ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BJP ಶಾಸಕರ ಸೇರ್ಪಡೆ ವಿಷಯ: ಕಾಂಗ್ರೆಸ್ ಸಮುದ್ರ ನದಿ ನೀರನ್ನು ಸೇರಿಸಿಕೊಳ್ಳುತ್ತದೆ

Published 20 ಆಗಸ್ಟ್ 2023, 6:48 IST
Last Updated 20 ಆಗಸ್ಟ್ 2023, 6:48 IST
ಅಕ್ಷರ ಗಾತ್ರ

ಕಾರವಾರ: 'ಕಾಂಗ್ರೆಸ್ ಪಕ್ಷ ಸಮುದ್ರದಂತೆ. ಯಾವುದೇ ನದಿ ಹರಿದು ಬಂದರೂ ನೀರನ್ನು ಸೇರಿಸಿಕೊಳ್ಳುತ್ತದೆ' ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.

ಇಲ್ಲಿ ಭಾನುವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ರಾಜಕಾರಣಕ್ಕೆ ಬರುವ ಮುನ್ನ ಸಮುದ್ರ ಎನ್ನುತ್ತಿದ್ದರು. ನನಗೆ ಅರಿವಾಗಿದೆ. ಬೇರೆ ಪಕ್ಷದ ಶಾಸಕರು, ಮಾಜಿ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ವರಿಷ್ಠರು ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರ ಕುರಿತು ಆಡಿರುವ ಮಾತು ಅವರ ವೈಯಕ್ತಿಕ ವಿಚಾರ. ಹೆಬ್ಬಾರ್ ನಾನು ದಶಕಗಳಿಂದಲೂ ಒಳ್ಳೆಯ ಸ್ನೇಹಿತರು. ಅಭಿವೃದ್ಧಿ ವಿಚಾರದಲ್ಲಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆಯೆ ಹೊರತು ಪಕ್ಷ ಸೇರ್ಪಡೆ ವಿಚಾರದಲ್ಲಿ ಯಾವುದೇ ಚರ್ಚೆ ಮಾಡಿಲ್ಲ ಎಂದರು.

'135 ಶಾಸಕರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಂಡದವರು. ಪಕ್ಷದಲ್ಲಿ ಎರಡು ತಂಡಗಳಿಲ್ಲ' ಎಂದರು.

'ಬಿಜೆಪಿಯವರು ತಲೆ ಕೆಟ್ಟವರು. ಅವರಿಗೆ ಬುದ್ಧಿಯೇ ಇಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಶಾಸಕರನ್ನು ಅಂದು ಖರೀದಿಸಿದ್ದರು' ಎಂದು ವ್ಯಂಗ್ಯವಾಡಿದರು.

ಶಾಸಕ ಸತೀಶ ಸೈಲ್ ಪ್ರತಿಕ್ರಿಯಿಸಿ, 'ಶಿವರಾಮ ಹೆಬ್ಬಾರ್ ನಮ್ಮ ಆಪ್ತ ಸ್ನೇಹಿತರು. ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಪಕ್ಷ ಸೇರ್ಪಡೆ ವಿಚಾರದಲ್ಲಿ ನನ್ನೊಂದಿಗೆ ಚರ್ಚಿಸಿಲ್ಲ. ಅವರು ಕಾಂಗ್ರೆಸ್ ಪಕ್ಷ ಸೇರುವದು ಅನುಮಾನ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT