ಮಂಗಳೂರು: ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಹೊತ್ತ ಹಡಗು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಭಾನುವಾರ ಬಂದಿದೆ. ಕಚ್ಚಾ ತೈಲ ಹೊತ್ತ ಇನ್ನೊಂದು ಹಡಗು ಭಾನುವಾರ ರಾತ್ರಿಯೇ ಮಂಗಳೂರು ತಲುಪಿದೆ. ಇನ್ನೂ ನಾಲ್ಕು ಹಡಗುಗಳು ಇಲ್ಲಿಗೆ ಬರುತ್ತಿವೆ.

ಸಿಂಗಪುರ ಧ್ವಜ ಹೊಂದಿರುವ ಪೈಕ್ಸಿಸ್ ಪಯೋನಿಯರ್ ಹೆಸರಿನ ಹಡಗು ಒಟ್ಟು 47,236 ಟನ್ ಎಲ್ಪಿಜಿ ಹೊತ್ತು ತಂದಿದೆ. ಇದು ಅಮೆರಿಕದ ಟೆಕ್ಸಾಸ್ನ ನೆದರ್ಲ್ಯಾಂಡ್ ಬಂದರಿನಿಂದ ಫೆ.14ರಂದು ಪ್ರಯಾಣ ಆರಂಭಿಸಿತ್ತು.

ನವ ಮಂಗಳೂರು ಬಂದರು (ಎನ್ಎಂಪಿ)ನಲ್ಲಿ ಈ ಹಡಗಿನಿಂದ 16,714 ಟನ್ ಎಲ್ಪಿಜಿಯನ್ನು ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್ಗೆ ಇಳಿಸಲಾಗುತ್ತಿದೆ. ಸೋಮವಾರ ಬೆಳಿಗ್ಗೆ ಇಲ್ಲಿಂದ ಈ ಹಡಗು ಹೊರಡಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಡಗಿನ ಒಟ್ಟಾರೆ ಉದ್ದ (LOA) 229.9 ಮೀಟರ್ ಮತ್ತು ಅದರ ಅಗಲ 37.24 ಮೀಟರ್ ಇದೆ.

ಏತನ್ಮಧ್ಯೆ, ರಷ್ಯಾದ ತೈಲ ತುಂಬಿದ ‘ಅಕ್ವಾ ಟೈಟಾನ್’ ಹಡಗು ಶನಿವಾರ ರಾತ್ರಿ ಇಲ್ಲಿಗೆ ಬಂದಿದೆ. ಭಾನುವಾರ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್)ಗೆ 96,099.80 ಟನ್ ಕಚ್ಚಾ ತೈಲವನ್ನು ಇಳಿಸಿದೆ ಎಂದು ಎಂಆರ್ಪಿಎಲ್ ಮೂಲಗಳು ತಿಳಿಸಿವೆ.

ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಬಂದರಿನಿಂದ ಲೋಡ್ ಮಾಡಿದ್ದ ಈ ಹಡಗು ಚೀನಾದ ರಿಜಾವೊ ಬಂದರಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ನವ ಮಂಗಳೂರು ಬಂದರಿಗೆ ಬಂದಿದೆ.

ಇನ್ನೂ ನಾಲ್ಕು ಹಡಗು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ಗೆ 26,687 ಟನ್ ಎಲ್ಪಿಜಿಯನ್ನು ಇಳಿಸಲಿಕ್ಕಾಗಿ ಅಪೋಲೋ ಓಷನ್ ಎಂಬ ಹಡಗು ಇದೇ 25 ರಂದು ನವ ಮಂಗಳೂರು ಬಂದರಿಗೆ ಆಗಮಿಸುವ ಸಾಧ್ಯತೆಯಿದೆ. ವಿಯೆಟ್ನಾಂ ಧ್ವಜದ ಅಡಿಯಲ್ಲಿ ಪ್ರಯಾಣಿಸುತ್ತಿರುವ ಈ ಹಡಗು ಒಟ್ಟು 46,025 ಟನ್ಗಳಷ್ಟು ಎಲ್ಪಿಜಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಎಂಆರ್ಪಿಎಲ್ಗೆ ಕಚ್ಚಾ ತೈಲ ಹೊತ್ತ ಓಯಾಸಿಸ್ ಹಡಗು ಸೋಮವಾರ (ಮಾ.23) ಇಲ್ಲಿಗೆ ಬರಲಿದ್ದು, ಇದರಲ್ಲಿ 99,900 ಟನ್ ಕಚ್ಚಾ ತೈಲ ಇದೆ.

ಬೌರ್ಬನ್ ಮತ್ತು ಕ್ಯು ಚಿ ಹಡಗುಗಳು ಮಾರ್ಚ್ 24 ರಂದು ಮಂಗಳೂರಿಗೆ ಬರಲಿವೆ. ಇವುಗಳಲ್ಲಿ ಕ್ರಮವಾಗಿ 20,000 ಟನ್ ಹಾಗೂ 35,000 ಟನ್ ತೈಲ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.