ಮುಂಗಾರು ಇನ್ನೂ ಕೂಡ ಆರಂಭವಾಗಿಲ್ಲ. ಆದರೆ, ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆ ಬರಲು ಆರಂಭವಾಗಿದೆ. ಬುಧವಾರ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೆ. ಮಾತ್ರವಲ್ಲ, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಅತಿಯಾದ ಮಳೆಯು ಪ್ರವಾಹ, ಸಿಡಿಲು, ಗುಡುಗು ಮತ್ತು ನೀರಿನ ಸಂಗ್ರಹದ ಅಪಾಯಗಳನ್ನು ಹೆಚ್ಚಿಸುತ್ತದೆ. ಮಳೆ ಬರುವ ಸಂದರ್ಭದಲ್ಲಿ ಅಥವಾ ಮಳೆಗಾಲದಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಮಳೆಯಿಂದ ರಕ್ಷಣೆ ಪಡೆಯಬಹುದು.

ಛತ್ರಿ ಅಥವಾ ರೈನ್ಕೋಟ್: ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಲು, ಹೊರಗೆ ಹೊರಡುವಾಗ ತಪ್ಪದೆ ಕೊಡೆ ಅಥವಾ ರೈನ್ಕೋಟ್ ಅನ್ನು ತೆಗೆದುಕೊಂಡು ಹೋಗುವುದು ಉತ್ತಮ.

ಹಳೆ ಕಟ್ಟಡ ಅಥವಾ ಕಾಂಪೌಂಡ್ನಿಂದ ದೂರವಿರಿ: ಮಳೆ ಬಂದಾಗ ಶಿಥಿಲಗೊಂಡ ಕಟ್ಟಡ ಅಥವಾ ಹಳೆಯ ಗೋಡೆಗಳ ಬಳಿ ಆಶ್ರಯ ಪಡೆದುಕೊಳ್ಳುವುದನ್ನು ತಪ್ಪಿಸುವುದು ಉತ್ತಮ. ಅವು ಯಾವಾಗ ಬೇಗಾದರು ಧರೆಗುರುಳುವ ಸಾಧ್ಯತೆ ಇರುತ್ತದೆ.

ವಾಹನದ ಪರಿಶೀಲನೆ ಅಗತ್ಯ: ಮಳೆಗಾಲದಲ್ಲಿ ಪ್ರಯಾಣದ ಸಂದರ್ಭದಲ್ಲಿ, ವಾಹನ ಚಾಲಕರು ವೈಪರ್, ಬ್ರೇಕ್ ಮತ್ತು ಟೈರ್ಗಳನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ.

ಅಂಡರ್ಪಾಸ್ಗಳಲ್ಲಿ ವಾಹನ ಚಾಲನೆ ತಪ್ಪಿಸಿ: ನೀರಿನ ಹರಿವು, ಇಳಿಜಾರು ರಸ್ತೆಗಳಲ್ಲಿ ಹಾಗೂ ಅಂಡರ್ಪಾಸ್ಗಳಲ್ಲಿ ವಾಹನ ಓಡಿಸುವುದನ್ನು ತಪ್ಪಿಸುವುದು ಉತ್ತಮ.

ಮಳೆಯಲ್ಲಿ ವಾಹನ ಸವಾರಿ ತಪ್ಪಿಸಿ: ಮಳೆ ಬರುವಾಗ, ಸಣ್ಣ ನೀರಿನ ಹರಿವು ಕೂಡ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಮಳೆ ಸಂಪೂರ್ಣ ನಿಲ್ಲುವವರೆಗೂ ಕಾಯಿರಿ: ಮಳೆ ಸಣ್ಣಗೆ ಬರುತ್ತಿದೆ ಎಂದು ಹೋಗುವುದನ್ನು ತಪ್ಪಿಸಿ, ಬದಲಾಗಿ ಮಳೆ ನಿಂತ ಒಂದು ಗಂಟೆಯ ಬಳಿಕ ವಾಹನದಲ್ಲಿ ಸವಾರಿ ಮಾಡುವುದು ಉತ್ತಮ. ಸಣ್ಣ ಮಳೆ, ಅಥವಾ ಮಳೆ ನಿಂತ ಬಳಿಕವೂ ಮ್ಯಾನ್ಹೋಲ್ಳಿಂದ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ.

ಮರಗಳ ಆಶ್ರಯ ಪಡೆಯಬೇಡಿ: ಗುಡುಗು, ಗಾಳಿ ಮಳೆಯ ಸಂದರ್ಭದಲ್ಲಿ ಮರಗಳ ಕೆಳಗೆ ನಿಂತು ಆಶ್ರಯ ಪಡೆಯುವುದನ್ನು ತಪ್ಪಿಸಿ. ಮರಗಳು ಯಾವುದೇ ಸಂದರ್ಭದಲ್ಲಿಯಾದರೂ ಧರೆಗುರುಳುವ ಸಾಧ್ಯತೆ ಇರುತ್ತದೆ.

