ಬೆಂಗಳೂರು: ನರೇಗಾ ಕಾಯ್ದೆ ರದ್ದುಗೊಳಿಸಿ, ಅದರ ಬದಲಿಗೆ ‘ವಿಬಿ– ಜಿ ರಾಮ್ ಜಿ’ ಕಾಯ್ದೆಯನ್ನು ಜುಲೈ 1ರಿಂದ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದು, ಯೋಜನೆ ಜಾರಿಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ತಯಾರಿ ಆರಂಭಿಸಿದೆ.

ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಈ ಕುರಿತು ಸೂಚನೆ ನೀಡಿದ್ದಾರೆ. ಹೊಸ ಕಾಯ್ದೆಯ ನಿಯಮಗಳ ಪ್ರಕಾರ, ಕೃಷಿ ಚಟುವಟಿಕೆಗಳ ಹಂಗಾಮು ಉತ್ತುಂಗದಲ್ಲಿರುವಾಗ ಯಾವುದೇ ಕೆಲಸವನ್ನು ಆರಂಭಿಸಬಾರದು ಅಥವಾ ಕಾರ್ಯಗತಗೊಳಿಸಬಾರದು ಎಂದು ನಿರ್ದೇಶಿಸಿದ್ದಾರೆ.

‘ಬಿತ್ತನೆ ಮತ್ತು ಸುಗ್ಗಿ ಕಾಲದಲ್ಲಿ ಒಟ್ಟು 60 ದಿನ ಕೃಷಿ ಕಾರ್ಮಿಕರ ಲಭ್ಯತೆಯನ್ನು ಖಾತ್ರಿಗೊಳಿಸಲು ‘ವಿಬಿ ಜಿ ರಾಮ್ ಜಿ’ ಅಡಿ ಕಾಮಗಾರಿಗಳನ್ನು ಕೈಗೊಳ್ಳಬಾರದೆಂದು ಹೊಸ ಕಾಯ್ದೆ ಉಲ್ಲೇಖಿಸಿದೆ. ರಾಜ್ಯ ಸರ್ಕಾರಗಳು ಪ್ರತಿ ಆರ್ಥಿಕ ವರ್ಷದಲ್ಲಿ ಕೃಷಿ ಚಟುವಟಿಕೆಗಳು ತೀವ್ರವಾಗಿರುವ ಸಮಯವೂ ಒಳಗೊಂಡಂತೆ ಒಟ್ಟು 60 ದಿನಗಳ ಯಾವುವು ಎಂದು ಜೂನ್ 2ರೊಳಗೆ ದೃಢೀಕರಿಸಿ ತಿಳಿಸಬೇಕು’ ಎಂದೂ ಅವರು ಹೇಳಿದ್ದಾರೆ.

‘ಜಿಲ್ಲೆಗಳು, ಬ್ಲಾಕ್ಗಳು ಅಥವಾ ಗ್ರಾಮ ಪಂಚಾಯಿತಿಗಳು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಗೆ ಕೃಷಿ, ಹವಾಮಾನ ವಲಯಗಳು, ಸ್ಥಳೀಯ ಕೃಷಿ ಚಟುವಟಿಕೆಗಳ ಮಾದರಿ ಅಥವಾ ಇತರ ಸಂಬಂಧಿತ ಅಂಶಗಳ ಆಧಾರದಲ್ಲಿ ಈ ಅವಧಿಯನ್ನು ನಿರ್ಧರಿಸಿ ರಾಜ್ಯ ಸರ್ಕಾರ ಬೇರೆ ಬೇರೆ ಅಧಿಸೂಚನೆಗಳನ್ನು ಹೊರಡಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಅಂತಹ ಪ್ರತಿಯೊಂದು ಅಧಿಸೂಚನೆಯೂ ಈ ಕಾಯ್ದೆಯ ಉದ್ದೇಶಗಳಿಗೆ ಪೂರಕವಾಗಿರಬೇಕು’ ಎಂದೂ ಅವರು ಸೂಚನೆ ನೀಡಿದ್ದಾರೆ.

‘ಹೊಸ ಕಾಯ್ದೆಯು ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 125 ದಿನಗಳ ಖಚಿತ ಉದ್ಯೋಗ ನೀಡುತ್ತದೆ. ಈ ಮೊದಲು ನರೇಗಾ ಅಡಿಯಲ್ಲಿ 100 ದಿನಗಳ ಮಿತಿ ಇತ್ತು. ಗುಂಡಿ ತೋಡುವ ಕೆಲಸಗಳಿಗೆ ಸೀಮಿತವಾಗದೆ, ಜಲ ಸಂರಕ್ಷಣೆ, ಗ್ರಾಮೀಣ ರಸ್ತೆಗಳು, ಗೋದಾಮುಗಳು ಮತ್ತು ಮಾರುಕಟ್ಟೆಗಳಂತಹ ದೀರ್ಘಕಾಲ ಬಾಳಿಕೆ ಬರುವ ಉಪಯುಕ್ತ ಆಸ್ತಿಗಳ ನಿರ್ಮಾಣಕ್ಕೆ ಈ ಯೋಜನೆಯು ಆದ್ಯತೆ ನೀಡುತ್ತದೆ. ಯೋಜನೆಯಲ್ಲಿ ಪಾರದರ್ಶಕತೆ ತರಲು ಕಾರ್ಮಿಕರ ಹಾಜರಾತಿಗೆ ಬಯೊಮೆಟ್ರಿಕ್ ವ್ಯವಸ್ಥೆ, ಕೆಲಸದ ಸ್ಥಳದ ಮೇಲೆ ನಿಗಾ ಇಡಲು ಜಿಪಿಎಸ್ ಮತ್ತು ಅಕ್ರಮಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಆಯುಕ್ತಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏಪ್ರಿಲ್ನಲ್ಲಿ ಸೃಜನೆಯಾಗದ 1.30 ಕೋಟಿ ಮಾನವ ದಿನ

