ಮಂಡ್ಯ: ಅವಕಾಶ ಸಿಕ್ಕಿಲ್ಲದ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು, ಅದನ್ನು ಅರ್ಥೈಯಿಸಿಕೊಂಡು ಅನಧಿಕೃತವಾಗಿ ‘ಸ್ಪೃಶ್ಯ ಒಬಿಸಿ’ಗೆ ಸೇರ್ಪಡೆಗೊಳಿಸಿರುವ ಜಾತಿಗಳನ್ನು ತೆಗೆದು ಹಾಕಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ್ ಜಾಗೃತಿ ಅಭಿಯಾನ ಸಮಿತಿ ಅಧ್ಯಕ್ಷ ಸಿ.ಎಂ. ಕೃಷ್ಣ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಮೂರು ದಿನಗಳಿಂದ ಆರಂಭಿಸಿರುವ ಒಳಮೀಸಲಾತಿ ಪ್ರತಿಭಟನಾ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು.

‘ಸ್ಪೃಶ್ಯ ಒಬಿಸಿ ಜಾತಿಗಳಾದ ಬಂಜಾರ, ಲಂಬಾಣಿ, ಭೋವಿ, ಕೊರಮ, ಕೊರಚ, ಬೇಡ ಜಂಗಮ, ಬುಡಗ ಜಂಗಮ, ಅಲೆಮಾರಿ ಸಮುದಾಯಗಳನ್ನು ಸುಪ್ರೀಂಕೋರ್ಟ್ ಆದೇಶದಂತೆ ತೆಗೆದುಹಾಕಲು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಸೂಕ್ತ ಪ್ರಸ್ತಾವ ರಾಜ್ಯ ಸರ್ಕಾರ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ನೈಜ ಪರಿಶಿಷ್ಟ ಜಾತಿಗಳ ಹಕ್ಕು ಅವಕಾಶಗಳನ್ನು ಸಂರಕ್ಷಿಸಲು ವಿಫಲವಾಗಿರುವ ಎಸ್ಸಿ ಮೀಸಲು ಕ್ಷೇತ್ರಗಳ ಶಾಸಕರು, ಸಂಸದರು, ಸಚಿವರು ನೈತಿಕ ಹೊಣೆಗಾರಿಕೆ ಅಡಿಯಲ್ಲಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಸಭೆಯಲ್ಲಿ ಮುಖಂಡರಾದ ಎಚ್.ಜಿ. ಗಂಗರಾಜು, ಜೆ.ರಾಮಯ್ಯ, ಮಂಜುನಾಥ್ ನಡುಕಲಪುರ, ಪ್ರಸನ್ನ ಚಕ್ರವರ್ತಿ, ಎಂ.ಮಹೇಶ್ ಯಡಗನಹಳ್ಳಿ, ಸಿ.ವೆಂಕಟೇಶ್, ಪ್ರಶಾಂತ್, ಪೂರ್ಣಚಂದ್ರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-40-1085945176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.