ಚಿಕ್ಕಬಳ್ಳಾಪುರ: ಸಂಸದ ಪ್ರತಾಪ್ ಸಿಂಹ ಅವರಿಗೆ ಒಕ್ಕೂಟ ವ್ಯವಸ್ಥೆ ಅರಿವಿಲ್ಲ. ಕೇಂದ್ರ ಸರ್ಕಾರವನ್ನು ಕೇಳುವಂತಿಲ್ಲ ಎಂದರೆ ನಾವು ಕೇಂದ್ರ ಸರ್ಕಾರಕ್ಕೆ ತೆರಿಗೆ ಏಕೆ ಕಟ್ಟಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸದರಾಗಿ ನೀವು ಗೆದ್ದಿರುವುದು ಏಕೆ? ರಾಜ್ಯ ಸರ್ಕಾರದ ಪಾಲನ್ನು ಇವರು ತರಬೇಕು ಅಲ್ಲವೇ? ಇವರು ಏಕೆ ಆಯ್ಕೆ ಆಗಿದ್ದಾರೆ’ ಎಂದರು.
ಕೇಂದ್ರ ಸರ್ಕಾರವನ್ನು ಉಚಿತವಾಗಿ ಅಕ್ಕಿ ನೀಡಿ ಎಂದು ಕೇಳಿಲ್ಲ. ತಿಂಗಳಿಗೆ ಅಕ್ಕಿಗೆ ₹830ಕೋಟಿ ವೆಚ್ಚವಾಗುತ್ತದೆ. ಈ ಹಣವನ್ನು ಕೊಡುತ್ತೇವೆ ಎಂದರೂ ಅಕ್ಕಿ ಕೊಡುತ್ತಿಲ್ಲ. ಕಾಂಗ್ರೆಸ್‌ಗೆ ಹೆಸರು ಬರುತ್ತದೆ ಎನ್ನುವ ಕಾರಣದಿಂದ ಕೇಂದ್ರ ಸರ್ಕಾರ ಹೀಗೆ ಮಾಡುತ್ತಿದೆ ಎಂದು ದೂರಿದರು.
ಈ ಹಿಂದೆ ಪತ್ರಕರ್ತರಾಗಿದ್ದಾಗ ಚೆನ್ನಾಗಿ ಓದುತ್ತಿದ್ದರು. ನಂತರ ಓದನ್ನು ನಿಲ್ಲಿಸಿದ್ದಾರೆ ಎನಿಸುತ್ತದೆ. ಪ್ರತಾಪ್ ಸಿಂಹ ಅವರೇ ಅಪ್‌ಡೇಟ್ ಆಗಿ. ನಮ್ಮನ್ನು ಹೇಗೆ ಬಯ್ಯಬೇಕು ಎನ್ನುವುದಷ್ಟೇ ಇವರಿಗೆ ಗೊತ್ತಿರುವುದು ಎಂದು ಲೇವಡಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.