ಕೌಶಲರಹಿತ ಗ್ರಾಮೀಣ ಜನರಿಗೆ ಉದ್ಯೋಗ ಅವಕಾಶ ಒದಗಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ಏಪ್ರಿಲ್ನಲ್ಲಿ 1.30 ಕೋಟಿ ಮಾನವ ದಿನಗಳನ್ನು ಸೃಜಿಸಲು ಅವಕಾಶ ನೀಡುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಅದಕ್ಕೆ ಅನುಮೋದನೆ ಸಿಕ್ಕಿತ್ತು.

ಸೃಜಿಸಬೇಕಾದ ಮಾನವ ದಿನಗಳ ಗುರಿಯನ್ನು ಎಲ್ಲ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ, ಬಹುತೇಕ ಜಿಲ್ಲೆಗಳು ಗುರಿ ಸಾಧಿಸಲು ವಿಫಲವಾಗಿವೆ. ಹಲವು ಗ್ರಾಮ ಪಂಚಾಯಿತಿಗಳಲ್ಲಿ ಶೂನ್ಯ ಮಾನವ ದಿನಗಳು ಸೃಜನೆಯಾಗಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲಾ, ‘ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನವ ದಿನಗಳ ಸೃಜನೆಯ ಗುರಿ ತಲುಪಲು ವಿಫಲವಾದರೆ ಮುಂಬರುವ ತಿಂಗಳುಗಳಲ್ಲಿ ಮಾನವ ದಿನಗಳ ಹಂಚಿಕೆ ಮತ್ತು ಹಣ ಬಿಡುಗಡೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆಡಳಿತಾತ್ಮಕ ನಿರ್ವಹಣೆಯಲ್ಲೂ ತೊಂದರೆ ಉಂಟಾಗುವ ಸಂಭವಿದೆ’ ಎಂದು ಕಳವಳ ವ್ಯಕ್ತಪಡಿಸಿ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಪತ್ರ ಬರೆದಿದ್ದಾರೆ ಎಂದು
ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸಾಮಗ್ರಿ ಅನುದಾನ: ಪೂರ್ತಿ ವೆಚ್ಚ ಮಾಡಿ’

ನರೇಗಾ ಯೋಜನೆಯಡಿ ಸಾಮಗ್ರಿ ವೆಚ್ಚದ ಬಿಲ್ಗಳ ಬಾಕಿ ಪಾವತಿಗೆ ಗ್ರಾಮ ಪಂಚಾಯಿತಿಗಳ ಬಿಲ್ ಪಾವತಿಸುವ ಮತ್ತು ವಿತರಿಸುವ ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.

ಈ ಅನುದಾನವನ್ನು ಯಾವುದೇ ವಿಳಂಬವಿಲ್ಲದೇ ವೆಚ್ಚ ಮಾಡಬೇಕು. ಸಂಪೂರ್ಣವಾಗಿ ವೆಚ್ಚ ಮಾಡದೇ ಇದ್ದರೆ ಸಾಮಗ್ರಿ ವೆಚ್ಚದ ಅಡಿ ಅನುದಾನ ಮಂಜೂರು ಮಾಡುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಹಣ ಬಳಕೆ ಪ್ರಮಾಣಪತ್ರ ಸಲ್ಲಿಸಲು ವಿಳಂಬ ಆಗಲಿದೆ. ಹೀಗಾಗಿ, ಜೂನ್ 8ರ ಒಳಗೆ ಯಾವುದೇ ಮೊತ್ತ ಉಳಿಕೆ ಆಗದಂತೆ ಸಂಪೂರ್ಣ ವೆಚ್ಚ ಭರಿಸಿ ಹಣ ಪಾವತಿಸಬೇಕು. ವೆಚ್ಚ ಮಾಡಿರುವ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ದೃಢೀಕರಣದೊಂದಿಗೆ ಆಯುಕ್ತಾಲಯಕ್ಕೆ ಮಾಹಿತಿ ನೀಡಬೇಕು. ಜೂನ್ 8ರ ನಂತರವೂ ಅನುದಾನ ವೆಚ್ಚ ಆಗದಿದ್ದರೆ, ಉಳಿಕೆ ಅನುದಾನವನ್ನು ಯಾವುದೇ ಮಾಹಿತಿ ನೀಡದೆ ಹಿಂಪಡೆಯಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.