ಕೊಪ್ಪಳ: ’ಸಚಿವ ಸ್ಥಾನ ಕೊಡಬೇಕೆಂದು ಕೇಳುವ ಅರ್ಹತೆ ಎಲ್ಲ ಶಾಸಕರಿಗೂ ಇದೆ. ಕೇಳುವುದು ಕೂಡ ತಪ್ಪಲ್ಲ. ರೂಟೇಷನ್ ಪ್ರಕಾರ ಅವಕಾಶ ಕೊಟ್ಟರೆ ಎಲ್ಲರಿಗೂ ನ್ಯಾಯ ಸಿಕ್ಕಂತಾಗುತ್ತದೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹೊಸಬರು ಕೂಡ ಅವಕಾಶ ಕೇಳುವುದರಲ್ಲಿ ತಪ್ಪಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ವರಿಷ್ಠರು ಈ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ. ಶಾಸಕರ ಭೋಜನಕೂಟಕ್ಕೆ ನನಗೂ ಆಹ್ವಾನವಿತ್ತು. ವೈಯಕ್ತಿಕ ಕಾರಣಕ್ಕೆ ಹೋಗಲಿಲ್ಲ. ಹೈಕಮಾಂಡ್ ಸಚಿವ ಸ್ಥಾನದ ಅವಕಾಶ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದರು.

ಬಜೆಟ್ನಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದರೆ ಪೂರಕ ಬಜೆಟ್ನಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಎಲ್ಲ ಶಾಸಕರಿಗೂ ಸಿ.ಎಂ. ಸ್ಪಂದನೆ ಮಾಡುತ್ತಾರೆ ಎಂದ ಅವರು ‘ನಾನು ಮಂತ್ರಿಯಾಗಲಿ’ ಎಂದು ನೀವು (ಮಾಧ್ಯಮದವರು) ಹೇಳುವುದೇ ಇಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹೊರಗಿನ ಜಿಲ್ಲೆಯವರು ಇನ್ನೊಂದು ಜಿಲ್ಲೆಗೆ ಹೋಗಿ ಉಸ್ತುವಾರಿ ಸಚಿವರಾಗುತ್ತಾರೆ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

‘ಕೊಪ್ಪಳ ಜಿಲ್ಲೆಯಲ್ಲಿ ಬಸವರಾಜ ರಾಯರಡ್ಡಿ, ಶಿವರಾಜ ತಂಗಡಗಿ ಹಾಗೂ ನಾನು ಮೂವರೂ ಹಿರಿಯರೇ ಇದ್ದೇವೆ. ಹೀಗಾಗಿ ರೂಟೇಷನ್ ಪ್ರಕಾರ ಅವಕಾಶ ಕೊಟ್ಟರೆ ಸಚಿವರಾಗಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.