ಹೆಸರು: ಎಂ.ಬಿ.ಪಾಟೀಲ

ಕ್ಷೇತ್ರ: ಬಬಲೇಶ್ವರ

ಜಾತಿ ಮತ್ತು ಒಳಜಾತಿ: ವೀರಶೈವ ಲಿಂಗಾಯತ(ಕುಡು ಒಕ್ಕಲಿಗ)

ವಿದ್ಯಾರ್ಹತೆ: ಬಿ.ಇ. ಸಿವಿಲ್

ಜನ್ಮ ದಿನಾಂಕ:7 ಅಕ್ಟೋಬರ್ 1964

ಎಷ್ಟು ಸಾರಿ ಆಯ್ಕೆ?: 6 ಬಾರಿ

ನಿರ್ವಹಿಸಿದ ಖಾತೆ: ಜಲ ಸಂಪನ್ಮೂಲ, ಗೃಹ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ

ಘೋಷಿತ ಆಸ್ತಿ: ₹141 ಕೋಟಿ

ಎಂ.ಬಿ.ಪಾಟೀಲ ಪರಿಚಯ

ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಮಲ್ಲನಗೌಡ ಬಸನಗೌಡ ಪಾಟೀಲ (ಎಂ.ಬಿ.ಪಾಟೀಲ) ಅವರು 6 ಸಲ ಶಾಸಕರಾಗಿ ಮತ್ತು ಒಂದು ಬಾರಿ ಲೋಕಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಮಾಜಿ ಸಚಿವ, ಶಿಕ್ಷಣ ಪ್ರೇಮಿ, ನಿರಂತರ 25 ವರ್ಷಗಳ ಕಾಲ ಕರ್ನಾಟಕ ಶಾಸನ ಸಭೆ ಸದಸ್ಯರಾಗಿದ್ದ ದಿ.ಬಿ.ಎಂ.ಪಾಟೀಲ ಅವರ ಜೇಷ್ಠ ಪುತ್ರರಾಗಿರುವ ಎಂ.ಬಿ.ಪಾಟೀಲ ವಿಜಯಪುರದಲ್ಲಿ 7 ಅಕ್ಟೋಬರ್ 1964 ರಂದು ಜನಿಸಿ, ಬೆಂಗಳೂರು, ವಿಜಯಪುರದಲ್ಲಿ ತಮ್ಮ ಶಿಕ್ಷಣ ಪಡೆದುಕೊಂಡಿದ್ದಾರೆ. ಬಿ.ಇ. ಸಿವಿಲ್ ಪದವೀಧರರಾಗಿದ್ದಾರೆ.

ತಂದೆ ಬಿ.ಎಂ.ಪಾಟೀಲ ಅವರ ಅಕಾಲಿಕ ನಿಧನದ ನಂತರ ಅವರು ಮುನ್ನಡೆಸಿದ ಬಿಜಾಪುರ ಲಿಂಗಾಯತ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿಕೊಂಡರು. ಜೊತೆಗೆ ತಂದೆಯವರ ನಿಧನದ ಹಿನ್ನಲೆಯಲ್ಲಿ ತೆರವಾದ ತಿಕೋಟಾ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ತಮ್ಮ 26ನೇ ವಯಸ್ಸಿನಲ್ಲಿ (1991-1994) ಶಾಸಕರಾದರು. ನಂತರ 1998 ರಲ್ಲಿ ವಿಜಯಪುರದಿಂದ ಲೋಕಸಭೆ ಸದಸ್ಯರಾಗಿ ಆಯ್ಕೆಗೊಂಡರು.

2004ರಲ್ಲಿ ತಿಕೋಟಾ ಕ್ಷೇತ್ರದಿಂದ ಶಾಸಕರಾದರು. ಕ್ಷೇತ್ರ ಪುನರ್ ವಿಂಗಡನೆಯ ನಂತರ 2008 ರಲ್ಲಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2013 ರಲ್ಲಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಪುನರ್ ಆಯ್ಕೆಯಾದ ಅವರು ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿ, ನೀರಾವರಿ ಇಲಾಖೆಗೆ ಕಾಯಕಲ್ಪ ಒದಗಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ, ಆಣೆಕಟ್ಟುಗಳ, ನಾಲೆಗಳ ಆಧುನೀಕರಣ, ಭದ್ರಾಮೇಲ್ದಂಡೆ ಯೋಜನೆ, ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ, ಮೆಕೆದಾಟು, ಎತ್ತಿನಹೊಳೆ, ಅತ್ಯಂತ ಎತ್ತರದ ಪ್ರದೇಶಕ್ಕೆ ನೀರಾವರಿ ಒದಗಿಸುವ ತುಬಚಿ-ಬಬಲೇಶ್ವರ ಏತನೀರಾವರಿ, ಆಡಳಿತ ಯಂತ್ರದಲ್ಲಿ ವ್ಯಾಪಕ ಸುಧಾರಣೆಗಳು, ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ರಾಜ್ಯದ ಜಲಸಂಪನ್ಮೂಲ ಇಲಾಖೆಗೆ ಮಾಂತ್ರಿಕ ಸ್ಪರ್ಶ ನೀಡಿದರು. ಈ ಕಾರಣಕ್ಕೆ ಅವರನ್ನು ‘ನೀರಿನ ಪಾಟೀಲ್‘, ‘ಕೆನಾಲ್ ಪಾಟೀಲ್’ ಎಂದೇ ರೈತ ಸಮುದಾಯದಲ್ಲಿ ಹೆಸರಾಗಿದ್ದಾರೆ.