ವಿದ್ಯುತ್ ಕಂಬಗಳಿಂದ ದೂರವಿರಿ: ಮಳೆಗಾಲದಲ್ಲಿ, ಅಥವಾ ಮಳೆ ಬರುವಾಗ ಯಾವುದೇ ಸಂದರ್ಭದಲ್ಲೂ ವಿದ್ಯುತ್ ಕಂಬಗಳನ್ನು ಮುಟ್ಟಬೇಡಿ. ಅವುಗಳಿಂದ ಯಾವುದೇ ಸಂದರ್ಭದಲ್ಲಿಯಾದರೂ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರಾಣ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.

ಪ್ರಯಾಣಕ್ಕೆ ಮುನ್ನ ಹವಾಮಾನ ಮುನ್ಸೂಚನೆ ಪರಿಶೀಲಿಸಿ. ಅನಗತ್ಯ ಪ್ರಯಾಣವಾಗಿದ್ದರೆ, ಅದನ್ನು ಮುಂದೂಡುವುದು ಉತ್ತಮ.

ಹರಿಯುವ ನೀರಿನಲ್ಲಿ ನಡೆಯುವುದು ಅಥವಾ ವಾಹನ ಚಲಾಯಿಸುವುದನ್ನು ತಪ್ಪಿಸಿ.

ಮಕ್ಕಳು ಮತ್ತು ಪ್ರಾಣಿಗಳನ್ನು ಎಚ್ಚರಿಕೆಯಿಂದ ಕಾಪಾಡಿ.

ಮಳೆಯ ಮುನ್ಸೂಚನೆ ಇದ್ದರೆ, ಕಚೇರಿಯಿಂದ ಬೇಗನೆ ಹೊರಡಿ.

ಬೈಕ್ನಲ್ಲಿ ಸದಾ ಕಾಲವು ರೈನ್ ಕೋಟ್ ಇರುಂತೆ ನೋಡಿಕೊಳ್ಳಿ

ಬೀದಿಬದಿ ವ್ಯಾಪಾರಸ್ಥರು ಮತ್ತು ಪಾದಚಾರಿಗಳು ಶಿಥಿಲ ಕಟ್ಟಡಗಳು ಅಥವಾ ಗೋಡೆಗಳ ಬಳಿ ಆಶ್ರಯ ಪಡೆಯುವುದನ್ನು ತಪ್ಪಿಸಲು ಸಲಹೆ ಕೊಡಿ.

ಸರ್ಕಾರ ನೀಡುವ ಆರೆಂಜ್, ಎಲ್ಲೋ, ರೆಡ್ ಅಲೆರ್ಟ್ ಎಚ್ಚರಿಕೆಗಳನ್ನು ಪಾಲಿಸಿ.

ಆರೋಗ್ಯದ ಸಲಹೆ

ಮಳೆಯಲ್ಲಿ ನೆನೆದ ಬಳಿಕ ತಕ್ಷಣ ಬಟ್ಟೆ ಬದಲಾಯಿಸಿ, ದೇಹವನ್ನು ಒಣಗಿಸಿ ಮತ್ತು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.

ಮಳೆಗಾಲದ ಸಂದರ್ಭದಲ್ಲಿ ಕುದಿಸಿ ಅಥವಾ ಶುದ್ಧೀಕರಿಸಿ ನೀರಿನ ಸೇವನೆ ಆರೋಗ್ಯಕ್ಕೆ ಉತ್ತಮ. ಬೀದಿಬದಿ ಆಹಾರಗಳಿಂದ ದೂರವಿರಿ.

ಕೈಗಳನ್ನು ಆಗಾಗ ಸೋಪು ಮತ್ತು ನೀರಿನಿಂದ ತೊಳೆಯಿರಿ. ಮುಖ, ಮೂಗು, ಕಣ್ಣುಗಳನ್ನು ಕೈಯಿಂದ ಮುಟ್ಟಬೇಡಿ.

ಸೊಳ್ಳೆಗಳಿಂದ ರಕ್ಷಣೆಗೆ ಸೊಳ್ಳೆಪರದೆ ಬಳಸುವುದು ಸೂಕ್ತ.

ಮಕ್ಕಳು ಮತ್ತು ವೃದ್ಧರ ಆರೋಗ್ಯದತ್ತ ವಿಶೇಷ ಗಮನ ಹರಿಸಿ. ಶೀತ, ಜ್ವರ, ಡೆಂಗ್ಯೂ, ಮಲೇರಿಯಾ, ಚರ್ಮದ ಸೋಂಕುಗಳಿಂದ ಎಚ್ಚರವಹಿಸಿ. ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.