ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಚೆನ್ನೈ: ತಮಿಳುನಾಡಿನಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ಅಂತಿಮವಾಗಿ ತೆರೆ ಬಿದ್ದಿದ್ದು, ಜೋಸೆಫ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ 120 ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ 234 ಕ್ಷೇತ್ರಗಳಲ್ಲಿ ಟಿವಿಕೆ ಬರೋಬ್ಬರಿ 108 ಕ್ಷೇತ್ರಗಳನ್ನು ಗೆದ್ದಿದೆ. ಆದರೆ ವಿಜಯ್ ಗೆದ್ದ ಎರಡು ಕ್ಷೇತ್ರಗಳಲ್ಲಿ ಒಂದನ್ನು ತೆರವುಗೊಳಿಸಬೇಕಾದ ಕಾರಣ ಟಿವಿಕೆ ಬಲ 107ಕ್ಕೆ ಕುಸಿದಿತ್ತು. ಬಹುಮತಕ್ಕೆ ಇನ್ನೂ 11 ಕ್ಷೇತ್ರಗಳ ಅಗತ್ಯವಿತ್ತು
.ಇಲ್ಲಿ ಸೀಟಿ ಸದ್ದು, ಅಲ್ಲಿ ದೀದಿಗೆ ಗುದ್ದು.
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷಕ್ಕೆ ವಿಸಿಕೆ ಬೇಷರತ್ ಬೆಂಬಲ ನೀಡಲಿದೆ ಎಂದು ಆ ಪಕ್ಷದ ಉನ್ನತ ನಾಯಕರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ‘ದಿ ಹಿಂದೂ’ ವರದಿ ಮಾಡಿದೆ.
.ಆಳ–ಅಗಲ | ಚುನಾವಣೆ: ಐದು ವಿಧಾನಸಭೆಗಳ ಸ್ಥಿತಿಗತಿ.
ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ, ಮೊದಲ ಪ್ರತಿಕ್ರಿಯೆ ನೀಡಿದ ಟಿಎಂಸಿ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಆಯೋಗವು ಪಕ್ಷಪಾತವಾಗಿ ವರ್ತಿಸಿದ್ದು, ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.
.ಮತ ಎಣಿಕೆ ಸಿಬ್ಬಂದಿಯನ್ನು ಚುನಾವಣಾ ಆಯೋಗ ನೇಮಿಸಬಹುದು: ಟಿಎಂಸಿಗೆ ಸುಪ್ರೀಂಕೋರ್ಟ್.
ಕಲಬುರಗಿ: ‘ರಾಜ್ಯಪಾಲರ ಕಚೇರಿಗಳಾದ ಲೋಕಭವನಗಳು ಬಿಜೆಪಿ, ಆರ್ಎಸ್ಎಸ್ ಕಚೇರಿಗಳಾಗಿವೆ. ಬಿಜೆಪಿಯೇತರ ಪಕ್ಷಗಳು ಸರ್ಕಾರ ರಚಿಸದಂತೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಹಾಗೂ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
.ಕೆಪಿಎಸ್ಸಿ ನಡೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ; ಸಿಎಂಗೆ ಪತ್ರ ಬರೆದು ಅಸಮಾಧಾನ.
ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳವನ್ನು ತೆಕ್ಕೆಗೆ ತೆಗೆದುಕೊಂಡಿರುವ ಬಿಜೆಪಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ ಮೊದಲ ಬಾರಿಗೆ ಸರ್ಕಾರ ರಚಿಸಿದೆ. ಈ ಮೂಲಕ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಒಂಬತ್ತು ರಾಜ್ಯಗಳಲ್ಲಿ ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಪಡೆದುಕೊಂಡಿದೆ.
.ಬಂಗಾಳದಲ್ಲಿ ಬಿಜೆಪಿ ಯುಗಾರಂಭ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ.
ಕುಣಿಗಲ್: ತಾಲ್ಲೂಕಿನ ಜಿಗಿಣಿಪಾಳ್ಯ ಬಳಿಯ ರಾಜ್ಯ ಹೆದ್ದಾರಿ 33ರಲ್ಲಿ ಶನಿವಾರ ಕಾರಿಗೆ ಲಾರಿ ಡಿಕ್ಕಿಯಾಗಿ, ನಾಲ್ವರು ಮೃತಪಟ್ಟಿದ್ದಾರೆ. ಮಂಡ್ಯದ ಗಾಯತ್ರಿ, (63) ಪತಿ ಕುಮಾರ ನರಸಿಂಹ ಸ್ವಾಮಿ(65) ಮೃತರು. ಮತ್ತಿಬ್ಬರ ವಿಳಾಸ ಇನ್ನೂ ಪತ್ತೆಯಾಗಿಲ್ಲ.