ಕಾವೇರಿ, ಕೃಷ್ಣಾ, ಮಹದಾಯಿ ಅಂತರ ರಾಜ್ಯ ಜಲವಿವಾದಗಳಲ್ಲಿ ಸ್ವತಃ ಸುಪ್ರಿಂಕೋರ್ಟ್ ಕಲಾಪಗಳಲ್ಲಿ ಭಾಗವಹಿಸಿ, ತಮಗೆ ವಹಿಸಿರುವ ಜವಾಬ್ದಾರಿಯನ್ನು ಬದ್ದತೆಯಿಂದ ನಿರ್ವಹಿಸಿದ್ದಾರೆ.

2018 ರಲ್ಲಿ ಬಬಲೇಶ್ವರ ಕ್ಷೇತ್ರದಿಂದ ಪುನರಾಯ್ಕೆಯಾದ ನಂತರ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಎಂ. ಬಿ. ಪಾಟೀಲ ಅವರು ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಗೃಹ ಸಚಿವರಾಗಿ ಅಲ್ಪಾವಧಿಯಲ್ಲಿ ಅಧಿಕಾರದಲ್ಲಿದ್ದರೂ ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರಲು ಕಾರಣರಾಗಿದ್ದಾರೆ. ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ಔರಾದ್ಕರ್ ಸಮಿತಿಯ ವರದಿಯನ್ನು ಜಾರಿಗೆ ತರುವಲ್ಲಿ ಗುರುತರ ಪಾತ್ರ ವಹಿಸಿದ್ದಾರೆ. ಈ ವರದಿಯು ಪೊಲೀಸ್ ಸಿಬ್ಬಂದಿಯ ವೇತನದಲ್ಲಿ ಹೆಚ್ಚಳ, ಬಡ್ತಿ ಹಾಗೂ ಇನ್ನಿತರ ಬದಲಾವಣೆಗಳನ್ನು ಶಿಫಾರಸ್ಸು ಮಾಡಿತ್ತು.

ಎಂ.ಬಿ.ಪಾಟೀಲ ಅವರು ಗೃಹ ಮಂತ್ರಿಯಾಗಿ ತಮಗೆ ಲಭ್ಯವಿದ್ದ ಝೀರೋ ಟ್ರಾಫಿಕ್ ಸೌಲಭ್ಯವನ್ನು ನಿರಾಕರಿಸಿದರು. ಗೃಹ ಮಂತ್ರಿಗಳ ಪ್ರಯಾಣದ ಸಂದರ್ಭದಲ್ಲಿ ಅನುಸರಿಸುತ್ತಿದ್ದ ಪೊಲೀಸ್ ವಂದನೆ (ಸಲ್ಯೂಟ್) ಸಂಸ್ಕೃತಿಯನ್ನು ನಿಲ್ಲಿಸಿದರು.

2022 ಫೆಬ್ರುವರಿಯಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡು, ಕರ್ನಾಟಕದಾದ್ಯಂತ ಸಂಚರಿಸಿ, ಪಕ್ಷವನ್ನು ಸಂಘಟಿಸಿ, 2023 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ.

2023ರಲ್ಲಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ 2026 ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಕಳೆದ 32 ವರ್ಷಗಳಿಂದ ಕಟ್ಟಾ ಕಾಂಗ್ರೆಸ್ಸಿಗರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿರುವ ಎಂ.ಬಿ.ಪಾಟೀಲ ಅವರು ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಎರಡು ಬಾರಿ ತಿಕೋಟಾ ಹಾಗೂ ನಾಲ್ಕು ಬಾರಿ ಬಬಲೇಶ್ವರ ಕ್ಷೇತ್ರದಿಂದ ಸೇರಿದಂತೆ ಒಟ್ಟು 6 ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಬಿ.ಎಲ್.ಡಿ.ಇ. ಸಂಸ್ಥೆ ಅಧ್ಯಕ್ಷರಾಗಿ ಗುಣಮಟ್ಟದ ಶಿಕ್ಷಣದ ಜೊತೆಗೆ ಆಧುನಿಕ ಸ್ಪರ್ಶವನ್ನು ನೀಡಿದ್ದಾರೆ. ಇವರ ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ ಬದ್ಧತೆಗಳಿಂದಾಗಿ ‘ಬಸವಶಾಂತಿ’, ‘ಆಧುನಿಕ ಭಗೀರಥ’, ‘ಮೃತ್ಯುಂಜಯ’ ಪ್ರಶಸ್ತಿ, ‘ಬಿ.ಡಿ.ಜತ್ತಿ ಸ್ಮಾರಕ’ ಪ್ರಶಸ್ತಿ, ‘ಪರ್ಯಾವರಣ ರಕ್ಷಕ ಸಮ್ಮಾನ-2019’ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಸೇವೆಯನ್ನು ಮನ್ನಿಸಿ ಕೋಲ್ಹಾಪುರದ ಡಿ.ವೈ.ಪಾಟೀಲ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕರ್ನಾಟಕದಲ್ಲಿ ಕೈಗಾರಿಕೆ ಬೆಳವಣಿಗೆ, ವಿದೇಶಿ ಬಂಡವಾಳ ಆಕರ್ಷಣೆಯ ಸಾಧನೆಗಾಗಿ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ‘ವರ್ಷದ ವ್ಯಕ್ತಿ-2024’ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿ ಗೌರವಿಸಿದ್ದಾರೆ.

ಎಂ.ಬಿ.ಪಾಟೀಲ ಅವರಿಗೆ ಪತ್ನಿ ಆಶಾ, ಬಸನಗೌಡ ಹಾಗೂ ಧ್ರುವ ಇಬ್ಬರು ಪುತ್ರರು ಇದ್ದಾರೆ. ಇವರ ಸಹೋದರ ಸುನೀಲಗೌಡ ಪಾಟೀಲ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಬಿಜಾಪುರ ಲಿಂಗಾಯತ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಕಳೆದ 33 ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.