ಮುದ್ದೇಬಿಹಾಳ: ‘ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಕೊಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಬಿ.ಸಿ.ಎಂ., ಸಮಾಜ ಕಲ್ಯಾಣ ಇಲಾಖೆಯಲ್ಲಿ ₹1,600 ವೇತನವನ್ನು ಕಡಿಮೆ ನೀಡುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಹುಲಗಪ್ಪ ಚಲವಾದಿ ಆರೋಪಿಸಿದರು.

ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮುಂದೆ ಹೊರಗುತ್ತಿಗೆ ನೌಕರರಿಂದ ಬುಧವಾರ ಪ್ರತಿಭಟನೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಹದಿನೈದು ಇಪ್ಪತ್ತು ವರ್ಷದಿಂದ ಅಡುಗೆ ಕೆಲಸಗಾರರಾಗಿ, ರಾತ್ರಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಒಂದು ವರ್ಷದಿಂದ ವೇತನ ಕಡಿಮೆ ಹಾಕುತ್ತಿದ್ದಾರೆ. ಕೂಡಲೆ ಹಿಂಬಾಕಿ ಸಹಿತ ನ್ಯಾಯಯುತ ವೇತನ ನೀಡಬೇಕು. ತಪ್ಪಿದಲ್ಲಿ ತಾಲ್ಲೂಕಿನ ಎಲ್ಲ ಹಾಸ್ಟೆಲ್ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಅಧ್ಯಕ್ಷ ಮಲಕಪ್ಪ ಚಲವಾದಿ, ಬಿ.ಎನ್. ತಳವಾರ, ರಾಜು ಬಿ.ಎನ್., ಸಂಗಪ್ಪ ಮಡ್ಡಿ ಮನಿ, ಶಶಿಕುಮಾರ ಹಂಗರಗಿ, ಭೀಮಣ್ಣ ಚಲವಾದಿ, ರಾಜಮ್ಮ ಚಲವಾದಿ, ಸುರೇಖಾ ನಾಟಿಕಾರ, ಕವಿತಾ ಕಾಳೆ, ಸಂಗಮ್ಮ ರೂಡಗಿ, ರೇಣುಕಾ ಕಟ್ಟಿಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-1915082103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.