ಬೆಂಗಳೂರು: ಹೆರಿಗೆ ರಜೆ ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರು ಮಕ್ಕಳ ಪಾಲನೆಗಾಗಿ ತಾವು ಇಚ್ಚಿಸಿದ ಶಾಲೆಯಲ್ಲೇ ಐದು ವರ್ಷ ಕೆಲಸ ಮಾಡುವ ಅವಕಾಶವನ್ನು ಶಿಕ್ಷಣ ಇಲಾಖೆ ಕಲ್ಪಿಸಲಿದೆ.

ಬಿಜೆಪಿಯ ವೈ.ಎಂ.ಸತೀಶ್ ಅವರು ವಿಧಾನಪರಿಷತ್ನಲ್ಲಿ ಸೋಮವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಭರವಸೆ ನೀಡಿದರು.

‘ಮಗುವಿನ ವಯಸ್ಸು ಐದು ವರ್ಷ ಪೂರ್ಣಗೊಳ್ಳುವವರೆಗೆ ಅದರ ಲಾಲನೆ–ಪಾಲನೆಗೆ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. ಇಲಾಖೆಯ ಮಹಿಳಾ ನೌಕರರು ಮತ್ತು ಅವರ ಮಕ್ಕಳ ಆರೈಕೆ, ಪೋಷಣೆ, ಆರೋಗ್ಯ, ವಿಶ್ರಾಂತಿಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ವೇತನ ಸಹಿತ ಹೆರಿಗೆ ರಜೆ ನೀಡಲಾಗಿದೆ. ಈ ಸೌಲಭ್ಯ ಎರಡು ಮಕ್ಕಳಿಗೆ ಅನ್ವಯಿಸುತ್ತದೆ. ಜತೆಗೆ, ಆರು ತಿಂಗಳ ಶಿಶುಪಾಲನಾ ರಜೆಯನ್ನು ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆಯರು ತಮ್ಮ ಮಕ್ಕಳಿಗೆ 18 ವರ್ಷ ತುಂಬುವುದರ ಒಳಗೆ ಪಡೆಯಬಹುದು. ಶಿಕ್ಷಕಿಯರು ಹೆರಿಗೆ ರಜೆಯ ಜತೆಗೆ, ಶಿಶುಪಾಲನಾ ರಜೆಯನ್ನೂ ಸಂಯೋಜಿಸಿಕೊಂಡು ರಜೆ ತೆಗೆದುಕೊಳ್ಳಬಹುದು. ಎರಡೂ ರಜೆಗಳ ಅವಧಿ ಮುಗಿದ ನಂತರ ಮತ್ತೆ ನಾಲ್ಕು ವರ್ಷ ತಮಗೆ ಅನುಕೂಲವಾಗುವ ಶಾಲೆಗಳಿಗೆ ಸ್ಥಳ ನಿಯೋಜನೆ ಮಾಡಿಸಿಕೊಳ್ಳಬಹುದು. ಒಂದೇ ಶಾಲೆಗೆ ಹೆಚ್ಚಿನ ಶಿಕ್ಷಕಿಯರು ಬೇಡಿಕೆ ಸಲ್ಲಿಸಿದರೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಆದೇಶ ನೀಡಲಾಗುವುದು ಎಂದರು.

15 ದಿನಗಳ ಒಳಗೆ ರಜೆ ಮಂಜೂರು: ಹೆರಿಗೆ ಮತ್ತು ಶಿಶುಪಾಲನೆ ರಜೆಗೆ ಶಿಕ್ಷಕಿಯರು ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಕ್ಷೇತ್ರ ಶಿಕ್ಷಣಾಧಿಕಾರಿಯು ಅನುಮೋದನೆ ನೀಡಬೇಕು. ನಿಗದಿತ ಅವಧಿಯ ಒಳಗೆ ರಜೆ ಮಂಜೂರು ಮಾಡದೇ ಇದ್ದರೆ ಮೇಲಧಿಕಾರಿಗೆ ದೂರು ನೀಡಬಹುದು. ಇಂತಹ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಅತಿಥಿ ಶಿಕ್ಷಕರ ಬಳಕೆ: ಶಿಕ್ಷಕಿಯರು ಸುದೀರ್ಘ ಅವಧಿ ಹೆರಿಗೆ, ಶಿಶುಪಾಲನಾ ರಜೆ ಪಡೆದಾಗ ಅವರ ಬದಲಿಗೆ ಅರ್ಹ, ಪ್ರತಿಭಾವಂತ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.

ಕಾಲೇಜು ‘ಅತಿಥಿ’ಗಳಿಗೆ ಪರ್ಯಾಯ ಕೆಲಸ

ಹಲವು ವರ್ಷ ಕೆಲಸ ಮಾಡಿ ಯುಜಿಸಿ ಅರ್ಹತೆ ಇಲ್ಲವೆಂಬ ಕಾರಣಕ್ಕೆ ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕರಿಗೆ 2026–27ನೇ ಶೈಕ್ಷಣಿಕ ಸಾಲಿನಿಂದಲೇ ಪರ್ಯಾಯ ಕೆಲಸ ನೀಡಲು ಚಿಂತನೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು. ವಿಧಾನಪರಿಷತ್ನಲ್ಲಿ ಜೆಡಿಎಸ್ನ ಎಸ್.ಎಲ್.ಭೋಜೇಗೌಡ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು ‘ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಎಲ್ಲರೂ ಸ್ನಾತಕೋತ್ತರ ಪದವಿಯ ಜತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಇಲ್ಲವೇ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ತೇರ್ಗಡೆಯಾಗಿರಬೇಕು ಪಿಎಚ್.ಡಿ ಪಡೆದಿರಬೇಕು ಎನ್ನುವುದು ಯುಜಿಸಿ ನಿಯಮ. ಕೋರ್ಟ್ ಸಹ ನಿಯಮವನ್ನು ಎತ್ತಿಹಿಡಿದ ಕಾರಣ ಅರ್ಹತೆ ಇಲ್ಲದ ಸುಮಾರು 5000 ಅತಿಥಿ ಉಪನ್ಯಾಸಕರನ್ನು ಕೈಬಿಡಲಾಗಿತ್ತು’ ಎಂದರು.

‘ಅರ್ಹತೆ ಇದ್ದವರು ಸಿಗದೇ ಇದ್ದಾಗ ನೇಮಕಾತಿ ಮಾಡಿಕೊಳ್ಳಲು ಕೋರ್ಟ್ ಅವಕಾಶ ನೀಡಿದೆ. ಆದರೆ ಪ್ರತಿಬಾರಿಯೂ ಸರ್ಕಾರ ಅನುಮತಿ ಪಡೆದುಕೊಳ್ಳಬೇಕು. ಎರಡು ದಶಕ ಅತಿಥಿ ಉಪನ್ಯಾಸಕಾರಿ ಬೋಧನೆ ಮಾಡಿದ ಅವರ ಸೇವೆಯನ್ನು ಸಹಾನುಭೂತಿ ಮಾನವೀಯ ನೆಲೆಯಲ್ಲಿ ಪರಿಗಣಿಸಿ ಗೌರವಯುತವಾದ ಪರ್ಯಾಯ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು. ಈ ಕುರಿತು ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.