.ಕಾರಿಗೆ ಲಾರಿ ಡಿಕ್ಕಿ: ಇಬ್ಬರು ಸಾವು.
ಕೋಲ್ಕತ್ತ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಇಂದು (ಮೇ 9, ಶನಿವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ. ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ಸುವೇಂದು ಅವರಿಗೆ ಪ್ರಮಾಣ ಬೋಧಿಸಿದ್ದಾರೆ. ಇದರೊಂದಿಗೆ, ರಾಜ್ಯದಲ್ಲಿ ಮುಖ್ಯಮಂತ್ರಿ ಗಾದಿಗೇರಿದ ಬಿಜೆಪಿಯ ಮೊದಲಿಗೆ ಎಂಬ ಖ್ಯಾತಿ ಸುವೇಂದು ಅವರದ್ದಾಗಿದೆ.
.Video | ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುಗಾರಂಭ: ಸುವೇಂದು ಅಧಿಕಾರಿ ಮುಖ್ಯಮಂತ್ರಿ .
ಕೋಲ್ಕತ್ತ: ಪಶ್ಚಿಮ ಬಂಗಾಳದ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ‘ಜಂಟಿ ವೇದಿಕೆ’ಯೊಂದನ್ನು ನಿರ್ಮಿಸುವ ಮೂಲಕ ಬಿಜೆಪಿ ವಿರುದ್ಧ ಹೋರಾಡಬೇಕಿದೆ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಶನಿವಾರ(ಮೇ 9) ಮನವಿ ಮಾಡಿದ್ದಾರೆ.
.ಮಮತಾ ದೀದಿಗೆ ಮುಸ್ಲಿಮರು ವೋಟ್ ಬ್ಯಾಂಕ್ ಅಷ್ಟೇ; ಮುಸ್ಲಿಂ ನಾಯಕ ಓವೈಸಿ ಕಿಡಿ!.
ಪಟ್ನಾ: ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕ ಆಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ನಿರುದ್ಯೋಗ ದೇಶದ ಅತಿದೊಡ್ಡ ಪಿಡುಗು ಎಂದು ಕರೆದ ಅವರು, ನಿರುದ್ಯೋಗಿ ಯುವಜನತೆಗೆ ಬಿಜೆಪಿಯ ಉತ್ತರ 'ಲಾಠಿ' ಪ್ರಹಾರ ಎಂದು ಟೀಕಿಸಿದ್ದಾರೆ.
.ಮತ ಕಳ್ಳತನದಿಂದ ಗೆದ್ದಿರುವ ಬಿಜೆಪಿ ಸಂಸದರು ನುಸುಳುಕೋರರೇ: ರಾಹುಲ್ ಗಾಂಧಿ.
ಜೈಪುರ (ಪಿಟಿಐ): ಸತತ ಮೂರು ಪಂದ್ಯಗಳಲ್ಲಿ ಬಲಾಢ್ಯ ತಂಡಗಳನ್ನು ಸದೆಬಡಿದು ಭರ್ತಿ ಆತ್ಮವಿಶ್ವಾಸದಲ್ಲಿರುವ ಗುಜರಾತ್ ಟೈಟನ್ಸ್ ತಂಡವು ಶನಿವಾರ ಇಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಹಣಾಹಣಿ ನಡೆಸಲಿದೆ. ತಲಾ 10 ಪಂದ್ಯಗಳನ್ನು ಆಡಿರುವ ಉಭಯ ತಂಡಗಳು ಸೋಲು, ಗೆಲುವಿನ ಲೆಕ್ಕದಲ್ಲಿಯೂ ಸಮಬಲಶಾಲಿಗಳು. ಎರಡೂ ತಂಡಗಳು ಆರರಲ್ಲಿ ಗೆದ್ದು, ನಾಲ್ಕರಲ್ಲಿ ಸೋತಿವೆ.
.IPL 2026 | ವೇಗದ ಅರ್ಧಶತಕ, ಗಿಲ್ಕ್ರಿಸ್ಟ್ ದಾಖಲೆ ಸರಿಗಟ್ಟಿದ RCB ನಾಯಕ ರಜತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.