತದೆ’ ಎಂದು ಪಾಟೀಲ ವಿವರಿಸಿದರು.

‘ಮಂಡ್ಯ ಜಿಲ್ಲೆಯಲ್ಲೇ ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ಆ್ಯಂಡ್ರ್ಯೂ ಲೂಯಿ ಕಂಪನಿ ಲಿಮಿಟೆಡ್ ಸಂಸ್ಥೆಗೆ (ಎ.ಎಲ್.ಸಿ.ಎಲ್) ಕೂಡ 25-50 ಎಕರೆ ಭೂಮಿ ಬೇಕೆಂದು ಕುಮಾರಸ್ವಾಮಿ ಗಮನಕ್ಕೆ ತಂದಿದ್ದಾರೆ. ಈ ಕಂಪನಿಯು ಕೈಗಾರಿಕೆಗಳಿಗೆ ಬೇಕಾದ ಎಲೆಕ್ಟ್ರಿಕ್ ಸಾಧನಗಳು, ಬೃಹತ್ ಫ್ಯಾನುಗಳು, ವಿದ್ಯುತ್ ಪರಿವರ್ತಕ ಮುಂತಾದವನ್ನು ತಯಾರಿಸುತ್ತದೆ. ಅದಕ್ಕೆ ಅಗತ್ಯ ಭೂಮಿಯನ್ನು ತ್ವರಿತವಾಗಿ ಒದಗಿಸಲಾಗುವುದು’ ಎಂದರು.

ಶಾಸಕರಾದ ಪಿ. ರವಿಕುಮಾರ್, ಎಚ್.ಡಿ. ರೇವಣ್ಣ, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ. ಸಿ. ತಮ್ಮಣ್ಣ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಕೆಐಎಡಿಬಿ ಸಿಇಒ ಡಾ.ಮಹೇಶ, ಎಆರ್ಎಐ ಸಂಘಟನೆಯ ನಿರ್ದೇಶಕ ರೆಜಿ ಮಥಾಯ್ ಮತ್ತು ಹಿರಿಯ ಉಪ ನಿರ್ದೇಶಕ ಶ್ಯಾಮಸುಂದರ ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.